ಹಾವೇರಿ: ನನ್ನ ಬಳಿ ಹಣವು ಇಲ್ಲ, ನನಗೆ ಗಾಡ್ ಫಾದರ್ ಇಲ್ಲ. ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಸೆ, ಆಮಿಷವೊಡ್ಡಿದ್ದರು, ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಬಹುಷಃ ನಾನು ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲವೇ ನನಗೆ ಸಚಿವ ಸ್ಥಾನ ತಪ್ಪಿರಬಹುದೆಂದು ಹಿರೇಕೆರೂರು ಕ್ಷೇತ್ರದ ಶಾಸಕ , ಖ್ಯಾತ ನಟ ಬಿ.ಸಿ.ಪಾಟೀಲ್ ನೋವಿನಿಂದ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ, ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಗಮನಿಸಿದ ಬಿ.ಸಿ.ಪಾಟೀಲರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಹಾವೇರಿ ಜಿಲ್ಲೆಯ 6ವಿಧಾನಸಭಾ ಕ್ಷೇತ್ರಗಳಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಶಾಸಕ ನಾನಾಗಿದ್ದೆ, ಆದರೆ  ಕಾಂಗ್ರೆಸ್ ಪಕ್ಷ ನನಗೆ ಅನ್ಯಾಯ ಮಾಡಿದೆ ಎಂದು ಬಿ.ಸಿ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಹಣಕ್ಕಾಗಿ, ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿ ನಾನಲ್ಲ, ಅಂತಹ ಭಾವನೆಗಳೂ ನನಗೆ ಇಲ್ಲ, ಆದರೆ ನನಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ, ಇದರಿಂದ ನೋವಾಗಿದೆ, ನನ್ನ ಬೆಂಬಲಿಗರಿಗೂ ನೋವಾಗಿದ ಎಂದು ಅವರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/collage-10.jpghttp://bp9news.com/wp-content/uploads/2018/06/collage-10-150x150.jpgBP9 Bureauಪ್ರಮುಖರಾಜಕೀಯಹಾವೇರಿಹಾವೇರಿ: ನನ್ನ ಬಳಿ ಹಣವು ಇಲ್ಲ, ನನಗೆ ಗಾಡ್ ಫಾದರ್ ಇಲ್ಲ. ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಸೆ, ಆಮಿಷವೊಡ್ಡಿದ್ದರು, ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಬಹುಷಃ ನಾನು ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲವೇ ನನಗೆ ಸಚಿವ ಸ್ಥಾನ ತಪ್ಪಿರಬಹುದೆಂದು ಹಿರೇಕೆರೂರು ಕ್ಷೇತ್ರದ ಶಾಸಕ , ಖ್ಯಾತ ನಟ ಬಿ.ಸಿ.ಪಾಟೀಲ್ ನೋವಿನಿಂದ ಹೇಳಿಕೊಂಡಿದ್ದಾರೆ. var domain = (window.location != window.parent.location)? document.referrer :...Kannada News Portal