ಬೇಡವಾದ ಕೂದಲಿನಿಂದ  ಮುಖದ ಅಂದ ಕೆಡುತ್ತೆ. ಸಾಕಷ್ಟು ಬಾರಿ ನಾವು ಎದುರು -ಬದುರು ಮಾತನಾಡುವಾಗ ಮುಜುಗರವನ್ನು ಅನುಭವಿಸಿದ್ದಾಯ್ತು. ಇನ್ನೂ ಚಿಂತೆ ಬಿಡಿ ಕೂದಲಿನಿಂದ ಮುಕ್ತಿ ಪಡೆಯಿರಿ.

ಹಾರ್ಮೋನ್​ ವ್ಯತ್ಯಾಸದಿಂದ ಬೇಡವಾದ ಕೂದಲುಗಳು ಬೆಳೆಯುತ್ತವೆ. ಅದರಲ್ಲೂ ತುಟಿಯ ಮೇಲ್ಭಾಗದ ಕೂದಲುಗಳನ್ನು ತೆಗೆಯುವುದರಲ್ಲಿ ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಂಗಳನ್ನು ಬಳಸಿದ್ದಾಯ್ತು, ಆದರೂ ಪ್ರಯೋಜನವಾಗಿಲ್ಲ. ಹಾರ್ಮೋನ್​ ಏರುಪೇರಾದಂತೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಬ್ಯೂಟಿ ಪಾರ್ಲರ್​ಗೆ ಹೋಗಿ ವ್ಯಾಕ್ಸಿಂಗ್​ ಥ್ರೆಡ್ಡಿಂಗ್​ ಮಾಡಿಕೊಳ್ಳುವ ಹುಡುಗಿಯರು ಬೇಡವಾದ ಕೂದಲಿಗೆ ತಾತ್ಕಲಿಕ ಪರಿಹಾರ ಕಂಡುಕೊಳ್ಳುತ್ತಾರೆ.

ಆದರೆ ಇದರಿಂದ ಹೆಚ್ಚು ದಿನ ಮಾತ್ರ ನಿಮಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿಯೇ ಸೇಫ್​ ಅಲ್ಲದ ಕ್ರೀಂ ಬಳಕೆ ಬಿಟ್ಟು ನಾವು ಹೇಳುವ ನೈಸರ್ಗಿಕ ವಸ್ತುಗಳ ಬಳಕೆ ಮಾಡಿ, ಸೌಂದರ್ಯ ವೃದ್ಧಿಸಿಕೊಳ್ಳಿ.

ಕೆಲವೊಮ್ಮೆ ಕೆನ್ನೆಯ ಮೇಲೆ, ತುಟಿಯ ಮೇಲ್ಭಾಗ, ಗಲ್ಲದ ಮೇಲೆ, ಬೆನ್ನಿನ ಮೇಲೆ ತುಂಬಾ ಒರಟಾದ ಕೂದಲುಗಳು ಬೆಳೆಯುವುದುಂಟು. ತೆಗಿಸಿದಷ್ಟೂ ಹೆಚ್ಚು ಹೆಚ್ಚು ಬೆಳೆಯುವ ಕೂದಲುಗಳಿಗೆ ಮನೆಯಲ್ಲಿಯೇ ಸುಲಭ ಪರಿಹಾರ ಉಂಟು.

ಪರಿಹಾರ 1: ಮೊಟ್ಟೆ ಯ ಬಿಳಿ ಭಾಗವನ್ನು ತೆಗೆದುಕೊಳ್ಳಿ,  ಒಂದು ಚಮಚ  ಸಕ್ಕರೆ ಹಾಗೂ ಒಂದು ಚಮಚ ಕಾರ್ನ್   ಪ್ಲೋರ್​ ಸೇರಿಸಿ ಚೆನ್ನಾಗಿ  ಮಿಕ್ಸ್​  ಮಾಡಿಕೊಂಡು ನಂತರ ಅಪ್ಪರ್​ಲಿಪ್ಸ್​ ಗೆ ಹಚ್ಚಿಕೊಂಡು 30 ನಿಮಿಷ ಹಾಗೇ ಬಿಡಿ. 30 ನಿಮಿಷಗಲ ನಂತರ ಸ್ವಚ್ಛವಾಗಿ ಬತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಹೀಗೆ ಮಾಡುವುದರಿಂದ ತುಟಿಯ ಮೆಲ್ಭಾಗದ ಕೂದಲನ್ನು ನಿವಾರಿಸಬಹುದು.

