ಪಣಜಿ : ಗೋವಾ ಸಿಎಂ ಮನೋಹರ್​ ಪರಿಕ್ಕರ್​ ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನಲೆ ಸರ್ಕಾರ ರಚಿಸಲು ಅನುಮತಿ ನೀಡಬೇಕು ಎಂದು ಕಾಂಗ್ರೆಸ್​ ಪಟ್ಟು ಹಿಡಿದಿದೆ. ಕಾಂಗ್ರೆಸ್​ ನಡೆಯಿಂದ ಬಿಜೆಪಿ ನಾಯಕರಲ್ಲಿ ಗೊಂದಲಗಳು ಮೂಡಿವೆ  ಇದರ ಶಮನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮುಂದಾಗಿದ್ದಾರೆ.

ಗೋವಾದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಲು ಅಮಿತ್​ ಶಾ  ರಾಜ್ಯ ಸಚಿವರು ಹಾಗೂ ಗೋವಾ ಫಾರ್ವರ್ಡ್​ ಪಾರ್ಟಿ (ಜಿಎಫ್​ಪಿ) ನಾಯಕ ವಿಜಯ ಸರ್ದೆಸಾಯಿಗೆ ತಿಳಸಿದ್ದು, ಅಲ್ಲಿನ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸರ್ದೆಸಾಯಿ ಬಿಜೆಪಿ ಮುಖ್ಯಸ್ಥರ ಕಾರ್ಯವನ್ನು ಪ್ರಶಂಸಿದ್ದಾರೆ. ಮಹಾರಾಷ್ಟ್ರ ಗೋಮುಖ ಪಕ್ಷ(ಎಂಜಿಪಿ) ನಾಯಕ ಮತ್ತು ಲೋಕಪಯೋಗಿ ಸಚಿವ ಸುದೀನ್​ ಧವಲಿಕರ್​ ತಮ್ಮ ಪಕ್ಷನ್ನು ಬಿಜೆಪಿಯೊಂದಿಗೆ ಸೇರ್ಪಡೆಗೊಳಿಸಿದ ನಂತರ ಮುಖ್ಯಮಂತ್ರಿಯಾಗಬಹುದೆಂಬ ವದಂತಿ ಹಬ್ಬಿದ ಬಳಿಲಕ ನಗರ ಯೋಜನಾ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ದೇಸಾಯಿಯ ಜಿಎಫ್​ಪಿ ಮತ್ತು ಧವಲಿಕರ್​​ರ ಎಂಜಿಪಿ  ವಿಧಾನಸಭೆಯಲ್ಲಿ ಮೂವರು ಶಾಸಕರನ್ನು ಹೊಂದಿದ್ದಾರೆ. 40 ವಿಧಾನಸಭೆ ಸದಸ್ಯ ಸ್ಥಾನ ಬಿಜೆಪಿ 14 ಸ್ಥಾನವನ್ನು ಹೊಂದಿದೆ. ಪಕ್ಷೇತರ ಮೈತ್ರಿಯೊಂದಿಗೆ 24 ಸ್ಥಾನ ಪಡೆದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. 16 ಸ್ಥಾನವೊಂದಿರುವ ಕಾಂಗ್ರೆಸ್​ ವಿಪಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪರಿಕ್ಕರ್​ ಅನಾರೋಗ್ಯದ ಹಿನ್ನಲೆ ಏಮ್ಸ್​ಗೆ ದಾಖಲಾಗುತ್ತಿದ್ದಂತೆ ಎಂಜಿಪಿ ಮುಖ್ಯಸ್ಥ ದೀಪಕ್​ ಧವ್ಲಿಕರ್​ ಸರ್ಕಾರ ಮುನ್ನಡೆಸಲು ಕಹಿರಿಯ ಸಚಿವರನ್ನು ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪರಿಕ್ಕರ್​ ಸರ್ಕಾರದಲ್ಲಿ ಹಿರಿಯ ಸಚಿವರೆಂದರೇ ಅದರು ಧವ್ಲಿಕರ್​ ಅಣ್ಣ ಸುದೀನ್​ ಧ್ಲವಿಕರ್​ ಆಗಿದ್ದಾರೆ.

ಬಹುಮತ ಪಕ್ಷವಾಗಿ ಕಾಂಗ್ರೆಸ್​ ಗೋವಾದಲ್ಲಿ ಹೊರಹೊಮ್ಮಿದರೂ  ಪರಿಕ್ಕರ್​ ಮಿತ್ರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸುವಲ್ಲಿ ಪರಿಕ್ಕರ್​ ಯಶಸ್ವಿಯಾಗಿದ್ದರು,  ಮೇದೋಜಿರಕಾಂಗ ಸಮಸ್ಯೆಯಿಂದ ಪರಿಕ್ಕರ್​ ಬಳಲುತ್ತಿದ್ದು, ಅವರು ಚಿಕಿತ್ಸೆಗೆ ದೆಹಲಿಯ ಏಮ್ಸ್​ಗೆ ದಾಖಲಾಗಿದ್ದಾರೆ.

Please follow and like us:
0
http://bp9news.com/wp-content/uploads/2018/09/amit-shah.pnghttp://bp9news.com/wp-content/uploads/2018/09/amit-shah-150x150.pngBP9 Bureauಪ್ರಮುಖರಾಜಕೀಯರಾಷ್ಟ್ರೀಯಪಣಜಿ : ಗೋವಾ ಸಿಎಂ ಮನೋಹರ್​ ಪರಿಕ್ಕರ್​ ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನಲೆ ಸರ್ಕಾರ ರಚಿಸಲು ಅನುಮತಿ ನೀಡಬೇಕು ಎಂದು ಕಾಂಗ್ರೆಸ್​ ಪಟ್ಟು ಹಿಡಿದಿದೆ. ಕಾಂಗ್ರೆಸ್​ ನಡೆಯಿಂದ ಬಿಜೆಪಿ ನಾಯಕರಲ್ಲಿ ಗೊಂದಲಗಳು ಮೂಡಿವೆ  ಇದರ ಶಮನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮುಂದಾಗಿದ್ದಾರೆ. ಗೋವಾದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಲು ಅಮಿತ್​ ಶಾ  ರಾಜ್ಯ ಸಚಿವರು ಹಾಗೂ ಗೋವಾ ಫಾರ್ವರ್ಡ್​ ಪಾರ್ಟಿ (ಜಿಎಫ್​ಪಿ) ನಾಯಕ ವಿಜಯ ಸರ್ದೆಸಾಯಿಗೆ ತಿಳಸಿದ್ದು, ಅಲ್ಲಿನ ಮಾಹಿತಿ ನೀಡುವಂತೆ...Kannada News Portal