ಹಾವೇರಿ: ವಿಧಾನಸಭಾ ಚುನಾವಣೆಯ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಎಪ್ರಿಲ್ 27 ರಂದು ಹಾವೇರಿ ಜಿಲ್ಲೆಯಲ್ಲಿ 26 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು ಅಂತಿಮ ಕಣದಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 64 ಜನ ಅಭ್ಯರ್ಥಿಗಳು ಉಳಿದಿದ್ದಾರೆ.

ಹಾನಗಲ್ ಕ್ಷೇತ್ರದಿಂದ 8 ಅಭ್ಯರ್ಥಿಗಳು, ಶಿಗ್ಗಾಂವ ಕ್ಷೇತ್ರದಿಂದ 2 ಅಭ್ಯರ್ಥಿಗಳು , ಹಾವೇರಿ ಕ್ಷೇತ್ರದಿಂದ 3 ಅಭ್ಯರ್ಥಿಗಳು, ಬ್ಯಾಡಗಿ ಕ್ಷೇತ್ರದಿಂದ 4 ಅಭ್ಯರ್ಥಿಗಳು, ಹಿರೇಕೆರೂರು ಕ್ಷೇತ್ರದಿಂದ 2 ಅಭ್ಯರ್ಥಿಗಳು ಹಾಗೂ ರಾಣೇಬೆನ್ನೂರು ಕ್ಷೇತ್ರದಿಂದ 7 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಎಪ್ರಿಲ್ 26 ರಂದು ರಾಣೇಬೆನ್ನೂರ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದರು. ಇದರಿಂದ ಒಟ್ಟಾರೆ 27 ಜನ ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಂತಾಗಿದೆ.

ಅಂತಿಮವಾಗಿ ಕಣದಲ್ಲಿ ಇರುವ ಅಭ್ಯರ್ಥಿಗಳ ವಿವರ:

ಹಾನಗಲ್ ವಿಧಾನಸಭಾ ಕ್ಷೇತ್ರ:

೧) ಸಿ.ಎಂ.ಉದಾಸಿ (ಬಿಜೆಪಿ), ೨) ಶ್ರೀನಿವಾಸ ಮಾನೆ (ಕಾಂಗ್ರೆಸ್), ೩) ಪಿ.ಎಸ್.ಅಯುಬ ಸೈಯದ್‌ಪಾಶಾ (ಜೆಡಿಎಸ್), ೪) ಉಡಚಪ್ಪ ಉದ್ದನಕಾಲ (ಪಕ್ಷೇತರ), ೫) ಚಂದ್ರಪ್ಪ ಜಾಲಗಾರ (ಪಕ್ಷೇತರ), ೬) ಮೆಹಬೂಬಅಲಿ ನದಾಫ್ (ಪಕ್ಷೇತರ), ೭) ರವಿ ಲಮಾಣಿ (ಪಕ್ಷೇತರ), ೮) ರಾಮಪ್ಪ ಬೊಮ್ಮಾಜಿ (ಪಕ್ಷೇತರ), ೯) ಸಿದ್ದಪ್ಪ ಪೂಜಾರ (ಪಕ್ಷೇತರ), ೧೦) ಹನುಮಂತಪ್ಪ ತಳವಾರ (ಪಕ್ಷೇತರ), ೧೧ ಹೊನ್ನಪ್ಪ ಅಕ್ಕಿವಳ್ಳಿ (ಪಕ್ಷೇತರ).

ಶಿಗ್ಗಾವಿ ವಿಧಾನಸಭಾ ಕ್ಷೇತ್ರ:

೧) ಅಶೋಕ ಬೇವಿನಮರ (ಜೆಡಿಎಸ್), ೨) ಬಸವರಾಜ ಬೊಮ್ಮಾಯಿ (ಬಿಜೆಪಿ), ೩) ಸೈಯದ್ ಅಜ್ಜಂಪೀರ್ ಖಾದ್ರಿ(ಕಾಂಗ್ರೆಸ್), ೪) ಮೈನೋದಿನ್ ಕತೀಬ (ಎಂಇಪಿ), ೫) ಹಾತಿವಾಲೆ ಸಿಕಂದರ (ಪ್ರಜಾಪರಿವರ್ತನಾ ಪಾರ್ಟಿ), ೬) ಶಿವಪ್ಪ ಯಲ್ಲಪ್ಪ ಕಬ್ಬೂರ(ಪಕ್ಷೇತರ), ೭) ದುದ್ದುಸಾಬ ಕನವಳ್ಳಿ(ಪಕ್ಷೇತರ), ೮) ಮೆಹಬೂಬ ಪಠಾಣ (ಪಕ್ಷೇತರ), ೯) ಪರಮೇಶಿ ನಾಗಪ್ಪ ಶೆಟಿಬಾರ (ಪಕ್ಷೇತರ), ೧೦) ಸೋಮಣ್ಣ ಬೇವಿನಮರದ (ಪಕ್ಷೇತರ), ೧೧) ಮೋಹನ ಇಟ್ಟಣಗಿ(ಪಕ್ಷೇತರ), ೧೨) ಸುನೀಲ್ ಜೆ.ಎ.(ಪಕ್ಷೇತರ).

