ಹಾವೇರಿ: ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಡಾ.ಬಸವರಾಜ ಕೇಲಗಾರ ಅವರನ್ನು ಬದಲಾವಣೆ ಮಾಡುವಂತೆ ನೂರಾರು ಬಿಜೆಪಿ ಕಾರ್ಯಕರ್ತರ ಭಾಜಪ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು.

ಲಿಂಗಾಯತ ಮುಖಂಡರು ಬಂಡಾಯದ ಬಾವುಟ ಸಿದ್ಧ: ಬಿಜೆಪಿ ಟಿಕೆಟ್ ಬದಲಾವಣೆ ಆಗದೆ ಇದ್ದರೆ ಕ್ಷೇತ್ರದಲ್ಲಿ ಲಿಂಗಾಯತ ಮುಖಂಡರು ಬಂಡಾಯ ಏಳುವ ಸಾಧ್ಯತೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಸುಮಾರು 60ಸಾವಿರ ಲಿಂಗಾಯತ ಮತಗಳು ಇರುವ ಕಾರಣ ಎಲ್ಲಾ ಲಿಂಗಾಯತ ಮುಖಂಡರು ಒಗ್ಗೂಡಿ ತಮ್ಮ ಜನಾಂಗದ ವ್ಯಕ್ತಿಯನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸುವು ಮೂಲಕ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಕ್ಷೇತ್ರದಲ್ಲಿ ಯಡಿಯೂರಪ್ಪ ಹಾಗೂ ಅಮಿತ್​​ ಷಾ ಅವರು ಸಮೀಕ್ಷೆ ಮಾಡದೆ ಸೋಲುವ ಅಭ್ಯರ್ಥಿಯಾದ ಬಸವರಾಜ ಕೇಲಗಾರ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಯಡಿಯೂರಪ್ಪ ಹಾಗೂ ಸಿ.ಎಂ.ಉದಾಸಿ ಅವರ ಒಳ ತಂತ್ರವಾಗಿದೆ. ಕ್ಷೇತ್ರದಲ್ಲಿ ನಿಷ್ಠಾವಂತ ಬಿಜೆಪಿಗರನ್ನು ಕಡೆಗಣಿಸಿ ಯಾರೋ ಹಣ ನೀಡಿದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಈ ಹಿಂದೆ ಸಿ.ಎಂ.ಉದಾಸಿ ಅವರ ನಿವಾಸಕ್ಕೆ ಭೇಟಿ ಮಾಡಿ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಇದೆ. ಆದ್ದರಿಂದ ಲಿಂಗಾಯತ ‌ಮುಖಂಡರಾದ ಅರುಣಕುಮಾರ ಪೂಜಾರ ಅವರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಉದಾಸಿ ಅವರ ರಾಣೆಬೆನ್ನೂರ ಕ್ಷೇತ್ರದ ಶಾಸಕರಾದ ಕೆ.ಬಿ.ಕೋಳಿವಾಡರ ಜತೆ ಒಳ ಒಪ್ಪಂದ ಮಾಡಿಕೊಂಡು ಈಗ ಕ್ಷೇತ್ರಕ್ಕೆ ಡಮ್ಮಿ ಅಭ್ಯರ್ಥಿ ಹಾಕಿಸಿದ್ದಾರೆ ಎಂದು ಆರೋಪಿಸಿದರು.

 

Please follow and like us:
0
http://bp9news.com/wp-content/uploads/2018/04/bjp_manipuir_pti.jpghttp://bp9news.com/wp-content/uploads/2018/04/bjp_manipuir_pti-150x150.jpgBP9 Bureauರಾಜಕೀಯಹಾವೇರಿಹಾವೇರಿ: ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಡಾ.ಬಸವರಾಜ ಕೇಲಗಾರ ಅವರನ್ನು ಬದಲಾವಣೆ ಮಾಡುವಂತೆ ನೂರಾರು ಬಿಜೆಪಿ ಕಾರ್ಯಕರ್ತರ ಭಾಜಪ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು. ಲಿಂಗಾಯತ ಮುಖಂಡರು ಬಂಡಾಯದ ಬಾವುಟ ಸಿದ್ಧ: ಬಿಜೆಪಿ ಟಿಕೆಟ್ ಬದಲಾವಣೆ ಆಗದೆ ಇದ್ದರೆ ಕ್ಷೇತ್ರದಲ್ಲಿ ಲಿಂಗಾಯತ ಮುಖಂಡರು ಬಂಡಾಯ ಏಳುವ ಸಾಧ್ಯತೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಸುಮಾರು 60ಸಾವಿರ ಲಿಂಗಾಯತ ಮತಗಳು ಇರುವ ಕಾರಣ ಎಲ್ಲಾ ಲಿಂಗಾಯತ ಮುಖಂಡರು ಒಗ್ಗೂಡಿ ತಮ್ಮ ಜನಾಂಗದ...Kannada News Portal