ಬೆಂಗಳೂರು : ರಾಜ್ಯ ಅವಗಢ ಪರಿಹಾರ ನಿಧಿಯಡಿ ಬರ-ನೆರೆ ನಿರ್ವಹಣೆಗೆಂದು ರಾಜ್ಯಕ್ಕೆ ನೆರವು ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಭರವಸೆ ನೀಡಿದ್ದಾರೆ.

ಈ ಬಾಬ್ತಿನಲ್ಲಿ ರಾಜ್ಯಕ್ಕೆ 2015-2019ರ ನಡುವೆ ದೊರೆತಿರುವ ನೆರವಿನ ಮೊತ್ತ ಕೇವಲ ₹1,527 ಕೋಟಿ ಎಂಬ ಸಂಗತಿಯನ್ನು ನೀತಿ ಆಯೋಗದ ಸಭೆಯಲ್ಲಿ ಕುಮಾರಸ್ವಾಮಿ ಗಮನ ಸೆಳೆದಾಗ, ಸಚಿವ ರಾಜನಾಥಸಿಂಗ್ ಆಶ್ಚರ್ಯ ವ್ಯಕ್ತಪಡಿಸಿದ್ದು, ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವೆ ಎಂದು ಮಾತು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕುಮಾರಸ್ವಾಮಿ

ಇನ್ನು ಇದೇ ಅವಧಿಯಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತಿಗೆ ಅನುಕ್ರಮವಾಗಿ ₹ 8,195 ಕೋಟಿ, ₹ 6.094 ಕೋಟಿ, ₹ 4,847 ಕೋಟಿ ಹಾಗೂ ₹ 3,394 ಕೋಟಿ ದೊರೆತಿದೆ. ಬರಗಾಲ ತಡೆ ಕ್ರಮಗಳ ಜಾರಿಗೆ ₹12,272 ಕೋಟಿ ನೆರವಿಗೆ 2016ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಸಮಗ್ರ ಮನವಿ ಸಲ್ಲಿಸಿದ್ದ ಸಂಗತಿಯನ್ನು ವಿವರಿಸಿದೆ.

ರಾಷ್ಟ್ರೀಯ ಹೆದ್ದಾರಿ-48ರ ಹಾಸನ- ಚನ್ನರಾಯಪಟ್ಟಣ ಭಾಗದಲ್ಲಿ ಈಗಿನ ಎರಡು ಪಥಗಳ ಬದಲಿಗೆ ನಾಲ್ಕು ಪಥಗಳನ್ನು ತಕ್ಷಣವೇ ನಿರ್ಮಿಸಿ ಅಪಘಾತಗಳನ್ನು ತಡೆಯಬೇಕು. ಇದೇ ಹೆದ್ದಾರಿಯ ನೆಲಮಂಗಲ- ಹಾಸನ ಮಾರ್ಗದಲ್ಲಿ ಎರಡು ಪಥಗಳ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೂ ಸಹ ಮನವಿ ಮಾಡಿಕೊಳ್ಳಲಾಗಿದೆ ಎಂಬ ವಿಚಾರ ಇದೀಗ ಹೊರ ಬಿದ್ದಿದೆ.

Please follow and like us:
0
http://bp9news.com/wp-content/uploads/2018/06/thestate2F2017-112Fb68e7600-f8cf-4edc-9c62-75fecfe0397e2Frr.jpghttp://bp9news.com/wp-content/uploads/2018/06/thestate2F2017-112Fb68e7600-f8cf-4edc-9c62-75fecfe0397e2Frr-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯHome Minister Rajnath Singh to fix state injusticeಬೆಂಗಳೂರು : ರಾಜ್ಯ ಅವಗಢ ಪರಿಹಾರ ನಿಧಿಯಡಿ ಬರ-ನೆರೆ ನಿರ್ವಹಣೆಗೆಂದು ರಾಜ್ಯಕ್ಕೆ ನೆರವು ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಭರವಸೆ ನೀಡಿದ್ದಾರೆ. ಈ ಬಾಬ್ತಿನಲ್ಲಿ ರಾಜ್ಯಕ್ಕೆ 2015-2019ರ ನಡುವೆ ದೊರೆತಿರುವ ನೆರವಿನ ಮೊತ್ತ ಕೇವಲ ₹1,527 ಕೋಟಿ ಎಂಬ ಸಂಗತಿಯನ್ನು ನೀತಿ ಆಯೋಗದ ಸಭೆಯಲ್ಲಿ ಕುಮಾರಸ್ವಾಮಿ ಗಮನ ಸೆಳೆದಾಗ, ಸಚಿವ ರಾಜನಾಥಸಿಂಗ್ ಆಶ್ಚರ್ಯ ವ್ಯಕ್ತಪಡಿಸಿದ್ದು, ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವೆ ಎಂದು ಮಾತು ನೀಡಿದ್ದಾರೆ...Kannada News Portal