ಸ್ಯಾಂಡಲ್​ವುಡ್​ನ ನಟಿ ಶ್ರದ್ಧಾ ಶ್ರೀನಾಥ್​ ಯೂ ಟರ್ನ್ ನಲ್ಲಿ ಉತ್ತಮ ಅಭಿನಯದ​ ಮೂಲಕ ಎಲ್ಲರ ಮನ ಗೆದ್ದವರು. ನಿನ್ನೆಯಷ್ಟೇ ನಡೆದ  ಸೌತ್​ ಫಿಲಂ ಫೇರ್​ ಅವಾರ್ಡ್​ ಕಾರ್ಯಕ್ರಮದಲ್ಲಿ  ನಟಿ ಶ್ರದ್ಧಾ  ಅವಾರ್ಡ್​ ಪಡೆದುಕೊಂಡರು.  ಎಲ್ಲರ ಕಣ್ಣು  ಶ್ರದ್ಧಾ ಮೇಲೆಯೇ ಇತ್ತು.   ಅದಕ್ಕೆ ಕಾರಣ ಶ್ರದ್ಧಾ ತನ್ನ ಮೈ ಮೇಲೆ ಹಾಕಿಸಿಕೊಂಡ ಟ್ಯಾಟೂ ಎಲ್ಲರನ್ನ  ಅಟ್ರಾಕ್ಟ್​  ಮಾಡಿತ್ತು. ಅಲ್ಲಿರುವವರೆಲ್ಲರೂ ಶ್ರದ್ಧಾ ಅವರ ಎದೆ ಮೇಲೆ ಹಾಕಿಸಿಕೊಂಡ ಟ್ಯಾಟೂವನ್ನು ದುರುಗುಟ್ಟಿ ನೋಡುತ್ತಿದ್ದರು. ಎಲ್ಲರ ಕಣ್ಣ ಸೆಳೆದ ಆ ಟ್ಯಾಟೂ ಚಿತ್ರ ಯಾವುದು ಗೊತ್ತಾ…?

ಶ್ರದ್ಧಾ ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್​ ‘ದಿ ಬೀಟಲ್ಸ್​ ಅನ್ನೋ ಮ್ಯೂಸಿಕ್​ ಬ್ಯಾಂಡ್​’’ ನಲ್ಲಿ ಕೆಲಸ ಮಾಡುತ್ತಿದ್ದರು. ಹಲವಾರು ಸ್ಟೇಜ್ ಶೋಗಳಲ್ಲೂ  ಹಾಡುತ್ತಿದ್ದ ಶ್ರದ್ಧಾಗೆ ಮೊದಲ ಸಂಭಾವನೆ ಎಂದು ಕೈಗೆ ಕೇವಲ 2000 ರೂ ಸಿಕ್ಕಿತು. ಆ ಸಮಯದಲ್ಲಿ ಶ್ರದ್ಧಾ ಆ ಹಣದಿಂದ ಏನು ಖರೀದಿ ಮಾಡಿದ್ರು ಗೊತ್ತಾ? ಕೇಳಿದ್ರೆ ಆಶ್ಚರ್ಯ ಪಡ್ತೀರಾ. ಹೌದು ಶ್ರದ್ದಾ ಆ ಎರಡು ಸಾವಿರ ಖರ್ಚುಮಾಡಿ ಟ್ಯಾಟೂ ಹಾಕಿಸಿಕೊಂಡ್ರಂತೆ.

ಅಂದಹಾಗೆ ಆ ಟ್ಯಾಟೂನಲ್ಲಿ ಮ್ಯೂಸಿಕಲ್​ ಇನ್ಸ್​ಟ್ರುಮೆಂಟ್ಸ್​ನ ಚಿತ್ರವನ್ನು ಬಿಡಿಸಿಕೊಂಡರಂತೆ.  ಶ್ರದ್ಧಾಗೆ ಮೊದಲಿನಿಂದಲೂ ಟ್ಯಾಟೂ  ಗೀಳಿತ್ತು. ಹೀಗಾಗಿಯೇ ತನ್ನ ಎದೆ ಮೇಲೆ ಇನ್​ಸ್ಟ್ರೂಮೆಂಟ್​ಗಳನ್ನೇ ಬಳಸಿಕೊಂಮಡು ಕುತ್ತಿಗೆ  ಕೆಳಗೆ ಲವ್​ ಅಂತಾ ಹೆಜ್ಜೆ ಹಾಕಿಸಿಕೊಂಡಿದ್ದಾರೆ. ಫಿಲ್ಮ್​  ಫೇರ್​ ಅವಾರ್ಡ್​ನಲ್ಲಿ ಇದೇ  ಟ್ಯಾಟೂ ಎಲ್ಲರ ಗಮನ ಸೆಳೆಯೋದರಲ್ಲೇ ಹೆಚ್ಚು  ಕುತೂಹಲಕ್ಕೆ ಕಾರಣವಾಗಿತ್ತು.

Please follow and like us:
0
http://bp9news.com/wp-content/uploads/2018/06/havvajjajaaaaa-1.jpghttp://bp9news.com/wp-content/uploads/2018/06/havvajjajaaaaa-1-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನ ನಟಿ ಶ್ರದ್ಧಾ ಶ್ರೀನಾಥ್​ ಯೂ ಟರ್ನ್ ನಲ್ಲಿ ಉತ್ತಮ ಅಭಿನಯದ​ ಮೂಲಕ ಎಲ್ಲರ ಮನ ಗೆದ್ದವರು. ನಿನ್ನೆಯಷ್ಟೇ ನಡೆದ  ಸೌತ್​ ಫಿಲಂ ಫೇರ್​ ಅವಾರ್ಡ್​ ಕಾರ್ಯಕ್ರಮದಲ್ಲಿ  ನಟಿ ಶ್ರದ್ಧಾ  ಅವಾರ್ಡ್​ ಪಡೆದುಕೊಂಡರು.  ಎಲ್ಲರ ಕಣ್ಣು  ಶ್ರದ್ಧಾ ಮೇಲೆಯೇ ಇತ್ತು.   ಅದಕ್ಕೆ ಕಾರಣ ಶ್ರದ್ಧಾ ತನ್ನ ಮೈ ಮೇಲೆ ಹಾಕಿಸಿಕೊಂಡ ಟ್ಯಾಟೂ ಎಲ್ಲರನ್ನ  ಅಟ್ರಾಕ್ಟ್​  ಮಾಡಿತ್ತು. ಅಲ್ಲಿರುವವರೆಲ್ಲರೂ ಶ್ರದ್ಧಾ ಅವರ ಎದೆ ಮೇಲೆ ಹಾಕಿಸಿಕೊಂಡ ಟ್ಯಾಟೂವನ್ನು ದುರುಗುಟ್ಟಿ ನೋಡುತ್ತಿದ್ದರು....Kannada News Portal