ಹುಬ್ಬಳ್ಳಿ: ಸದಾ ಒಂದಿಲ್ಲ ಒಂದು ಅವಾಂತರಗಳನ್ನ ತನ್ನ ಮೈಮೇಲೆ ಎಳೆದುಕೊಳ್ಳೊ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗ ಮತ್ತೆ ಯಡವಟ್ಟು ಮಾಡಿದೆ. ಜೋಪಾನವಾಗಿ ನೋಡಿಕೊಳ್ಳಬೇಕಾಗಿರೊ ಗರ್ಭಿಣಿಯರನ್ನ ಅಮಾನವೀಯವಾಗಿ ನೋಡಿಕೊಳ್ಳುತ್ತಿದೆ ಕಿಮ್ಸ್ ಆಸ್ಪತ್ರೆ. ಉತ್ತರ ಕರ್ನಾಟಕದ ಬಡವರ ಪಾಲಿಗೆ ಕಿಮ್ಸ್ ಸಂಜೀವಿನಿಯಾಗಬೇಕಿತ್ತು. ಆದರೆ ಇಲ್ಲಿ ರೋಗಿಗಳನ್ನ ನೋಡಿಕೊಳ್ಳೊ ಪರಿ ದೇವರಿಗೇ ಪ್ರೀತಿ. ತುಂಬು ಗರ್ಭಿಣಿಯರನ್ನ ಇಲ್ಲಿ ಟ್ರೀಟ್ ಮಾಡೊ ಪರಿಯನ್ನ ನೋಡಿದರೆ ಎಂಥ ಕಲ್ಲು ಹೃದಯದವೂ ಕರಗುತ್ತೆ.


ಸುಮಾರು 20 ಕ್ಕೂ ಹೆಚ್ಚು ಗರ್ಭಿಣಿಯರು ಹೆರಿಗೆ ವಾರ್ಡ ಎದುರಿನ ಕಾರಿಡಾರ್ ನಲ್ಲೇ ವಿಶ್ರಾಂತಿ ಪಡೀಬೇಕು. ಇದರ ಜತೆಗೆ, ಹೆರಿಗೆಯ ನೋವಿನಲ್ಲೂ ನರಕಯಾತನೆ ಅನುಭವಿಸಬೇಕು. ಕಳೆದ ಬಾರಿ ಒಂದೇ ಸ್ಟ್ರಚ್ಚರ್ ಮೇಲೆ ನಾಲ್ಕು ಗರ್ಭಿಣಿಯರನ್ನ ಚಿಕಿತ್ಸೆಗೆ ಕರೆದೊಯ್ದು ಕಿಮ್ಸ್. ಇವತ್ತೂ ಕೂಡ ಗರ್ಭಿಣಿಯರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿರೊ ಆಸ್ಪತ್ರೆ ಸಿಬ್ಬಂದಿ. ಸಾರ್ವಜನಿಕರ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾದ ಹುಬ್ಬಳ್ಳಿಯ ಕಿಮ್ಸ್. ಹೆರಿಗೆಗೆ ಬಂದ ಗರ್ಭಿಣಿಯರು ಮಲಗಲು ಹಾಸಿಗೆ ಇಲ್ಲ. ಆಸ್ಪತ್ರೆಯ ಕಾರಿಡಾರ್ ನಲ್ಲಿ ಮಲಗುವ ಸ್ಥಿತಿ ಎದುರಾಗಿದೆ.

ವರದಿ: ಇಷ್ಟಲಿಂಗ ಪಾವಟೆ, ಹುಬ್ಬಳ್ಳಿ

Please follow and like us:
0
http://bp9news.com/wp-content/uploads/2018/09/-ಕಿಮ್ಸ್​​​ನಲ್ಲಿ-ಅವಾಂತರ-BP9-NEWS-e1537507541660.jpeghttp://bp9news.com/wp-content/uploads/2018/09/-ಕಿಮ್ಸ್​​​ನಲ್ಲಿ-ಅವಾಂತರ-BP9-NEWS-e1537507541660-150x150.jpegBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ: ಸದಾ ಒಂದಿಲ್ಲ ಒಂದು ಅವಾಂತರಗಳನ್ನ ತನ್ನ ಮೈಮೇಲೆ ಎಳೆದುಕೊಳ್ಳೊ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗ ಮತ್ತೆ ಯಡವಟ್ಟು ಮಾಡಿದೆ. ಜೋಪಾನವಾಗಿ ನೋಡಿಕೊಳ್ಳಬೇಕಾಗಿರೊ ಗರ್ಭಿಣಿಯರನ್ನ ಅಮಾನವೀಯವಾಗಿ ನೋಡಿಕೊಳ್ಳುತ್ತಿದೆ ಕಿಮ್ಸ್ ಆಸ್ಪತ್ರೆ. ಉತ್ತರ ಕರ್ನಾಟಕದ ಬಡವರ ಪಾಲಿಗೆ ಕಿಮ್ಸ್ ಸಂಜೀವಿನಿಯಾಗಬೇಕಿತ್ತು. ಆದರೆ ಇಲ್ಲಿ ರೋಗಿಗಳನ್ನ ನೋಡಿಕೊಳ್ಳೊ ಪರಿ ದೇವರಿಗೇ ಪ್ರೀತಿ. ತುಂಬು ಗರ್ಭಿಣಿಯರನ್ನ ಇಲ್ಲಿ ಟ್ರೀಟ್ ಮಾಡೊ ಪರಿಯನ್ನ ನೋಡಿದರೆ ಎಂಥ ಕಲ್ಲು ಹೃದಯದವೂ ಕರಗುತ್ತೆ. var domain = (window.location...Kannada News Portal