ಹಾವೇರಿ: ರಾಣೇಬೆನ್ನೂರಿನಲ್ಲಿ 1972 ರಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 5 ಬಾರಿ ಆಯ್ಕೆಯಾಗಿದ್ದು, 3 ಬಾರಿ ಸೋತಿದ್ದೇನೆ. 6 ನೇ ಬಾರಿ ಗೆಲ್ಲುವ ಉತ್ಸಾಹದಿಂದ ಚುನಾವಣೆಗೆ ಮತ್ತೆ ಸ್ಪರ್ಧಿಸಿದ್ದೇನೆ. ಆಗಿನ ಚುನಾವಣೆಗೂ ಈಗಿನ ಚುನಾವಣೆಗೂ ಅಜ ಗಜಾಂತರ ವ್ಯತ್ಯಾಸವಿದೆ. ಈಗ ರಾಜಕಾರಣ ಸಾಕಷ್ಟು ಕಲ್ಮಶವಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

ಇಲ್ಲಿನ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಸೂಚನೆ ಮತ್ತು ಕ್ಷೇತ್ರದ ಮತದಾರರ ಒತ್ತಡದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರ ಪ್ರೀತಿ ವಿಶ್ವಾಸ ಹೆಚ್ಚಿದೆ. ತಾಲ್ಲೂಕಿನ ಜನರ ಸುಖ, ಶಾಂತಿ, ನೆಮ್ಮದಿಯಿಂದ ಬಾಳಬೇಕು ಎಂಬುದೇ ನನ್ನ ಸದಾಶಯ. ಮತದಾರರು ಆಶೀರ್ವಾದ ಮಾಡುವ ಮೂಲ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. ನಗರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಕೆಲವೇ ಕಾರ್ಯಕ್ರಮಗಳು ಉಳಿದಿವೆ’ ಎಂದರು.

ತಾಲ್ಲೂಕಿಗೆ ಬೇಕಾಗುವಷ್ಟು ವಿದ್ಯುತ್‌ ಉತ್ಪಾದನೆ, ವರ್ತುಲ ರಸ್ತೆ ನಿರ್ಮಾಣದಂಥ ಅಭಿವೃದ್ದಿ ಕೆಲಸಗಳ ಗುರಿ ಹೊಂದಿದ್ದೇನೆ. ಇನ್ನು ಕೆಲವು ಅಭಿವೃದ್ದಿ ಕಾರ್ಯಕ್ರಮಗಳ ಪಟ್ಟಿ ಮಾಡಿದ್ದು, ಕಳೆದ ಒಂದೂವರೆ ತಿಂಗಳಿಂದ ಪ್ರಚಾರ ಮಾಡುತ್ತಿದ್ದೇನೆ. 93 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ.ಮೂರು ಬಾರಿ ನಗರ ಪ್ರದೇಶ ಮತ್ತು ಮೂರು ಬಾರಿ ಗ್ರಾಮೀಣ ಪ್ರದೇಶದ ಮತದಾರರನ್ನು ಭೇಟಿ ಮಾಡಿದ್ದು,  ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಮೋಹನ ಹಂಡೆ, ಏಕನಾಥ ಬಾನುವಳ್ಳಿ, ಜಗದೀಶ ಪಾಟೀಲ, ಕೆ.ಡಿ.ಸಾವಕಾರ, ಮಾಲತೇಶ ಪಾಟೀಲ, ಬಸನಗೌಡ ಮರದ, ಕೃಷ್ಣಪ್ಪ ಕಂಬಳಿ, ವೀರೇಶ ಮೋಟಗಿ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಜೈನ, ಇಕ್ಬಾಲ್‌ ರಾಣೆಬೆನ್ನೂರು, ದಿಳ್ಳೇಪ್ಪ ಅಣ್ಣೇರ, ಬಸಪ್ಪ ಶಿಡಗನಹಾಳ, ಧರ್ಮರಾಜ ಕುಪ್ಪೇಲೂರ, ಸಲೀಂ ಜವಳಿ, ರವಿ ಹುಚಗೊಂಡರ, ಮಾಲತೇಶ ಪಾಟೀಲ ಜೊತೆಗಿದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-01-at-12.09.10-PM.jpeghttp://bp9news.com/wp-content/uploads/2018/05/WhatsApp-Image-2018-05-01-at-12.09.10-PM-150x150.jpegBP9 Bureauರಾಜಕೀಯಹಾವೇರಿಹಾವೇರಿ: ರಾಣೇಬೆನ್ನೂರಿನಲ್ಲಿ 1972 ರಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 5 ಬಾರಿ ಆಯ್ಕೆಯಾಗಿದ್ದು, 3 ಬಾರಿ ಸೋತಿದ್ದೇನೆ. 6 ನೇ ಬಾರಿ ಗೆಲ್ಲುವ ಉತ್ಸಾಹದಿಂದ ಚುನಾವಣೆಗೆ ಮತ್ತೆ ಸ್ಪರ್ಧಿಸಿದ್ದೇನೆ. ಆಗಿನ ಚುನಾವಣೆಗೂ ಈಗಿನ ಚುನಾವಣೆಗೂ ಅಜ ಗಜಾಂತರ ವ್ಯತ್ಯಾಸವಿದೆ. ಈಗ ರಾಜಕಾರಣ ಸಾಕಷ್ಟು ಕಲ್ಮಶವಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು. ಇಲ್ಲಿನ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಸೂಚನೆ ಮತ್ತು...Kannada News Portal