ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 2008ರ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದ್ರೋಹಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಶಿವಣ್ಣನವರ ಹಾಗೂ ಸಲೀಂ ಅಹ್ಮದ ಸೋಲಿಗೆ ಕಾರಣರಾದವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರು ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿಗೆ ನೋವುಂಟುಮಾಡಿದ್ದು, ನಾವು ಯಾವುದೇ ಕಾರಣಕ್ಕೂ ಪಕ್ಷದ್ರೋಹಿಯಾಗಿ ಇದೀಗ ಕಾಂಗ್ರೆಸ್ ಪಕ್ಷದ ಟಿಕೆಟ್ ತಂದು ಪಕ್ಷ ನಿಷ್ಠ ಎನ್ನುವ ನಾಟಕವಾಡುತ್ತಿರುವ ಅಭ್ಯರ್ಥಿಯನ್ನು ನಾವು ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ. ನೀವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಶಾಸಕ ಬಸವರಾಜ ಶಿವಣ್ಣನವರಿಗೆ ಪಟ್ಟು ಹಿಡಿದ ಘಟನೆ ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ನಡೆಯಿತು.

ಶಿವಶಕ್ತಿ ಪ್ಯಾಲೇಸ್‌ನಲ್ಲಿ ಕರೆಯಲಾಗಿದ್ದ ಶಾಸಕ ಬಸವರಾಜ ಶಿವಣ್ಣನವರ ಅಭಿಮಾನಿಗಳ ಹಾಗೂ ಬೆಂಬಲಿಗರ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಶಿವಣ್ಣನವರ ಅಭಿಮಾನಿಗಳು, ಶಿವಣ್ಣನವರ ಕ್ಷೇತ್ರದ ಶಾಸಕರಾದ ಮೇಲೆ ಜನಸಾಮನ್ಯರಿಗೆ ಗೌರವ ಬಂದಿದೆ. ಈ ಹಿಂದೆ ಯಾರಾದರೂ ಬಡವರು ಕೆಲಸ ಕೇಳಿ ಬ್ಯಾಡಗಿಯ ಕಾಂಗ್ರೆಸ್ ಮುಖಂಡರ ಮನಗೆ ಹೋದರೆ ನಾಯಿಯನ್ನು ಛೂ ಬಿಟ್ಟು ಓಡಿಸುತ್ತಿದ್ದರು. ಆದರೆ ಬಸವರಾಜ ಶಿವಣ್ಣನವರು ಶಾಸಕರಾದ ಮೇಲೆ ಅವರು ಬಡವರ ಧ್ವನಿಯಾಗಿ ಕೆಲಸಮಾಡುತ್ತಾ ರಾಜಕಾರಣ ಎಂದರೆ ಉಳ್ಳವರ ಸ್ವತ್ತಲ್ಲ, ಅಧಿಕಾರ ಇರುವುದು ಜನಸಮಾನ್ಯರ ಸೇವೆ ಮಾಡಲು ಎನ್ನುವುದನ್ನು ತೋರಿಸಿದ್ದಾರೆ. ಜನಸಾಮನ್ಯರ ನೋವಿಗೆ ಸ್ಫಂದಿಸುವ ನಾಯಕ ಬೇಕೆ ಹೊರತು ನಮಗೆ ನಾಯಿ ಛೂ ಬಿಡುವ ನಾಯಕ ಬೇಕಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ , ನಾನು ರಾಜಕೀಯ ಜೀವನದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನಾಗಿ, ಶಾಸಕನಾಗಿ,ಸಚಿವನಾಗಿ ಕೆಲಸಮಾಡಿದ್ದು, ನಾನು ಎಂದೂ ಟಿಕೆಟ್‌ಗೆ ಬೆನ್ನಹತ್ತಿ ಹೋದವನಲ್ಲ. ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ನೀಡುತ್ತಾ ಬಂದಿದ್ದರು. ರಾಜಕಾರಣದಲ್ಲಿ ಸೋಲು-ಗೆಲುವುಗಳನ್ನು ನಾನು ಕಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ. ಅವರು ಪಕ್ಷಕ್ಕಾಗಿ ದುಡಿಯುವಂತೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಸರ್ಕಾರದಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ನೀವು ಮಾತ್ರ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಬೇಕೆನ್ನುತ್ತಿರುವಿರಿ, ನಾನು ನನ್ನ ಬೆಳೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಕೇಳ ಬೇಕೋ, ನಿಮ್ಮ ಮಾತು ಕೇಳಬೇಕೋ ನೀವೆ ಹೇಳಿ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/04/WhatsApp-Image-2018-04-22-at-11.18.42-PM.jpeghttp://bp9news.com/wp-content/uploads/2018/04/WhatsApp-Image-2018-04-22-at-11.18.42-PM-150x150.jpegBP9 Bureauರಾಜಕೀಯಹಾವೇರಿಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 2008ರ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದ್ರೋಹಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಶಿವಣ್ಣನವರ ಹಾಗೂ ಸಲೀಂ ಅಹ್ಮದ ಸೋಲಿಗೆ ಕಾರಣರಾದವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರು ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿಗೆ ನೋವುಂಟುಮಾಡಿದ್ದು, ನಾವು ಯಾವುದೇ ಕಾರಣಕ್ಕೂ ಪಕ್ಷದ್ರೋಹಿಯಾಗಿ ಇದೀಗ ಕಾಂಗ್ರೆಸ್ ಪಕ್ಷದ ಟಿಕೆಟ್ ತಂದು ಪಕ್ಷ ನಿಷ್ಠ ಎನ್ನುವ ನಾಟಕವಾಡುತ್ತಿರುವ ಅಭ್ಯರ್ಥಿಯನ್ನು ನಾವು ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ. ನೀವು...Kannada News Portal