ಬ್ಯಾಡಗಿ ವಿಧಾನಸಭಾ ಕ್ಷೇತ್ರ:

೧) ವಿರೂಪಾಕ್ಷಪ್ಪ ರುದ್ರಪ್ಪ ಬಳ್ಳಾರಿ (ಬಿಜೆಪಿ), ೨)ಶಿವನಗೌಡ ರಾಜಶೇಖರಗೌಡ ಪಾಟೀಲ (ಕಾಂಗ್ರೆಸ್), ೩) ಶಿವಬಸಪ್ಪ ಚನ್ನಬಸಪ್ಪ ಬಾಗಮ್ಮನವರ (ಬಿಎಸ್‌ಪಿ), ೪)ಅಣ್ಣಯ್ಯ ನಾಗಪ್ಪ ಚಾವಡಿ (ಜನ ಸಾಮಾನ್ಯರ ಪಾರ್ಟಿ) ೫)ಜಾಕೀರ್ ಹುಸೇನ ಮೌಲಾಲಿ ಅರಳಿಮರದ (ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ), ೬)ಉಮೇಶ ಯಲ್ಲಪ್ಪ ಕರಿಗಾರ (ಪಕ್ಷೇತರ), ೭)ರಾಘವೇಂದ್ರ ಮಾರುತಿ ದಾಮೋದರ (ಪಕ್ಷೇತರ), ೮)ಶಿವಮೂರ್ತಿ ಬಸಪ್ಪ ಸಾದರ (ಪಕ್ಷೇತರ).

ಹಾವೇರಿ ವಿಧಾನ ಸಭಾ ಕ್ಷೇತ್ರ:

೧) ನೆಹರು ಓಲೇಕಾರ (ಬಿಜೆಪಿ), ೨) ರುದ್ರಪ್ಪ ಲಮಾಣಿ (ಕಾಂಗ್ರೆಸ್), ೩) ಡಾ. ಸಂಜಯ ಡಾಂಗೆ (ಜೆಡಿಎಸ್), ೪) ಕೆಂಚಮ್ಮ ಹನುಂತಪ್ಪ ನಾಗನೂರ (ಭಾರತೀಯ ಬಹುಜನ ಕ್ರಾಂತಿದಳ), ೫) ದುರ್ಗೇಶ್ ಮೇಗಳಮನಿ (ಭಾರತೀಯ ಜನಶಕ್ತಿ ಕಾಂಗ್ರೆಸ್), ೬) ಬಸವರಾಜ ಟೀಕೆಹಳ್ಳಿ (ಕೆಜೆಪಿ), ೭) ಬಾಬಕ್ಕ ಬಾಲಯ್ಯ ಬಳ್ಳಾರಿ (ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ), ೮) ರೇಣುಕಾ ಕೆಂಚಳ್ಳನವರ (ಆರ್.ಪಿ.ಐ.?ಎ), ೯) ಲಾವತಿ ಚವಾಣ (ಪಕ್ಷೇತರ), ೧೦) ದುರುಗಪ್ಪ ಗಾಳೆಪ್ಪ ಮಾದರ (ಪಕ್ಷೇತರ), ೧೧) ಪ್ರದೀಪ್ ರಾಮಣ್ಣ ಮಾಳಗಾವಿ (ಪಕ್ಷೇತರ), ೧೨) ಬಸವರಾಜ ನಾಗಪ್ಪ ನಾಗಮ್ಮನವರ (ಪಕ್ಷೇತರ),

ಹಿರೇಕೆರೂರ ವಿಧಾನಸಭಾ ಕ್ಷೇತ್ರ:

