ಹಾವೇರಿ: ರಾಜ್ಯದಲ್ಲಿ ಕೈ-ದಳ ಸರ್ಕಾರ ರಚನೆಯಾಗಿ ಹದಿನೈದು ದಿನ ಕಳೆದರೂ ಇನ್ನೂ ಸಚಿವ ಸಂಪುಟ ಸರ್ಕಸ್ ಮಾತ್ರ ಮುಗಿದಿಲ್ಲ, ಆದರೆ  ನಾಳೆ ನಡೆಯುವ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭ ಸಂಪುಟ ಸರ್ಕಸ್ಸಿಗೆ ತೆರೆಬಿಳಲಿದೆ.ಆದರೆ ನೂತನ ಮೈತ್ರಿ ಸರ್ಕಾರದ ಮಂತ್ರಿಗಳು ಯಾರು ಯಾರು ಎಂಬದು ಮಾತ್ರ ಇನ್ನೂ ನಿಗೂಢವಾಗಿದೆ.

ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಹಗ್ಗಜಗ್ಗಾಟ ನಡೆದಿರುವ ಹಿನ್ನಲೆಯಲ್ಲಿ, ಹಾವೇರಿ ಜಿಲ್ಲೆಯ ಮಂತ್ರಿಗಿರಿಗಾಗಿ ಹಿರೆಕೇರೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಮತ್ತು ರಾಣೆಬೆನ್ನೂರ ಪಕ್ಷೇತರ ಶಾಸಕ ಆರ್.ಶಂಕರ ಕೂಡ ಕಾಂಗ್ರೆಸ್ ಹೈಕಮಾಂಡ ಮುಂದೆ ಲಾಭಿ ನಡೆಸಿದ್ದಾರೆ. ಆದರೆ, ಹೈಕಮಾಂಡ ಮಾತ್ರ ಇಲ್ಲಿಯವರೆಗೂ ಯಾರು ಹಾವೇರಿ ಜಿಲ್ಲಾ ಉಸ್ತುವಾರಿ ಮಂತ್ರಿ ಎಂಬದನ್ನು ಮಾತ್ರ ಗೊತ್ತು ಪಡಿಸಿಲ್ಲ.

ಶಂಕರಗೆ ಸಮುದಾಯದ ಬಲ: ಸಚಿವ ಸ್ಥಾನ ಪಕ್ಕಾ..?

ಆರ್.ಶಂಕರ ಮೂಲತಃ ಕುರುಬ ಸಮುದಾಯದವರು. ಇವರಿಗೆ ತಮ್ಮ ಸಮುದಾಯದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬೈರತಿ ಬಸವರಾಜ ಅವರು ಸಚಿವ ಸ್ಥಾನದ ಭರವಸೆ ನೀಡಿ ಸರ್ಕಾರಕ್ಕೆ ತಮ್ಮ ಬೆಂಬಲ ಘೋಷಿಸುವಂತೆ ಮನವಿ ಮಾಡಿದ್ದಾರೆ ಎಂಬ ಮಾತು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಆದರೆ, ಮೈತ್ರಿ ಸರ್ಕಾರ ರಚನೆಗೆ ದಳ ಮತ್ತು ಕೈ ಪಕ್ಷಕ್ಕೆ ತಮ್ಮ ಪಕ್ಷದ ೧೧೬ ಸೀಟುಗಳು ಲಭ್ಯವಿರುವ ಕಾರಣ ಪಕ್ಷೇತರ ಶಾಸಕ ಆರ್. ಶಂಕರಗೆ ಸಚಿವ ಸ್ಥಾನ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಆದರೂ ಆಪತ್ತು ಕಾಲದಲ್ಲಿ ಕೈಜೋಡಿಸಿದ ಶಂಕರಗೆ ತಮ್ಮ ಸಮುದಾಯದ ಮುಖಂಡರು ಹೈಕಮಾಂಡ ಮನವೂಲಿಸಿ ಮಂತ್ರಿ ಮಾಡಿದರೂ ಮಾಡಬಹದು.

ಬಿ.ಸಿ.ಪಾಟೀಲ ರಾಜೀನಾಮೆ ಎಚ್ಚರಿಕೆ:

ಹಾವೇರಿ ಜಿಲ್ಲೆಯ 6 ಕ್ಷೇತ್ರದ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈಗಾಗಲೇ ದೆಹಲಿ ಮಟ್ಟದಲ್ಲಿ ಲಾಭಿ ಮಾಡಿದ್ದಾರೆ. ಆದರೆ, ಲಿಂಗಾಯತ ಸಮುದಾಯದಲ್ಲಿ ಈಗಾಗಲೇ ಪ್ರಭಾವಿ ನಾಯಕರು ಸಚಿವ ಸ್ಥಾನಕ್ಕೆ ಬಾರಿ ಪೈಪೋಟಿ ನೀಡುತ್ತಿರುವ ಕಾರಣ ಇವರಿಗೆ ಮಂತ್ರಿಗಿರಿ ಡೌಟ ಎನ್ನಲಾಗುತ್ತಿದೆ.

Please follow and like us:
0
http://bp9news.com/wp-content/uploads/2018/06/collage-2-4.jpghttp://bp9news.com/wp-content/uploads/2018/06/collage-2-4-150x150.jpgBP9 Bureauರಾಜಕೀಯಹಾವೇರಿಹಾವೇರಿ: ರಾಜ್ಯದಲ್ಲಿ ಕೈ-ದಳ ಸರ್ಕಾರ ರಚನೆಯಾಗಿ ಹದಿನೈದು ದಿನ ಕಳೆದರೂ ಇನ್ನೂ ಸಚಿವ ಸಂಪುಟ ಸರ್ಕಸ್ ಮಾತ್ರ ಮುಗಿದಿಲ್ಲ, ಆದರೆ  ನಾಳೆ ನಡೆಯುವ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭ ಸಂಪುಟ ಸರ್ಕಸ್ಸಿಗೆ ತೆರೆಬಿಳಲಿದೆ.ಆದರೆ ನೂತನ ಮೈತ್ರಿ ಸರ್ಕಾರದ ಮಂತ್ರಿಗಳು ಯಾರು ಯಾರು ಎಂಬದು ಮಾತ್ರ ಇನ್ನೂ ನಿಗೂಢವಾಗಿದೆ. ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಹಗ್ಗಜಗ್ಗಾಟ ನಡೆದಿರುವ ಹಿನ್ನಲೆಯಲ್ಲಿ, ಹಾವೇರಿ ಜಿಲ್ಲೆಯ ಮಂತ್ರಿಗಿರಿಗಾಗಿ ಹಿರೆಕೇರೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ...Kannada News Portal