ಹುಬ್ಬಳ್ಳಿ :  ನಗರದಲ್ಲಿ ಇತ್ತೀಚೆಗೆ ಹೋಟೆಲ್​​ ಮಾಲೀಕರ ಮೇಲೆ ನಡೆದ ಹಲ್ಲೆ ಖಂಡಿಸಿ ಹೋಟೆಲ್ ಮಾಲೀಕರು ಕರೆ ನೀಡಿರುವ ಬಂದ್‌ಗೆ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಬೇಕರಿ ವರ್ತಕರು ಬೆಂಬಲ ಸೂಚಿಸಿದ್ದಾರೆ. ಇದರಿಂದ ನಗರದ ಎಲ್ಲಾ ಹೋಟೆಲ್‌ಗಳು ಮುಚ್ಚಿದ್ದು, ದೂರದ ಊರುಗಳಿಂದ ಕೆಲಸ ಕಾರ್ಯಗಳಿಗೆ ಆಗಮಿಸಿದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ನಗರದ ಎಲ್ಲಾ‌ ಹೋಟೆಲ್ ಬಂದ್ ಮಾಡಿದ್ದು ಚಹಾ, ಕಾಫಿ ಸಹ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಈ ಬಂದ್‌ಗೆ ಕೇವಲ ಅವಳಿ ನಗರ ಮಾತ್ರವಲ್ಲದೆ ಕುಂದಗೋಳ ಹಾಗೂ‌ ಕಲಘಟಗಿ ಹೋಟೆಲ್ ಮಾಲೀಕರ ಸಂಘಟನೆಗಳು ಕೂಡ ಬೆಂಬಲ ನೀಡಿದ್ದು,‌ ಅಲ್ಲಿನ‌ ಹೋಟೆಲ್‌ಗಳನ್ನು ಬಂದ್ ಮಾಡಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಮರಾಠ ಗಲ್ಲಿಯಲ್ಲಿರುವ ಸಂಘದ ಕಚೇರಿಯಿಂದ ದುರ್ಗದ ಬೈಲ್, ದಾಜೀಬಾನಪೇಟ್ ಮಾರ್ಗವಾಗಿ ತಹಶೀಲ್ದಾರ ಕಚೇರಿವರಗೆ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಹಲ್ಲೆ ನಡೆದಿದ ಆರೋಪಿಗಳನ್ನು ಶೀಘ್ರ ಬಂದಿಸುವಂತೆ  ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ವರದಿ: ಇಷ್ಟಲಿಂಗ ಪಾವಟೆ, ಹುಬ್ಬಳ್ಳಿ

Please follow and like us:
0
http://bp9news.com/wp-content/uploads/2018/06/Karnatakada-Miditha-47.jpeghttp://bp9news.com/wp-content/uploads/2018/06/Karnatakada-Miditha-47-150x150.jpegBP9 Bureauಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ :  ನಗರದಲ್ಲಿ ಇತ್ತೀಚೆಗೆ ಹೋಟೆಲ್​​ ಮಾಲೀಕರ ಮೇಲೆ ನಡೆದ ಹಲ್ಲೆ ಖಂಡಿಸಿ ಹೋಟೆಲ್ ಮಾಲೀಕರು ಕರೆ ನೀಡಿರುವ ಬಂದ್‌ಗೆ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಬೇಕರಿ ವರ್ತಕರು ಬೆಂಬಲ ಸೂಚಿಸಿದ್ದಾರೆ. ಇದರಿಂದ ನಗರದ ಎಲ್ಲಾ ಹೋಟೆಲ್‌ಗಳು ಮುಚ್ಚಿದ್ದು, ದೂರದ ಊರುಗಳಿಂದ ಕೆಲಸ ಕಾರ್ಯಗಳಿಗೆ ಆಗಮಿಸಿದ ಸಾರ್ವಜನಿಕರಿಗೆ ತೊಂದರೆಯಾಗಿದೆ.  var domain = (window.location != window.parent.location)? document.referrer : document.location.href; var scpt=document.createElement('script'); var GetAttribute =...Kannada News Portal