ಗದಗ : ಆತ ಕಾಡು ಬಿಟ್ಟು ನಾಡಿಗೆ ಬಂದು ಮೂರು ವರ್ಷಗಳಾಯ್ತು. ಸ್ವಚ್ಛಂಧದ ಬದುಕಿನಲ್ಲಿ ಪಯಣಿಸಬೇಕಿದ್ದ ಆತ ಬಂಧಿಯಾಗಿ ಭಯದಲ್ಲಿದ್ದಾನೆ. ಆತನಿಗೆ ಆಶ್ರಯ ನೀಡಿದ ಆಶ್ರಯಧಾತ ಎಷ್ಟೆ ಪ್ರೀತಿ ತೋರಿದ್ರು ತನ್ನವರ ಸೇರುವ ತವಕದಲ್ಲೆ ಇದ್ದಾನೆ. ಆತ ಯಾರು ಗೊತ್ತಾ..?


ಆತನೆ ಮುದ್ದು ಮುದ್ದಾದ ಜಿಂಕೆ…..  ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಂಡುಬಂದ ಜಿಂಕೆಯೊಂದರ ಸ್ಥಿತಿ. ಮೂರು ವರ್ಷದ ಹಿಂದೆ ಕುರಿಕಾಯಲು ಹೋದ ಹನಮಂತಪ್ಪ ಕನ್ನಾಳಿ ಎಂಬಾತನಿಗೆ ನಾಯಿ ಕಡಿತದಿಂದ ಗಾಯಗೊಂಡ ಜಿಂಕೆಯ ಮರಿ ಸಿಕ್ಕಿದೆ. ಅದನ್ನು ಸಾಕಿ, ಸಲುಹಿ ಪೋಷಣೆ ಮಾಡುತ್ತಿದ್ದಾನೆ. ಕಾನೂನಿನ ಕನಿಷ್ಠ ಜ್ಞಾನವೂ ಇಲ್ಲದ ಹನಮಂತಪ್ಪ ಕುಟುಂಬಕ್ಕೆ ಯಾವುದೇ ಸ್ವಾರ್ಥ ಉದ್ದೇಶವಿಲ್ಲದೇ ಜಿಂಕೆಯನ್ನು ಮೂರು ವರ್ಷ ಸಲುಹಿದ್ದಾನೆ. ಸಿಕ್ಕ ಜಿಂಕೆ ಬಗ್ಗೆ ಹನಮಂತಪ್ಪ ಸ್ವಾರ್ಥಪರ ಯೋಚನೆ ಮಾಡಿದ್ರೆ ಮೂರು ವರ್ಷಗಳ ಕಾಲ ಸಾಕಲು ಹೇಗೆ ಸಾಧ್ಯ? ಅನ್ನೋದು ಸ್ಥಳೀಯರ ಪ್ರಶ್ನೆ. ಹೀಗಾಗಿ ಅರಣ್ಯ ಇಲಾಖೆ ಹನಮಂತಪ್ಪನ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದೇ ಈ ಜಿಂಕೆಯನ್ನು ವಶಕ್ಕೆ ಪಡೆಯ ಬೇಕು ಅಂತಾರೆ ಸ್ಥಳೀಯರು.


ಈ ಸಂಬಂಧ ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಾವುದೇ ವನ್ಯ ಜೀವಿಗಳನ್ನ ಸಾಕುವುದು ಅಪರಾಧ. ಅದಕ್ಕೆ ಗಾಯವಾಗಿರುವುದು ಕಂಡು ಬಂದಲ್ಲಿ ಪೋಷಣೆ ಮಾಡಿದ ನಂತರ ಮತ್ತೆ ಕಾಡಿಗೆ ಬಿಡಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/Karnatakada-Miditha-4.jpeghttp://bp9news.com/wp-content/uploads/2018/06/Karnatakada-Miditha-4-150x150.jpegBP9 Bureauಗದಗಪ್ರಮುಖಗದಗ : ಆತ ಕಾಡು ಬಿಟ್ಟು ನಾಡಿಗೆ ಬಂದು ಮೂರು ವರ್ಷಗಳಾಯ್ತು. ಸ್ವಚ್ಛಂಧದ ಬದುಕಿನಲ್ಲಿ ಪಯಣಿಸಬೇಕಿದ್ದ ಆತ ಬಂಧಿಯಾಗಿ ಭಯದಲ್ಲಿದ್ದಾನೆ. ಆತನಿಗೆ ಆಶ್ರಯ ನೀಡಿದ ಆಶ್ರಯಧಾತ ಎಷ್ಟೆ ಪ್ರೀತಿ ತೋರಿದ್ರು ತನ್ನವರ ಸೇರುವ ತವಕದಲ್ಲೆ ಇದ್ದಾನೆ. ಆತ ಯಾರು ಗೊತ್ತಾ..? ಆತನೆ ಮುದ್ದು ಮುದ್ದಾದ ಜಿಂಕೆ…..  ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಂಡುಬಂದ ಜಿಂಕೆಯೊಂದರ ಸ್ಥಿತಿ. ಮೂರು ವರ್ಷದ ಹಿಂದೆ ಕುರಿಕಾಯಲು ಹೋದ ಹನಮಂತಪ್ಪ ಕನ್ನಾಳಿ ಎಂಬಾತನಿಗೆ ನಾಯಿ ಕಡಿತದಿಂದ...Kannada News Portal