ಹುಬ್ಬಳ್ಳಿ : ಮುಖ್ಯಮಂತ್ರಿ ಕುಮಾರಸ್ವಾಮಿ  ಸಂಪೂರ್ಣ ರೈತರ ಸಾಲ ಮಾಡುತ್ತೇನೆ ಎಂದು ಹೇಳಿ ಸಂಪೂರ್ಣ ಸಾಲ ಮನ್ನಾ ಮಾಡದೇ ವಚನ ಭ್ರಷ್ಟವಾಗಿದ್ದಾರೆ.  ಅಲ್ಲದೆ ಸಾಲಮನ್ನಾದ ಕುರಿತು ರೈತರಲ್ಲಿ ನಿಬಂಧನೆಗಳನ್ನು ಹಾಕಿರುವುದು ಸರಿಯಲ್ಲ. ರಾಜ್ಯ ಮೈತ್ರಿ ಸರ್ಕಾರ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ನಡೆದುಕೊಂಡಿಲ್ಲ ಎಂದು ಜಯ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಹಾಗೂ ‌ಮಹದಾಯಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಜಕೀಯ ಮಾಡುತ್ತಿವೆ.‌ ಎರಡು ಸರ್ಕಾರಗಳ ವಿರುದ್ಧ ಮತ್ತೆ ಉಗ್ರ ಹೋರಾಟ ಕೈಗೊಳ್ಳಲು ಸಂಘಟನೆ ನಿರ್ಧಾರ ತಗೆದುಕೊಂಡಿದೆ ಎಂದರು. ಬಜೆಟ್ ಮಂಡನೆ  ಸಂದರ್ಭದಲ್ಲಿ 2900 ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿದ್ದರಿಂದ ಗ್ರಾಮಾಂತರ ಪ್ರದೇಶಗಳಲ್ಲಿನ  ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಸುಮಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಆದ್ದರಿಂದ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು. ಅಲ್ಲದೇ  ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿ ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ರೂಪಿಸಲು ರಾಜ್ಯ ಸರ್ಕಾರದ ನಿರ್ಧಾರ ತಪ್ಪಾಗಿದೆ. ಈ ನಿರ್ಧಾರವನ್ನು ಕೈ ಬಿಟ್ಟು ಕನ್ನಡದ ಸಾಹಿತ್ಯ ಸಂಸ್ಕೃತಿಯ ಹಿತಾಸಕ್ತಿ ಕಾಪಾಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

ವರದಿ: ಇಷ್ಟಲಿಂಗ ಪಾವಟೆ, ಹುಬ್ಬಳ್ಳಿ

Please follow and like us:
0
http://bp9news.com/wp-content/uploads/2018/07/-ಸರ್ಕಾರದ-ವಿರುದ್ಧ-ಜಯ-ಕರ್ನಾಟಕ-ಸಂಘದ-ಆಕ್ರೋಶ-BP9-NEWS-e1531395460333.jpeghttp://bp9news.com/wp-content/uploads/2018/07/-ಸರ್ಕಾರದ-ವಿರುದ್ಧ-ಜಯ-ಕರ್ನಾಟಕ-ಸಂಘದ-ಆಕ್ರೋಶ-BP9-NEWS-e1531395460333-150x150.jpegBP9 Bureauರಾಜಕೀಯಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ : ಮುಖ್ಯಮಂತ್ರಿ ಕುಮಾರಸ್ವಾಮಿ  ಸಂಪೂರ್ಣ ರೈತರ ಸಾಲ ಮಾಡುತ್ತೇನೆ ಎಂದು ಹೇಳಿ ಸಂಪೂರ್ಣ ಸಾಲ ಮನ್ನಾ ಮಾಡದೇ ವಚನ ಭ್ರಷ್ಟವಾಗಿದ್ದಾರೆ.  ಅಲ್ಲದೆ ಸಾಲಮನ್ನಾದ ಕುರಿತು ರೈತರಲ್ಲಿ ನಿಬಂಧನೆಗಳನ್ನು ಹಾಕಿರುವುದು ಸರಿಯಲ್ಲ. ರಾಜ್ಯ ಮೈತ್ರಿ ಸರ್ಕಾರ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ನಡೆದುಕೊಂಡಿಲ್ಲ ಎಂದು ಜಯ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಹೇಳಿದ್ದಾರೆ.  var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal