ಸ್ಯಾಂಡಲ್​ವುಡ್​ನ ನಟ  ಕಿಚ್ಚ ಸುದೀಪ್​ರಿಂದ ಗುಡ್​ ನ್ಯೂಸ್​. ಕಿಚ್ಚ ಕರ್ನಾಟಕದ ಅಭಿನಯ ಚಕ್ರವರ್ತಿ  ಸುದೀಪ್​ ತಮ್ಮ ಅಭಿಮಾನಿಗಳಿಗಾಗಿ  ಶುಭ ಸುದ್ದಿಯೊಂದನ್ನು  ಕೊಟ್ಟಿದ್ದಾರೆ. ಸುದೀಪ್​ ಅವರಿಗೆ   ಸ್ಯಾಂಡಲ್​ವುಡ್​ ಮಾತ್ರವಲ್ಲದೇ   ಕಾಲಿವುಡ್​, ಟಾಲಿವುಡ್​ಮತ್ತು ಬಾಲಿವುಡ್​ನಲ್ಲಿ ಸುದೀಪ್​ಗೆ ಅಭಿಮಾನಿಗಳು ಹೆಚ್ಚು.  ತನ್ನ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ   ಕೋಟಿಗೊಬ್ಬ ಸುದೀಪ್​ ಇದೀಗ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಜೊತೆ  ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ .

ಈಗಾಗಲೇ ತೆಲುಗಿನಲ್ಲಿ ಈಗ ಮಾಡಿ ತೆಲುಗು ಅಭಿಮಾನಿಗಳ ಸ್ಟಾರ್​ ಆದ  ಸುದೀಪ್​ ಆಗಲೇ ವಿನ್ ಆಗಿದ್ದರು.   ಈಗ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ  ಗಳಿಸಿದ್ದಾರೆ. ಈಗ ಮೆಗಾ  ಸ್ಟಾರ್​ ಚಿರಂಜೀವಿ ಅವರ 151 ನೇ  ಚಿತ್ರ ಸೈರಾ ನರಸಿಂಹ ರೆಡ್ಡಿಯಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಈ ಸಿನಿಮಾಗೆ ಸುದೀಪ್, ಚಿರಂಜೀವಿ ಜೊತೆ ಅಭಿನಯಿಸುತ್ತಾರೆ ಎಂದು ಸುದ್ದಿ ಕಳೆದ ವರ್ಷದಿಂದ ಗಾಂಧಿನಗರದಲ್ಲಿ ಹರಿದಾಡುತಿತ್ತು. ಆದರೆ ಈ ಸಿನಿಮಾಗೆ ತುಂಬಾ ದಿನ ಕಾಲ್ ಶೀಟ್ ಕೊಡಬೇಕು ಎಂಬ ಕಾರಣದಿಂದ ಈ ಸಿನಿಮಾ ಮಾಡಲು ಸುದೀಪ್ ನಿರಾಕರಿಸಿದ್ದರು ಎಂದು ವರದಿಯಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. ಆದರೆ ಈಗ ಸುದೀಪ್, ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರಿಂದ ಅಭಿಮಾಗಳಿಗೆ ಖುಷಿಯಾಗಿದೆ. ಆದರೆ ಆ ಸಿನಿಮಾದಲ್ಲಿ ಸುದೀಪ್​ ರೋಲ್​ ಎಂಬುದು ಭಾರೀ ಕುತೂಹಲ. ಅದರಲ್ಲಿ ನಟಿಸ್ತಾ ಇರುವ ಕಿಚ್ಚನಿಗೆ ಯಾವ ಪಾತ್ರ ಕೊಡುತ್ತಿದ್ದಾರೆ ಎಂಬುದೇ  ಇಂಟ್ರೆಸ್ಟಿಂಗ್​…ಈ ಬಗ್ಗೆ ಸುದೀಪ್​ ಆಗಲೀ ಟಾಲಿವುಡ್​ ಸಿನಿತಂಡವಾಗಲೀ, ಮೆಗಾಸ್ಟಾರ್​ ಆಗಲೀ ಮಾಹಿತಿ ಕೊಟ್ಟಿಲ್ಲ. ಬಹುದಿನಗಳಿಂದ ಸುದೀಪ್​  ಕಾಲ್​ಶೀಟ್​ಗೆ ಕಾಯುತ್ತಿದ್ದ ಮೆಗಾಗಾರು ಖಂಡಿತಾ ಸುದೀಪ್​ಗೆ ತಕ್ಕ ಪಾತ್ರ ಕೊಡಲಿದ್ದಾರೆ ಎಂಬುದು ಅಬಿಮಾನಿಗಳಖ ಅಭಿಪ್ರಾಯ.

`ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಬರುವ ಒಂದು ಪ್ರಮುಖ ಪಾತ್ರಕ್ಕೆ ಸುದೀಪ್ ಅವರೇ ಸೂಕ್ತ ಎಂದು ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ಧರಿಸಿದ್ದರು. ಆದ್ದರಿಂದ ನಿರ್ದೇಶಕರ ಒತ್ತಾಯದ ಮೇರೆಗೆ ಸುದೀಪ್ ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಸುದೀಪ್ `ಪೈಲ್ವಾನ್’ ಹಾಗೂ `ಕೋಟಿಗೊಬ್ಬ-3′ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Please follow and like us:
0
http://bp9news.com/wp-content/uploads/2018/07/rilp9ubagjjej.jpghttp://bp9news.com/wp-content/uploads/2018/07/rilp9ubagjjej-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನ ನಟ  ಕಿಚ್ಚ ಸುದೀಪ್​ರಿಂದ ಗುಡ್​ ನ್ಯೂಸ್​. ಕಿಚ್ಚ ಕರ್ನಾಟಕದ ಅಭಿನಯ ಚಕ್ರವರ್ತಿ  ಸುದೀಪ್​ ತಮ್ಮ ಅಭಿಮಾನಿಗಳಿಗಾಗಿ  ಶುಭ ಸುದ್ದಿಯೊಂದನ್ನು  ಕೊಟ್ಟಿದ್ದಾರೆ. ಸುದೀಪ್​ ಅವರಿಗೆ   ಸ್ಯಾಂಡಲ್​ವುಡ್​ ಮಾತ್ರವಲ್ಲದೇ   ಕಾಲಿವುಡ್​, ಟಾಲಿವುಡ್​ಮತ್ತು ಬಾಲಿವುಡ್​ನಲ್ಲಿ ಸುದೀಪ್​ಗೆ ಅಭಿಮಾನಿಗಳು ಹೆಚ್ಚು.  ತನ್ನ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿರುವ   ಕೋಟಿಗೊಬ್ಬ ಸುದೀಪ್​ ಇದೀಗ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಜೊತೆ  ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ . var domain = (window.location != window.parent.location)? document.referrer :...Kannada News Portal