ಬೆಂಗಳೂರು: ನೂತನ ಸರ್ಕಾರ ರಚನೆಗೆ ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿಗೆ ಸರ್ಕಾರ ಕಟ್ಟಲು ಅವಕಾಶ ಕೊಟ್ಟ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಮತ್ತು ನಾಯಕು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಜಂಟಿ ಪ್ರತಿಭಟನೆ ನಡೆಸಿದ್ರು.

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ್‌ ಖರ್ಗೆ, ಗುಲಾಮ್‌ ನಬೀ ಆಜಾದ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ..

ಈ ಪ್ರತಿಭಟನೆಯ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಅಂದ್ರೆ ದೊಡ್ಡಗೌಡ್ರು. ರಾಜಕೀಯ ರಣತಂತ್ರಗಳನ್ನ ರೂಪಿಸೋ ದೇವೇಗೌಡ್ರು ರಣಬಿಸಿಲಿನಲ್ಲಿ ಕೆಚ್ಚೆದೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಸಿಲಿಗೂ, ಮಳೆಗೂ, ಚಳಿಗೂ ನಾನು ಜಗ್ಗೋದಿಲ್ಲ, ಕುಗ್ಗೋದಿಲ್ಲ ಅಂತ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಾ ನಾಯಕರು ಬಿಸಿಲಿಗೆ ಟೋಪಿ ಹಾಕಿ ಕುಳಿತ್ರೆ, ದೇವೇಗೌಡ್ರು ಮಾತ್ರ ಹಾಗೆ ಬಿರುಸಿಲಿಗೆ ತಲೆ ಕೊಟ್ಟಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ದೇವೇಗೌಡ್ರಿಗೆ ಟೋಪಿ ಹಾಕಲು ಹೋದ್ರೆ, ಗೌಡ್ರು ಇರಲಿ ಹಾಗೆ ಇರ್ತೇನೆ ಅಂತ ಜಮೀರ್‌  ಬೆನ್ನು ತಟ್ಟಿದ್ದಾರೆ. ಈ  ಮೂಲಕ ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಅನ್ನೋದನ್ನ ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/devegowda1111111-1.jpghttp://bp9news.com/wp-content/uploads/2018/05/devegowda1111111-1-150x150.jpgBP9 Bureauಪ್ರಮುಖ  ಬೆಂಗಳೂರು: ನೂತನ ಸರ್ಕಾರ ರಚನೆಗೆ ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿಗೆ ಸರ್ಕಾರ ಕಟ್ಟಲು ಅವಕಾಶ ಕೊಟ್ಟ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಮತ್ತು ನಾಯಕು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಜಂಟಿ ಪ್ರತಿಭಟನೆ ನಡೆಸಿದ್ರು. ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ್‌ ಖರ್ಗೆ, ಗುಲಾಮ್‌ ನಬೀ ಆಜಾದ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ...Kannada News Portal