೧) ಯು.ಬಿ.ಬಣಕಾರ (ಬಿಜೆಪಿ), ೨) ಬಿ.ಸಿ.ಪಾಟೀಲ (ಕಾಂಗ್ರೆಸ್), ೩) ಸಿದ್ದಪ್ಪ ಗುಡದಪ್ಪನವರ (ಜೆಡಿಎಸ್), ೪) ಮಾದೇವಪ್ಪ ಮಾಳಮ್ಮನವರ (ಎಂಇಪಿ), ೫) ವೀರಭದ್ರಪ್ಪ ಕುಂಬಾರ (ಕೆಪಿಜೆಪಿ), ೬) ವಿನಯ ಪಾಟೀಲ (ಜನಸಾಮಾನ್ಯರ ಪಕ್ಷ), ೭) ಹರೀಶ ಇಂಗಳಗೊಂದಿ (ಕೆಜೆಪಿ), ೮) ಪರಮೇಶಪ್ಪ ಕಾಗಿನೆಲ್ಲಿ (ಪಕ್ಷೇತರ), ೯) ರಾಜಶೇಖರ ದೂದೀಹಳ್ಳಿ (ಪಕ್ಷೇತರ), ೧೦) ಮಂಜುನಾಥ ಸಾನು (ಪಕ್ಷೇತರ),

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ:

೧) ಕೃಷ್ಣಪ್ಪ ಭೀಮಪ್ಪ ಕೋಳಿವಾಡ (ಕಾಂಗ್ರೆಸ್), ೨) ಡಾ.ಬಸವರಾಜ ಷಣ್ಮುಖಪ್ಪ ಕೇಲಗಾರ (ಬಿಜೆಪಿ),೩) ಶ್ರೀಪಾದ ಹನುಮಪ್ಪ ಸಾವಕಾರ (ಜೆಡಿಎಸ್), ೪) ದಿಳ್ಳೆಪ್ಪ ಕೆಂಚಪ್ಪ ಹಿತ್ತಲಮನಿ (ಜನತಾದಳ ಸಂಯುಕ್ತ), ೫) ಪರಜಾನ್‌ತಬಾಸುಂ ಶೌಕತಅಲಿ ಕೊಪ್ಪಳ (ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ), ೬) ಆರ್.ಶಂಕರ್ ತಂದೆ ಎಂ.ರಾಮಚಂದ್ರಪ್ಪ (ಕೆಪಿಜೆಪಿ), ೭) ರುಕ್ಮಿಣಿ ಪ್ರಹ್ಲಾದಪ್ಪ ಸಾವಕಾರ (ಪಕ್ಷೇತರ), ೮) ವೀರನಗೌಡ ಚನ್ನವೀರಗೌಡ ಪಾಟೀಲ (ಪಕ್ಷೇತರ), ೯) ಶಿವಯೋಗಿಸ್ವಾಮಿ ಗುರುಶಾಂತಸ್ವಾಮಿ ಮಹಾನುಭಾವಿಮಠ (ಪಕ್ಷೇತರ), ೧೦) ಸುನೀಲ ಬಣಕಾರ ಉರ್ಫ ಬಿ.ಎ.ಸುನೀಲ (ಪಕ್ಷೇತರ), ೧೧) ಹನುಮಂತಪ್ಪ ಡಿ. ಕಬ್ಬಾರ (ಪಕ್ಷೇತರ).

ನಾಮಪತ್ರ ಹಿಂಪಡೆದವರ ವಿವರ :

ನಜೀರ್‌ಅಹ್ಮದ್ ಸವಣೂರ (ಪಿಪಿಪಿ),ಮನೋಹರ್ ತಹಸೀಲ್ದಾರ್, ಖ್ವಾಜಾಮೊದ್ಧಿನ್ ಅಣ್ಣಿಗೇರಿ (ಪಕ್ಷೇತರ), ವೀರೇಶ ಕಿರವಾಡಿ (ಪಕ್ಷೇತರ), ಮಹ್ಮದ್‌ಗೌಸ್ ಲೋಹಾರ (ಪಕ್ಷೇತರ), ಸುಬ್ರಹ್ಮಣ್ಯ ಹೆಬ್ಬಾರ (ಬಿಕೆಬಿಡಿ), ಕೃಷ್ಣ ಈಳಿಗೇರ (ಪಕ್ಷೇತರ), ನಿಂಗಪ್ಪ ಗಾಳೆಮ್ಮನವರ (ಆರ್‌ಪಿಐ (ಎ) ಅವರು ಹಾನಗಲ್ ಕ್ಷೇತ್ರದಿಂದ ನಾಮಪತ್ರ ಹಿಂಪಡೆದಿದ್ದಾರೆ.

