ಬೆಂಗಳೂರು : ಮತದಾನದ ದಿನವಾದ ಇಂದು ಜವರಾಯ ತನ್ನ ರುಧ್ರ ನರ್ತನವನ್ನು ಮಾಡುತ್ತಿದ್ದಾನೆ. ಮತದಾನಕ್ಕೆ ತೆರಳುತ್ತಿದ್ದ ಆಟೋಗೆ ಮುಖಾಮುಖಿಯಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಘೋರವಾದ ಅಪಘಾತವಾಗಿದೆ.

ಅಪಘಾತದಲ್ಲಿ ಓರ್ವ ವೃದ್ಧೆ ಮೃತಪಟ್ಟಿದ್ದು, ಹತ್ತು ಜನರಿಗೆ ಗಂಭೀರಗಾಯವಾಗಿದೆ. ಅದರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬೇಲೂರು ರಸ್ತೆಯ ರಾಮೇಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ.

ರಾಮೇನಹಳ್ಳಿಯ ಜನ ಮತ ಚಲಾಯಿಸಲು ಆಟೋ ಮೂಲಕ ಹಾಸನಕ್ಕೆ ಬರುತ್ತಿದ್ದರು. ಆ ವೇಳೆ ರಸ್ತೆಯ ಎಡಬದಿಯಿಂದ ಹಸುವೊಂದು ರಸ್ತೆ ಮಧ್ಯೆ ನುಗ್ಗಿದ ಹಿನ್ನಲೆಯಲ್ಲಿ ಆಟೋ ಡ್ರೈವರ್ ಮತ್ತೊಂದು ಬದಿಗೆ ಆಟೋವನ್ನು ತಿರುಗಿಸಿದ್ದಾನೆ. ಆ ವೇಳೆ ಎದರುಗಡೆಯಿಂದ ಬರುತ್ತಿದ್ದ ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬಸಕ್ಕೆ ಓರ್ವ ಮಹಿಳೆ ಸ್ಪಾಟ್ ಡೆತ್ ಆಗಿದ್ದು, ಡ್ರೈವರ್ ಸೇರಿ ಮತ್ತಿಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಉಳಿದಂತೆ 8 ಮಂದಿಗೆ ಗಾಯಗಳಾಗಿದ್ದು, ಗಾಯಳುಗಳನ್ನು ಬೇಲೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Please follow and like us:
0
http://bp9news.com/wp-content/uploads/2018/05/89989-1.jpghttp://bp9news.com/wp-content/uploads/2018/05/89989-1-150x150.jpgPolitical Bureauಪ್ರಮುಖರಾಜಕೀಯಹಾಸನHassan: A lorry collides with auto's voteಬೆಂಗಳೂರು : ಮತದಾನದ ದಿನವಾದ ಇಂದು ಜವರಾಯ ತನ್ನ ರುಧ್ರ ನರ್ತನವನ್ನು ಮಾಡುತ್ತಿದ್ದಾನೆ. ಮತದಾನಕ್ಕೆ ತೆರಳುತ್ತಿದ್ದ ಆಟೋಗೆ ಮುಖಾಮುಖಿಯಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಘೋರವಾದ ಅಪಘಾತವಾಗಿದೆ. ಅಪಘಾತದಲ್ಲಿ ಓರ್ವ ವೃದ್ಧೆ ಮೃತಪಟ್ಟಿದ್ದು, ಹತ್ತು ಜನರಿಗೆ ಗಂಭೀರಗಾಯವಾಗಿದೆ. ಅದರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬೇಲೂರು ರಸ್ತೆಯ ರಾಮೇಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ರಾಮೇನಹಳ್ಳಿಯ ಜನ ಮತ ಚಲಾಯಿಸಲು ಆಟೋ ಮೂಲಕ ಹಾಸನಕ್ಕೆ ಬರುತ್ತಿದ್ದರು....Kannada News Portal