ಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸೋಮವಾರ ತಡೆಯಾಜ್ಞೆ ನೀಡಿದ್ದು, ಇತ್ತ ಪ್ರೌಢಶಾಲಾ ಮುಖ್ಯಶಿಕ್ಷಕರು ಮಾತ್ರ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಅವರ ವರ್ಗಾವಣೆ ಕುರಿತು ಇನ್ನೂ ನಿಯಮಾವಳಿ ಪ್ರಕಟವಾಗದೇ ಇರುವುದು ಅದಕ್ಕೆ ಕಾರಣ. ಹಿಂದಿನ ವರ್ಷವೂ ವರ್ಗಾವಣೆ ನಡೆದಿರಲಿಲ್ಲ ಎಂಬುದು ಅವರ ಸಂಕಟವನ್ನು ಇನ್ನಷ್ಟು ಹೆಚ್ಚಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ವರ್ಗಾವಣೆ ನಿಯಮಾವಳಿಗಳನ್ನು ಏಕಕಾಲಕ್ಕೆ ಪ್ರಕಟಿಸಿ, ಅರ್ಜಿಗಳನ್ನು ಆಹ್ವಾನಿಸುತ್ತಿತ್ತು. ಆದರೆ ಈ ಬಾರಿ, ಪ್ರೌಢಶಾಲೆ ಮುಖ್ಯಶಿಕ್ಷಕರನ್ನು ಕೈಬಿಟ್ಟು ನಿಯಮಾವಳಿ ಪ್ರಕಟಿಸಿದೆ.

‘ಈಗಿನ ವರ್ಗಾವಣೆ ಪ್ರಕ್ರಿಯೆಯ ಜೊತೆಗೇ ನಮ್ಮ ವರ್ಗಾವಣೆಯೂ ಆದರೆ ಸರಿ. ಮುಂದಿನ ದಿನಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ, ಗ್ರಾಮ ಪಂಚಾಯ್ತಿಗಳಿಗೆ ಹಾಗೂ ಲೋಕಸಭೆಗೆ ಚುನಾವಣೆ ಹೀಗೆ ಸಾಲು ಸಾಲಾಗಿ ಚುನಾವಣೆಗಳು ಬರಲಿದ್ದು, ವರ್ಗಾವಣೆ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಕೆಲವು ಮುಖ್ಯಶಿಕ್ಷಕರು.

‘ಎರಡು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿದ್ದೇವೆ. ಬಿ ಗ್ರೂಪ್‌ಗೆ ಸೇರಿದ ನಮ್ಮ ವರ್ಗಾವಣೆಯ ಕುರಿತು ಇಲಾಖೆಯು ವಿಳಂಬ ಮತ್ತು ತಾರತಮ್ಯ ಧೋರಣೆ ಅನುಸರಿಸಿದೆ’ ಎಂದು ಅವರು ದೂರಿದರು.

ವಿಳಂಬ:

‘ಪ್ರತಿ ವರ್ಷ ಸಾರ್ವತ್ರಿಕ ವರ್ಗಾವಣೆ ನಿಯಮಾವಳಿಗಳೂ ಏಪ್ರಿಲ್‌ ತಿಂಗಳಲ್ಲಿ ಪ್ರಕಟವಾಗಿ, ಪ್ರಕ್ರಿಯೆಯು ಮೇ ತಿಂಗಳ ಅಂತ್ಯದ ಹೊತ್ತಿಗೆ ಮುಗಿಯುತ್ತಿತ್ತು. ಆದರೆ ಈ ಬಾರಿ ಸರ್ಕಾರ ರಚನೆ ವಿಳಂಬವಾದ ಕಾರಣ ನಾವು ಪರದಾಡಬೇಕಾಗಿದೆ’ ಎಂದು ಮುಖ್ಯಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

‘ವರ್ಗಾವಣೆ ಬಯಸುವ ಶಿಕ್ಷಕರು, ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಆದರೆ, ನಾವು ನಾಲ್ಕು–ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ’ ಎಂದರು.

Please follow and like us:
0
http://bp9news.com/wp-content/uploads/2018/06/N-MAHESH-1.jpghttp://bp9news.com/wp-content/uploads/2018/06/N-MAHESH-1-150x150.jpgPolitical Bureauಪ್ರಮುಖರಾಜಕೀಯalliance government is due to this !!!,High School Heads Of Education !!! : Attention Minister Maheshಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸೋಮವಾರ ತಡೆಯಾಜ್ಞೆ ನೀಡಿದ್ದು, ಇತ್ತ ಪ್ರೌಢಶಾಲಾ ಮುಖ್ಯಶಿಕ್ಷಕರು ಮಾತ್ರ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ವರ್ಗಾವಣೆ ಕುರಿತು ಇನ್ನೂ ನಿಯಮಾವಳಿ ಪ್ರಕಟವಾಗದೇ ಇರುವುದು ಅದಕ್ಕೆ ಕಾರಣ. ಹಿಂದಿನ ವರ್ಷವೂ ವರ್ಗಾವಣೆ ನಡೆದಿರಲಿಲ್ಲ ಎಂಬುದು ಅವರ ಸಂಕಟವನ್ನು ಇನ್ನಷ್ಟು ಹೆಚ್ಚಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ವರ್ಗಾವಣೆ ನಿಯಮಾವಳಿಗಳನ್ನು...Kannada News Portal