ಹಾವೇರಿ: ಶಿಗ್ಗಾವಿ ಬಂಡಾಯ ಅಭ್ಯರ್ಥಿ ಸೋಮಣ್ಣ ಬೇವಿನಮರದ  ಕಣದಲ್ಲಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊನೆ ಕ್ಷಣದವರೆಗೂ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸದಂತೆ ಬಿಜೆಪಿ ವರಿಷ್ಠರು ಮಾಡಿದ ಮನವಿಗೆ ಬಂಡಾಯ ಅಭ್ಯರ್ಥಿ ಸ್ಪಂದಿಸದೇ ಕಣದಲ್ಲಿರುವುದು ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ತೊಂದರೆ ಆಗಬಹುದೆಂಬ ಆತಂಕ ಕಾಡುತ್ತಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಹಾಲಿ ಶಾಸಕ ಬಸವರಾಜು ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತನಗೆ ಟಿಕೆಟ್ ನೀಡಬೇಕೆಂದು ಮೊದಲಿನಿಂದಲೂ ಹೋರಾಟ ನಡೆಸುತ್ತಿದ್ದ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ್, ಬೊಮ್ಮಾಯಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಂಡಾಯ ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿದರು. ಪ್ರಾರಂಭದಲ್ಲಿ ಇದನ್ನು ಪಕ್ಷದ ಮುಖಂಡರು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಸೋಮಣ್ಣ ಬೇವಿನಮರದ್ ಇದೀಗ ಕಣದಲ್ಲೇ ಉಳಿಯುವ ಮೂಲಕ ಬೊಮ್ಮಾಯಿ ವಿರುದ್ಧ ತೊಡೆತಟ್ಟಿದ್ದಾರೆ.

Please follow and like us:
0
http://bp9news.com/wp-content/uploads/2018/05/collage-1-2.jpghttp://bp9news.com/wp-content/uploads/2018/05/collage-1-2-150x150.jpgBP9 Bureauರಾಜಕೀಯಹಾವೇರಿಹಾವೇರಿ: ಶಿಗ್ಗಾವಿ ಬಂಡಾಯ ಅಭ್ಯರ್ಥಿ ಸೋಮಣ್ಣ ಬೇವಿನಮರದ  ಕಣದಲ್ಲಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊನೆ ಕ್ಷಣದವರೆಗೂ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸದಂತೆ ಬಿಜೆಪಿ ವರಿಷ್ಠರು ಮಾಡಿದ ಮನವಿಗೆ ಬಂಡಾಯ ಅಭ್ಯರ್ಥಿ ಸ್ಪಂದಿಸದೇ ಕಣದಲ್ಲಿರುವುದು ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ತೊಂದರೆ ಆಗಬಹುದೆಂಬ ಆತಂಕ ಕಾಡುತ್ತಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಹಾಲಿ ಶಾಸಕ ಬಸವರಾಜು ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತನಗೆ ಟಿಕೆಟ್ ನೀಡಬೇಕೆಂದು ಮೊದಲಿನಿಂದಲೂ ಹೋರಾಟ ನಡೆಸುತ್ತಿದ್ದ ವಿಧಾನಪರಿಷತ್ ಸದಸ್ಯ ಸೋಮಣ್ಣ...Kannada News Portal