ಶಿಗ್ಗಾಂವ ಕ್ಷೇತ್ರದಿಂದ ಅಬ್ದುಲ್‌ಖಾದರ್ ಕೊಲ್ಲಾಪುರ(ಪಕ್ಷೇತರ) ಹಾಗೂ ಶಿವಾನಂದ ಸೋಮಪ್ಪ ಬಾಗೂರ(ಪಕ್ಷೇತರ) ಹಾಗೂ ಹಾವೇರಿ ಕ್ಷೇತ್ರದಿಂದ ದ್ಯಾಮಪ್ಪ ಶಂಕರ್ ಕಡೇಮನಿ (ಪಕ್ಷೇತರ), ರಾಜೇಶ್ವರಿ ಮುಂದಿನಮನಿ (ಪಕ್ಷೇತರ), ಶ್ರೀಪಾದ ಸ್ವಾಮಿ ಡಿ. ಬೆಟಗೇರಿ (ಪಕ್ಷೇತರ) ಅವರು ನಾಮಪತ್ರ ಹಿಂಪಡೆದಿದ್ದಾರೆ.

ಬ್ಯಾಡಗಿ ಕ್ಷೇತ್ರದಿಂದ ಮಹಾಂತಯ್ಯ ಚಂದ್ರಯ್ಯ ಮಠದ (ಪಕ್ಷೇತರ), ಗಿರೀಶ ಪುಟ್ಟಪ್ಪ ಬಣಕಾರ (ಪಕ್ಷೇತರ), ಶಿವಪ್ಪ ಹಾಲಪ್ಪ ಕಾಡಮ್ಮನವರ(ಜನಹಿತ ಪಕ್ಷ), ರುದ್ರಯ್ಯ ಅಂದಾನಯ್ಯ ಸಾಲಿಮಠ (ಪಕ್ಷೇತರ) ಹಾಗೂ ಕ್ಷೇತ್ರದಿಂದ ಮೌಲಾಸಾಬ್ ಹಿತ್ತಲಮನಿ (ಪಕ್ಷೇತರ), ಬಸನಗೌಡ ಹನುಮಗೌಡ್ರ (ಪಕ್ಷೇತರ) ಅವರು ನಾಮಪತ್ರ ಹಿಂಪಡೆದಿದ್ದಾರೆ.

ರಾಣೇಬೆನ್ನೂರು ಕ್ಷೇತ್ರದಿಂದ ಅರುಣಕುಮಾರ ಮಹೇಶ್ವರಪ್ಪ ಗುತ್ತೂರ (ಪಕ್ಷೇತರ), ಜಗದೀಶ ಯಂಕಪ್ಪ ದೊಡ್ಡಮನಿ (ಪಕ್ಷೇತರ), ಎಸ್. ಧನಲಕ್ಷ್ಮಿ (ಪಕ್ಷೇತರ), ಪುಟ್ಟನಗೌಡ ರಾಮನಗೌಡ ಕುಪ್ಪೇಲೂರ (ಪಕ್ಷೇತರ), ರಾಮಪ್ಪ ಭೀಮಪ್ಪ ಕೋಲಕಾರ (ಪಕ್ಷೇತರ), ಆರ್.ಶಂಕರ(ಪಕ್ಷೇತರ), ಹನುಮಂತರಾಜು ಮಹದೇವಗೌಡ ಚನ್ನಗೌಡ್ರ (ಪಕ್ಷೇತರ) ಅವರು ನಾಮಪತ್ರ ಹಿಂಪಡೆದಿದ್ದಾರೆ.

Please follow and like us:
0
http://bp9news.com/wp-content/uploads/2018/04/haveri-taluka-map.jpghttp://bp9news.com/wp-content/uploads/2018/04/haveri-taluka-map-150x150.jpgBP9 Bureauರಾಜಕೀಯಹಾವೇರಿಹಾವೇರಿ: ವಿಧಾನಸಭಾ ಚುನಾವಣೆಯ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಎಪ್ರಿಲ್ 27 ರಂದು ಹಾವೇರಿ ಜಿಲ್ಲೆಯಲ್ಲಿ 26 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು ಅಂತಿಮ ಕಣದಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 64 ಜನ ಅಭ್ಯರ್ಥಿಗಳು ಉಳಿದಿದ್ದಾರೆ. ಹಾನಗಲ್ ಕ್ಷೇತ್ರದಿಂದ 8 ಅಭ್ಯರ್ಥಿಗಳು, ಶಿಗ್ಗಾಂವ ಕ್ಷೇತ್ರದಿಂದ 2 ಅಭ್ಯರ್ಥಿಗಳು , ಹಾವೇರಿ ಕ್ಷೇತ್ರದಿಂದ 3 ಅಭ್ಯರ್ಥಿಗಳು, ಬ್ಯಾಡಗಿ ಕ್ಷೇತ್ರದಿಂದ 4 ಅಭ್ಯರ್ಥಿಗಳು, ಹಿರೇಕೆರೂರು ಕ್ಷೇತ್ರದಿಂದ 2 ಅಭ್ಯರ್ಥಿಗಳು ಹಾಗೂ ರಾಣೇಬೆನ್ನೂರು...Kannada News Portal