ಗದಗ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಗದಗನಲ್ಲಿ ಸೈಕಲ್ ಜಾಥಾ ನಡೆಯಿತು. ಗದಗ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಮುನ್ಸಿಪಲ್ ಕಾಲೇಜ್ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಬಿಂಕದಕಟ್ಟಿ ಕಿರು ಮೃಗಾಲಯದ ವರೆಗೆ ಜಾತಾ ಮೆರವಣಿಗೆ ನಡೆಯಿತು.


ಜಿಲ್ಲಾಧಿಕಾರಿ ಮನೋಜ್ ಜೈನ್ ಹಸಿರು ನಿಶಾನೆ ತೋರಿಸಿ ಸೈಕಲ್ ನಡೆಸುವ ಮೂಲಕ ಚಾಲನೆ ನೀಡಿದರು. ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಅನೇಕ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. “ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಆರೋಗ್ಯ ಉಳಸಿ”, “ಹಸಿರೆ ಉಸಿರು”, “ಸುಡಬೇಡ ಸುಡಬೇಡ ಪ್ಲಾಸ್ಟಿಕ್ ಸುಡಬೇಡ”, “ರಕ್ಷಿಸಿ ರಕ್ಷಿಸಿ ವಾಯುಮಾಲಿನ್ಯ ರಕ್ಷಿಸಿ”, “ಮರಕಡಿದು ಕಟುಕನೆನಿಸಿಕೊಳ್ಳಬೇಡ”, “ಮನುಷ್ಯ ಎರಡು ಮರವ ಬೇಳಸಿನೋಡು” ಎಂಬ ಹೀಗೆ ಅನೇಕ ಘೋಷಣೆಗಳೊಂದಿಗೆ ಜನಜಾಗೃತಿ ಮೂಡಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗಾಗಿ ಪ್ರತಿಜ್ಞಾ ಹಸ್ತಾಕ್ಷರ ಸಂಗ್ರಹಿಸಲಾಯಿತು. ಈ ಜಾತಾದಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್, ಸಿಇಓ, ಮಂಜುನಾಥ ಚವ್ಹಾಣ್, ಅರಣ್ಯ ಅಧಿಕಾರಿ ಸೋನಾಲ್ ವೃಷ್ಣಿ, ಶಿಕ್ಷಣಾಧಿಕಾರಿ ಜಿ. ರುದ್ರಪ್ಪ ಸೇರಿದಂತೆ ಅನೇಕ ಅಧಿಕಾರಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/06/Karnatakada-Miditha-12.jpeghttp://bp9news.com/wp-content/uploads/2018/06/Karnatakada-Miditha-12-150x150.jpegBP9 Bureauಗದಗಗದಗ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಗದಗನಲ್ಲಿ ಸೈಕಲ್ ಜಾಥಾ ನಡೆಯಿತು. ಗದಗ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಮುನ್ಸಿಪಲ್ ಕಾಲೇಜ್ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಬಿಂಕದಕಟ್ಟಿ ಕಿರು ಮೃಗಾಲಯದ ವರೆಗೆ ಜಾತಾ ಮೆರವಣಿಗೆ ನಡೆಯಿತು.  ಜಿಲ್ಲಾಧಿಕಾರಿ ಮನೋಜ್ ಜೈನ್ ಹಸಿರು ನಿಶಾನೆ ತೋರಿಸಿ ಸೈಕಲ್ ನಡೆಸುವ ಮೂಲಕ ಚಾಲನೆ ನೀಡಿದರು. ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಅನೇಕ ಇಲಾಖೆ ಅಧಿಕಾರಿಗಳು...Kannada News Portal