ಬೆಂಗಳೂರು : ಕಾಂಗ್ರೆಸ್​-ಜೆಡಿಎಸ್​ ಸರ್ಕಾರ ಖಾತೆ ಹಂಚಿಕೆ ಕ್ಯಾತೆ ಒಂದೆಡೆ ನಡೆಯುತ್ತಿದ್ದರೆ, ಅತ್ತ  ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್​ ಮಂಡಿಸಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದತೆ ನಡೆಸಿದ್ದಾರೆ. ನೂತನ ಸರ್ಕಾರದ ಮೊದಲ ಬಜೆಟ್​​ ಮುಂದಿನ ತಿಂಗಳು ಅಂದರೆ ಜುಲೈ 5ಕ್ಕೆ ಮಂಡನೆಯಾಗಲಿದೆ.

ಬಜೆಟ್​ ಮಂಡನೆ ಹಿನ್ನಲೆ ಬಜೆಟ್ ಪೂರ್ವ ಸಭೆಗಳಿಗೆ ಸಿಎಂ ನಾಳೆಯಿಂದ ಚಾಲನೆ ನೀಡಲಿದ್ದು, ಪ್ರಮುಖ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯದ ಆಯವ್ಯಯಕ್ಕಾಗಿ ಆದಾಯ ಹೆಚ್ಚಿಸುವ ವಲಯಗಳನ್ನು ಗುರುತಿಸುತ್ತಿರುವ ಸಿಎಂ ಹಣಕಾಸು ಸಂಗ್ರಹಕ್ಕೆ ಒತ್ತು ನೀಡಲಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕಲಿದ್ದಾರೆ.

ಇನ್ನು ರೈತರ ಸಾಲಮನ್ನಾದ ಆಶ್ವಾಸನೆ, ಕೃಷಿಯಲ್ಲಿ ಇಸ್ರೇಲ್​​ ತಂತ್ರಜ್ಞಾನದ ಬಳಕೆ ಭರವಸೆ ಮತ್ತು ಜೆಡಿಎಸ್​​,ಕಾಂಗ್ರೆಸ್​​​ ಪಕ್ಷಗಳ ಪ್ರಣಾಳಿಕೆಯಲ್ಲಿ ಆಕರ್ಷಕ ಭರವಸೆಗಳು ಇರುವ ಹಿನ್ನಲೆ ಈ ಬಜೆಟ್​​​ ಕುತೂಹಲ ಕೇಂದ್ರವಾಗಿದೆ.

 

Please follow and like us:
0
http://bp9news.com/wp-content/uploads/2018/06/es-image-4.jpghttp://bp9news.com/wp-content/uploads/2018/06/es-image-4-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು : ಕಾಂಗ್ರೆಸ್​-ಜೆಡಿಎಸ್​ ಸರ್ಕಾರ ಖಾತೆ ಹಂಚಿಕೆ ಕ್ಯಾತೆ ಒಂದೆಡೆ ನಡೆಯುತ್ತಿದ್ದರೆ, ಅತ್ತ  ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್​ ಮಂಡಿಸಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದತೆ ನಡೆಸಿದ್ದಾರೆ. ನೂತನ ಸರ್ಕಾರದ ಮೊದಲ ಬಜೆಟ್​​ ಮುಂದಿನ ತಿಂಗಳು ಅಂದರೆ ಜುಲೈ 5ಕ್ಕೆ ಮಂಡನೆಯಾಗಲಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಬಜೆಟ್​...Kannada News Portal