ಹಾಲು ಮತ್ತು ಅರಿಶಿನ : ಒಂದು ಚಮಚ ಹಾಲಿಗೆ ಒಂದು ಚಮಚ ಅರಿಶಿನವನ್ನು ಬೆರೆಸಿ. ಅದನ್ನು ಅಪ್ಪರ್​ ಲಿಪ್​ಗೆ ಹಚ್ಚಿಕೊಂಡು ಒಣಗುವವರೆಗೆ ಹಅಗೇ ಬಿಡಿ. ನಂತರ ತಣ್ಣನೆಯ ನೀರನಿಂದ ತೊಳೆಯಿರಿ. ವಾರದಲ್ಲಿ ಮೂರು ಭಾರಿ ಈ ರೀತಿ ಮಾಡುವುದರಿಂದ ಅಪ್ಪರ್​ ಲಿಪ್​ ಕೂದಲನ್ನು ತೆಗೆದು ಹಾಕಬಹುದು. ಅರಿಶಿನ, ಕಡಲೆಹಿಟ್ಟು, ಮತ್ತು ಅರಿಶಿನವನ್ನು ಹಾಕಿ ಮಿಕ್ಸ್​  ಮಾಡಿ ಅದನ್ನು ಅಪ್ಪರ್​ ಲಿಪ್​ಗೆ ಹಚ್ಚಿಕೊಂಡು, ಚೆನ್ನಾಗಿ ಒಣಗಿದ ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಅಪ್ಪರ್​ ಲಿಪ್​ನಲ್ಲಿ ಕೂದಲು ಬೆಳೆಯುವುದಿಲ್ಲ.

ಸಕ್ಕರೆ : 2 ಚಮಚ ಸಕ್ಕರೆ, ಒಂದು ಚಮಚ ನಿಂಬೆ ರಸ ಮತ್ತು ಬಟ್ಟೆಯ ತುಂಡೊಂದನ್ನು ತೆಗೆದುಕೊಳ್ಳಿ. ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದರಲ್ಲಿ ಸಕ್ಕರೆ ಹಾಕಿ ಬಿಸಿ ಮಾಡಿ. ನಂತರ ನಿಂಬೆ ರಸ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ತಣ್ಣಗಾದ ಬಳಿಕ ಅದನ್ನು ಅಪ್ಪರ್ ಲಿಪ್ ಗೆ ಹಚ್ಚಿಕೊಳ್ಳಿ. ಅದರ ಮೇಲೆ ಬಟ್ಟೆಯ ತುಂಡನ್ನು ಹಾಕಿ ಪ್ರೆಸ್ ಮಾಡಿ. ನಂತರ ಎಳೆದು ಕೂದಲನ್ನು ನೀಟಾಗಿ ತೆಗೆಯಿರಿ.

ಆಲೂಗಡ್ಡೆ ಜ್ಯೂಸ್ : ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿಯಿರಿ. ನಂತರ ಅದನ್ನು ಹಿಂಡಿ 2 ಸ್ಪೂನ್ ನಷ್ಟು ಜ್ಯೂಸ್ ಬೇರ್ಪಡಿಸಿ. ಅದನ್ನು ಮಲಗುವ ಮುನ್ನ ಅಪ್ಪರ್ ಲಿಪ್ ಗೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದ ಮೇಲೆ ತೊಳೆದುಕೊಳ್ಳಿ. ವಾರಕ್ಕೆ 2 ಬಾರಿ ಈ ರೀತಿ ಮಾಡುವುದರಿಂದ ಬೇಡದ ಕೂದಲನ್ನು ನಿವಾರಿಸಬಹುದು.

ಇನ್ನು ಬೇಡವಾದ ಕೂದಲಿನ ಚಿಂತೆ ಬಿಡಿ. ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಿ.

Please follow and like us:
0
http://bp9news.com/wp-content/uploads/2018/02/natural-ways-to-get-rid-of-upper-lips-hair.jpghttp://bp9news.com/wp-content/uploads/2018/02/natural-ways-to-get-rid-of-upper-lips-hair-150x150.jpgBP9 Bureauಲೈಫ್​ ಸ್ಟೈಲ್​​ ಗುರು  ಬೇಡವಾದ ಕೂದಲಿನಿಂದ  ಮುಖದ ಅಂದ ಕೆಡುತ್ತೆ. ಸಾಕಷ್ಟು ಬಾರಿ ನಾವು ಎದುರು -ಬದುರು ಮಾತನಾಡುವಾಗ ಮುಜುಗರವನ್ನು ಅನುಭವಿಸಿದ್ದಾಯ್ತು. ಇನ್ನೂ ಚಿಂತೆ ಬಿಡಿ ಕೂದಲಿನಿಂದ ಮುಕ್ತಿ ಪಡೆಯಿರಿ. ಹಾರ್ಮೋನ್​ ವ್ಯತ್ಯಾಸದಿಂದ ಬೇಡವಾದ ಕೂದಲುಗಳು ಬೆಳೆಯುತ್ತವೆ. ಅದರಲ್ಲೂ ತುಟಿಯ ಮೇಲ್ಭಾಗದ ಕೂದಲುಗಳನ್ನು ತೆಗೆಯುವುದರಲ್ಲಿ ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಂಗಳನ್ನು ಬಳಸಿದ್ದಾಯ್ತು, ಆದರೂ ಪ್ರಯೋಜನವಾಗಿಲ್ಲ. ಹಾರ್ಮೋನ್​ ಏರುಪೇರಾದಂತೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಬ್ಯೂಟಿ ಪಾರ್ಲರ್​ಗೆ ಹೋಗಿ ವ್ಯಾಕ್ಸಿಂಗ್​ ಥ್ರೆಡ್ಡಿಂಗ್​...Kannada News Portal