ರೌಡಿ ಸೈಕಲ್​ ರವಿ ಅರೆಸ್ಟ್​ ವಿಚಾರಕ್ಕೆ ಸಂಬಂಧಿಸಿದಂತೆ ಹಾಸ್ಯ ನಟ ಸಾಧು ಕೋಕಿಲ ಅವರನ್ನು  ಸಿಸಿಬಿ ಪೊಲೀಸರು ವಿಚಾರಕ್ಕೆ ಒಳಪಡಿಸಿದ್ದಾರೆ ಎಂಬ ವಿಚಾರ ಹೊರಬಂದ  ನಂತರ ಸ್ವತಃ ಸಾಧು ಕೋಕಿಲ ಅವರೇ ಮೊದಲ ಬಾರಿಗೆ  ಪ್ರತಿಕ್ರಿಯೆ ನೀಡಿದ್ದಾರೆ.

ಸಿಸಿಬಿಯಿಂದ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ ಎಂದು  ಕೆಲ ಮಾಧ್ಯಮಗಳು ಸುದ್ದಿ ಮಾಡಿದ್ದರು. ಈ ಮಾಧ್ಯಮಗಳಿಗೆ ಬೇರೆ ಯಾವ ಕೆಲಸವಿಲ್ಲ. ಯಾವ ಮಾಹಿತಿ ಇಲ್ಲದೇ ಹೇಗೆ ಸುದ್ದಿ  ಮಾಡಿದ್ರು ಗೊತ್ತಿಲ್ಲ. ನಾನು ಯಾವ ಬೇನಾಮಿ ಆಸ್ತಿಯನ್ನು ಮಾಡಿಲ್ಲ. ನನಗೆ ಯಾವುದೇ ಭೂಗತ ಲೋಕದ ನಂಟಿಲ್ಲ, ಯಾವ ರೌಡಿಗಳೊಂದಿಗೆ ನಾನು ಸಂಬಂಧವಿಟ್ಟುಕೊಂಡಿಲ್ಲ ಎಂಬ ವಿಚಾರವನ್ನು  ಸಾಮಾಜಿಕ ಜಾಲತಾಣದಲ್ಲಿ  ತಿಳಿಸಿದ್ದಾರೆ.

ನಾನು ಯಾವುದೇ ಮಾಹಿತಿಯನ್ನು ಪೊಲೀಸರಿಗೆ ಕೊಟ್ಟಿಲ್ಲ, ಯಾವ ಸುಳಿವು ಇಲ್ಲ. ನಾನು ಸಿಸಿಬಿಯವರೊಂದಿಗೆ ಮಾತನಾಡಿದ್ದೇನೆ,  ನಾವು ಯಾವ ಮಾಹಿತಿಯನ್ನು ಮಾಧ್ಯಮದವರಿಗೆ ಕೊಟ್ಟಿಲ್ಲ, ಆ ವಿಚಾರವನ್ನು ಮಾಧ್ಯಮಗಳು ಹೇಗೆ ಪ್ರಸಾರ ಮಾಡಿದ್ರು ಎಂಬುದು ನಮಗೆ ಗೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನನಗೆ  ಯಾವ ಅಂಡರ್​ವರ್ಲ್ಡ್​ ಡಾನ್​ಗಳ ಸಂಪರ್ಕ ಇಲ್ಲ. ಸುಖಾಸುಮ್ಮನೆ ಹಬ್ಬಿಸುತ್ತಿರುವ ಮಾಹಿತಿ ಇದಾಗಿದೆ. ಇದು ನನ್ನ ಬಗ್ಗೆ ಪ್ರೀತಿ ವಿಶ್ವಾಸವಿಟ್ಟುಕೊಂಡಿರುವ ಅಭಿಮಾನಿಗಳಿಗೆ ಮನವಿ, ನನ್ನ ಬಗ್ಗೆ ಯಾವುದೇ ಕೆಟ್ಟ ಮಾಹಿತಿ ಸುದ್ದಿಯಾದರೇ ದಯಮಾಡಿ ಅದನ್ನು ನಿರ್ಲಕ್ಷ್ಯ ಮಾಡಿ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/07/Sadhu_Kokila-1.jpghttp://bp9news.com/wp-content/uploads/2018/07/Sadhu_Kokila-1-150x150.jpgBP9 Bureauಪ್ರಮುಖಸಿನಿಮಾರೌಡಿ ಸೈಕಲ್​ ರವಿ ಅರೆಸ್ಟ್​ ವಿಚಾರಕ್ಕೆ ಸಂಬಂಧಿಸಿದಂತೆ ಹಾಸ್ಯ ನಟ ಸಾಧು ಕೋಕಿಲ ಅವರನ್ನು  ಸಿಸಿಬಿ ಪೊಲೀಸರು ವಿಚಾರಕ್ಕೆ ಒಳಪಡಿಸಿದ್ದಾರೆ ಎಂಬ ವಿಚಾರ ಹೊರಬಂದ  ನಂತರ ಸ್ವತಃ ಸಾಧು ಕೋಕಿಲ ಅವರೇ ಮೊದಲ ಬಾರಿಗೆ  ಪ್ರತಿಕ್ರಿಯೆ ನೀಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal