ಹುಬ್ಬಳ್ಳಿ: ಇಷ್ಟವಿದ್ದರೆ ಮತ ಚಲಾಯಿಸಿ, ಇಲ್ಲವಾದರೆ ಪರವಾಗಿಲ್ಲ ಎಂದು ಶಾಸಕ, ಕಾರ್ಮಿಕ ಸಚಿವ ಸಂತೋಷ್​​ ಲಾಡ್ ಹೇಳಿದ್ದಾರೆ.

ಕಲಘಟಗಿ ತಾಲೂಕಿನ ಹಳ್ಳಿಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಸಂತೋಷ್​​ ಲಾಡ್​​ಗೆ ಹಲವು ಕಡೆ ವಿರೋಧ ವ್ಯಕ್ತವಾಗುತ್ತಿತ್ತು.  ಪ್ರಜ್ಞಾವಂತ ಜನರು ಸಂತೋಷ್​​ ಲಾಡ್​​ಗೆ ಪ್ರಶ್ನೆಯನ್ನ ಕೇಳಿ ತರಾಟೆ ತೆಗೆದುಕೊಂಡ ಘಟನೆಗಳು ನಡೆದಿದ್ದವು.

ಈ ಎಲ್ಲಾ ಘಟನೆಗಳಿಗೆ ಈಗ ಲಾಡ್​​ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ವಿರೋಧ ವ್ಯಕ್ತಪಡಿಸಬೇಡಿ. ನಾವು ನಮ್ಮ ಪಾಡಿಗೆ ಪ್ರಚಾರಮಾಡಿ ಹೋಗುತ್ತೇವೆ. ನಿಮಗೆ ಇಷ್ಟವಿದ್ದರೆ ಮತ ಚಲಾಯಿಸಿ, ಇಲ್ಲವಾದರೆ ಪರವಾಗಿಲ್ಲ. ಆದರೆ ಈ ರೀತಿಯ ವಿರೋಧ ಪ್ರದರ್ಶನ ಕಲಘಟಗಿಯ ಸಂಸ್ಕೃತಿ ಅಲ್ಲ. ನಿಮಗೆ ಕೈ ಮುಗಿಯುವೇ ಈ ರೀತಿ ವಿರೋಧ ವ್ಯಕ್ತಪಡಿಸಬೇಡಿ ಎಂದು ಜನರಲ್ಲಿ ಬೇಡಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/05/dwd-Karnatakada-Miditha.jpeghttp://bp9news.com/wp-content/uploads/2018/05/dwd-Karnatakada-Miditha-150x150.jpegBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ: ಇಷ್ಟವಿದ್ದರೆ ಮತ ಚಲಾಯಿಸಿ, ಇಲ್ಲವಾದರೆ ಪರವಾಗಿಲ್ಲ ಎಂದು ಶಾಸಕ, ಕಾರ್ಮಿಕ ಸಚಿವ ಸಂತೋಷ್​​ ಲಾಡ್ ಹೇಳಿದ್ದಾರೆ. ಕಲಘಟಗಿ ತಾಲೂಕಿನ ಹಳ್ಳಿಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಸಂತೋಷ್​​ ಲಾಡ್​​ಗೆ ಹಲವು ಕಡೆ ವಿರೋಧ ವ್ಯಕ್ತವಾಗುತ್ತಿತ್ತು.  ಪ್ರಜ್ಞಾವಂತ ಜನರು ಸಂತೋಷ್​​ ಲಾಡ್​​ಗೆ ಪ್ರಶ್ನೆಯನ್ನ ಕೇಳಿ ತರಾಟೆ ತೆಗೆದುಕೊಂಡ ಘಟನೆಗಳು ನಡೆದಿದ್ದವು. ಈ ಎಲ್ಲಾ ಘಟನೆಗಳಿಗೆ ಈಗ ಲಾಡ್​​ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ವಿರೋಧ ವ್ಯಕ್ತಪಡಿಸಬೇಡಿ. ನಾವು ನಮ್ಮ ಪಾಡಿಗೆ ಪ್ರಚಾರಮಾಡಿ ಹೋಗುತ್ತೇವೆ....Kannada News Portal