ಹುಬ್ಬಳ್ಳಿ : ಸಚಿವ ಸಂತೋಷ ಲಾಡ್‌‌ಗೆ ಮುತ್ತಿಗೆ ಹಾಕಿ ಗ್ರಾಮಸ್ಥರು ತರಾಟೆಗೆ ತೆಗದುಕೊಂಡ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸಲಕಿನಕೊಪ್ಪ ಗ್ರಾಮಕ್ಕೆ ಸಂತೋಷ್ ಲಾಡ್ ಪ್ರಚಾರಕ್ಕೆ ಆಗಮಿಸಿದ್ದರು. ಪ್ರಚಾರಕ್ಕೆ ಆಗಮಿಸಿದ ಲಾಡ್‌‌ಗೆ ಗ್ರಾಮಸ್ಥರು ಶಾಕ್ ನೀಡಿದ್ದಾರೆ.

ಗ್ರಾಮದಲ್ಲಿ ಗರಡಿ ಮನೆ ನಿರ್ಮಾಣ ಮಾಡೋದಾಗಿ ಕಳೆದ 10 ವರ್ಷಗಳ ಹಿಂದೆ ಭರವಸೆ‌ ನೀಡಿದ್ದೀರಿ. ಆದರೆ ಹತ್ತು ವರ್ಷ ಕಳೆದರೂ ಗರಡಿಮನೆಗೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ತರಾಟೆಗೆ ತಗೆದುಕೊಂಡರು. ನಡು ರಸ್ತೆಯಲ್ಲೇ ಸಂತೋಷ ಲಾಡ್‌‌ಗೆ ಧಿಕ್ಕಾರ ಕೂಗಿದ ಗ್ರಾಮಸ್ಥರು ಮೋದಿ ಪರ ಘೋಷಣೆ ಕೂಗಿ ಇರುಸು-ಮುರಿಸು ಉಂಟು ಮಾಡಿದರು.

ಗ್ರಾಮಸ್ಥರ ಪ್ರಶ್ನೆಗೆ ಪದೇ ಪದೇ ಇಂಗ್ಲಿಷ್‌‌ನಲ್ಲಿ ಸಮಜಾಯಿಸಿ ನೀಡಲು ಲಾಡ್‌‌ ಪ್ರಯತ್ನಿಸಿದರು. ಗ್ರಾಮಸ್ಥರ ತರಾಟೆಗೆ ತಣ್ಣಗಾದ ಲಾಡ್, ಗರಡಿ ಮನೆಗೆ ಎರಡು ಲಕ್ಷ‌ ರೂಪಾಯಿ ಹಣ ನೀಡೋದಾಗಿ‌ ಹೇಳಿದರು. ನಾಳೆನೇ ಹಣ‌ ಕೊಡ್ತಿನಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ  ಲಾಡ್  ಮಾತನ್ನ ನಿರಾಕರಿಸಿದ  ಗ್ರಾಮಸ್ಥರು ಚುನಾವಣೆ ಬಂದಾಗ ಭರವಸೆ ನೀಡುವ ಕೆಲಸ ಬೇಡ ಎಂದು ಪಟ್ಟುಹಿಡಿದರು.

ನಾನೇನು ದೇವರಲ್ಲ ನಮ್ಮ ಕಡೆಯಿಂದಾನೂ ತಪ್ಪುಗಳಾಗುತ್ತವೆ ಎಂದು ಲಾಡ್‌‌ ಸಮರ್ಥಿಸಿಕೊಂಡರು. ಲಾಡ್ ಸಮರ್ಥನೆ ಒಪ್ಪಿಕೊಳ್ಳದ ಗ್ರಾಮಸ್ಥರು, ರಸ್ತೆ‌‌ ನಿರ್ಮಾಣದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಶಾಕ್​ ನೀಡಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-03-at-3.04.26-PM.jpeghttp://bp9news.com/wp-content/uploads/2018/05/WhatsApp-Image-2018-05-03-at-3.04.26-PM-150x150.jpegBP9 Bureauರಾಜಕೀಯಹುಬ್ಬಳ್ಳಿ-ಧಾರವಾಡಹುಬ್ಬಳ್ಳಿ : ಸಚಿವ ಸಂತೋಷ ಲಾಡ್‌‌ಗೆ ಮುತ್ತಿಗೆ ಹಾಕಿ ಗ್ರಾಮಸ್ಥರು ತರಾಟೆಗೆ ತೆಗದುಕೊಂಡ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸಲಕಿನಕೊಪ್ಪ ಗ್ರಾಮಕ್ಕೆ ಸಂತೋಷ್ ಲಾಡ್ ಪ್ರಚಾರಕ್ಕೆ ಆಗಮಿಸಿದ್ದರು. ಪ್ರಚಾರಕ್ಕೆ ಆಗಮಿಸಿದ ಲಾಡ್‌‌ಗೆ ಗ್ರಾಮಸ್ಥರು ಶಾಕ್ ನೀಡಿದ್ದಾರೆ. ಗ್ರಾಮದಲ್ಲಿ ಗರಡಿ ಮನೆ ನಿರ್ಮಾಣ ಮಾಡೋದಾಗಿ ಕಳೆದ 10 ವರ್ಷಗಳ ಹಿಂದೆ ಭರವಸೆ‌ ನೀಡಿದ್ದೀರಿ. ಆದರೆ ಹತ್ತು ವರ್ಷ ಕಳೆದರೂ ಗರಡಿಮನೆಗೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ತರಾಟೆಗೆ...Kannada News Portal