ಬೆಂಗಳೂರು : ನೂತನ ಮೈತ್ರಿ ಸರ್ಕಾರ, ರಾಜ್ಯ ಸರ್ಕಾರದ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ, ನೌಕರರ ವೇತನ ಮತ್ತು ಭತ್ಯೆಗಳನ್ನು 01- 04 -2018 ರಿಂದಲೇ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಿದೆ. ಅಷ್ಟೇ ಅಲ್ಲಾ ರಾಜ್ಯ ಸರ್ಕಾರ ನೌಕರರುಗಳಿಗೆ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ 1ನೇ ಜನವರಿ 2018ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಮೂಲ ವೇತನದ ಶೇಖಡ 1.75 ರಷ್ಟು ಮಂಜೂರು ಮಾಡಲು ಸರ್ಕಾರವು ಮುಂದಾಗಿದೆ.

ಇದರ ಜತೆಗೆ ರಾಜ್ಯ ಸರ್ಕಾರ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತ ವೇತನ ಪಡೆಯುತ್ತಿರುವಂತಹ ವ್ಯಕ್ತಿ / ಕುಟುಂಬಗಳಿಗೂ, ನಿವೃತ್ತ ಸರ್ಕಾರಿ ಶಿಕ್ಷಕ ವರ್ಗದವರಿಗೂ ತುಟ್ಟಿ ಭತ್ಯೆಯನ್ನು ದಿನಾಂಕ 1ನೇ ಜನವರಿ 2018 ರಿಂದ ಜಾರಿಗೆ ಬರುವಂತೆ, ಅವರ ಮೂಲ ಪಿಂಚಿಣಿಯ ಶೇ. 1.75 ರಷ್ಟು ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲು ಸಹ ಸರ್ಕಾರ ಆದೇಶಿಸಿದೆ.

ಉಳಿದಂತೆ ಯುಜಿಸಿ / ಎಐಸಿಟಿಇ / ಎನ್ ಜೆಪಿಸಿ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಮತ್ತು ಸದರಿ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ನೌಕರರಿಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು ಎಂದು ಕರ್ನಾಟ ರಾಜ್ಯಪಾಲರ ಆದೇಶಾನುಸಾರ, ಸರ್ಕಾರದ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಡಿ ಎಸ್ ಜೋಗೋಜೆ ಸರ್ಕಾರದ ವಿವಿಧ 50 ಇಲಾಖೆಗಳಿಗೆ ಆದೇಶದ ಸುತ್ತೋಲೆ ಪ್ರತಿಯನ್ನು ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/ಸರ್ಕಾರಿ-ನೌಕರರು-1.jpghttp://bp9news.com/wp-content/uploads/2018/06/ಸರ್ಕಾರಿ-ನೌಕರರು-1-150x150.jpgPolitical Bureauಪ್ರಮುಖರಾಜಕೀಯGood news for government employees !!! Retired Employees Increase Tip Offersಬೆಂಗಳೂರು : ನೂತನ ಮೈತ್ರಿ ಸರ್ಕಾರ, ರಾಜ್ಯ ಸರ್ಕಾರದ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ, ನೌಕರರ ವೇತನ ಮತ್ತು ಭತ್ಯೆಗಳನ್ನು 01- 04 -2018 ರಿಂದಲೇ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಿದೆ. ಅಷ್ಟೇ ಅಲ್ಲಾ ರಾಜ್ಯ ಸರ್ಕಾರ ನೌಕರರುಗಳಿಗೆ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ 1ನೇ ಜನವರಿ 2018ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಮೂಲ ವೇತನದ ಶೇಖಡ 1.75 ರಷ್ಟು ಮಂಜೂರು ಮಾಡಲು ಸರ್ಕಾರವು...Kannada News Portal