ಬೆಂಗಳೂರು : ನಮ್ಮ ಸಮುದಾಯದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ಕುಮಾರಸ್ವಾಮಿ ತಡೆದು ಬಿಟ್ಟ ಎಂಬ ಆಪಾದನೆ ನನಗೆ ಬೇಡ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಬಿಎಸ್ವೈ ಪ್ರಮಾಣವಚನ ಸ್ವೀಕರಿಸಲು ರಾಜಭವನದಿಂದ ಆಹ್ವಾನ ನೀಡಲಾಗಿದೆ. ಅವರು ಪ್ರತಿಜ್ಞಾ ವಿಧಿಯನ್ನು ಕೂಡ ಪಡೆದಿದ್ದಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದಾರೆ. ನಿಮ್ಮ ನಡೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ನನಗೂ ಈ ಬಗ್ಗೆ ಪ್ರಪೋಸಲ್ ಬಂದಿದೆ. ಆದರೆ ನಾನು ಈ ಪ್ರತಿಭಟನೆಗೆ ಜೆಡಿಎಸ್ ವತಿಯಿಂದ ಸಮ್ಮತಿ ನೀಡಿಲ್ಲ.

ಕಾನೂನು ಹೋರಾಟ ಮಾಡಬೇಕು ಮಾಡುತ್ತೇವೆ. ಪ್ರಮಾಣವಚನ ಸ್ವೀಕರಿಸಿದಾಕ್ಷಣಕ್ಕೆ ಎಲ್ಲಾವೂ ಆದಂತೆ ಅಲ್ಲ. ಬಹುಮತ ಸಾಬೀತು ಮಾಡಬೇಕು. ಆ ವಿಚಾರದಲ್ಲಿ ನಾವು ಏನು ಬಿಜೆಪಿ ತಂತ್ರಗಾರಿಗೆ ಇದೆಯೋ ಅದಕ್ಕೆ ಪ್ರತಿತಂತ್ರ ರೂಪಿಸಬೇಕು. ಆದರೆ ರಾಜ್ಯಾಧ್ಯಂತ ಪ್ರತಿಭಟನೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಏಕೆಂದ್ರೆ ನಮಗೂ ಕೂಡ ಜನ ಪೂರ್ಣ ಬಹುಮತ ನೀಡಿಲ್ಲ. ಅವರಿಗೂ ನೀಡಿಲ್ಲ. ನಾವು ಕಾಂಗ್ರೆಸ್ ಸೇರಿದರೇ ಪ್ರಜಾಪ್ರಭುತ್ವದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಬರುತ್ತದೆ.

ಈಗಿರುವಾಗ ರಾಜ್ಯಪಾಲರು ಏಕೆ ಹೀಗೆ ಮಾಡಿದರು ಎಂಬದು ತಿಳಿಯುತ್ತಿಲ್ಲ ಎಂದ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದೆ ಎಂದು ರಾಜಭವನವನ್ನು ಉಪಯೋಗಿಸಿ ಕೊಂಡು ಕಾನೂನು ಬಾಹೀರವಾಗಿ, ಮ್ಯಾಜಿಕ್ ನಂಬರ್ ಇಲ್ಲದ ಪಕ್ಷದ ನಾಯರಿಗೆ ಮಣೆ ಹಾಕುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ ನೊಡೋಣ ಮುಂದೆ ಏನಾಗುತ್ತೆದೆ ಎಂದಿದ್ದಾರೆ.
ಇದರೊಂದಿಗೆ ಜೆಡಿಎಸ್ ಪಕ್ಷ ವೀರಶೈವ ಲಿಂಗಾಯತ ಸಮುದಾಯವನ್ನು ಕೆರಳಿಸಿ ಅವರ ವಿರೋಧ ಕಟ್ಟಿ ಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಇದರೊಂದಿಗೆ ಕುಮಾರಸ್ವಾಮಿ ರಾಜ್ಯರಾಜಕಾರಣದಲ್ಲಿ ನಡೆಯುತ್ತಿರುವ ಹೈಡ್ರಾಮ ವಿಚಾರವಾಗಿ ಯುಟರ್ನ್ ಹೊಡೆದರೇ ಎಂಬ ಅನುಮಾನಗಳು ಕಾಡುತ್ತಿದೆ.

Please follow and like us:
0
http://bp9news.com/wp-content/uploads/2018/05/kumara-swamai-1.jpghttp://bp9news.com/wp-content/uploads/2018/05/kumara-swamai-1-150x150.jpgBP9 Bureauಪ್ರಮುಖರಾಜಕೀಯI do not want the state's biggest community insurgency !!! : Kumaraswamy Utenಬೆಂಗಳೂರು : ನಮ್ಮ ಸಮುದಾಯದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ಕುಮಾರಸ್ವಾಮಿ ತಡೆದು ಬಿಟ್ಟ ಎಂಬ ಆಪಾದನೆ ನನಗೆ ಬೇಡ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಬಿಎಸ್ವೈ ಪ್ರಮಾಣವಚನ ಸ್ವೀಕರಿಸಲು ರಾಜಭವನದಿಂದ ಆಹ್ವಾನ ನೀಡಲಾಗಿದೆ. ಅವರು ಪ್ರತಿಜ್ಞಾ ವಿಧಿಯನ್ನು ಕೂಡ ಪಡೆದಿದ್ದಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದಾರೆ. ನಿಮ್ಮ ನಡೆ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ನನಗೂ ಈ ಬಗ್ಗೆ ಪ್ರಪೋಸಲ್...Kannada News Portal