ಜಮ್ಮು –ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ  ಭಾರತೀಯ ಸೇನೆಯ ರೈಫಲ್​ ಮ್ಯಾನ್​ ಔರಂಗ ಜೇಬ್​  ಸಹೋದರ ಇದೀಗ ತಾನು  ಸೇನೆಗೆ  ಸೇರುವ ನಿರ್ಧಾರ ಮಾಡಿದ್ದಾನಂತೆ. ಮಗನನ್ನು ಕಳೆದುಕೊಂಡ ತಂದೆ ತನ್ನ ಮಗನ ಸಾವಿಗೆ ಕಾಣರಾದ ಉಗ್ರರನ್ನು ನಿರ್ನಾಮ ಮಾಡಿ, ಇಲ್ಲವೇ ನನ್ನನ್ನು ಬಿಡಿ  ನಾನು ಆ ಕೆಲಸ ಮಾಡುತ್ತೇನೆ ಎಂದು  ದಃಖತಪ್ತರಾಗಿ ನುಡಿದಿದ್ದರು. ಅಪಹರಣಕ್ಕೊಳಗಾಗಿ ಹತ್ಯೆಯಾದ ಔರಂಗ ಜೇಬ್​ ಕುಟುಂಬ ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ.  ಹಿರಿಯ ಸಹೋದರ ಸಾವಿನಿಂದ 15 ವರ್ಷದ ಆಸಿಮ್​  ಸೇನೆ ನಿರ್ಧಾರ ಏನು ಮಾಡಿಲ್ಲ, ಅದಕ್ಕೂ ಮುಂಚೆ ಆತ ಸೇರುವ  ಬಗ್ಗೆ ಗಂಭೀರ ಆಲೋಚನೆ ಮಾಡಿದ್ದ.  ಸಹೋದರನ ಸಾವಿನಿಂದ ಆ ನಿರ್ಧಾರ ಅಚಲವಾಗಿದೆ ಎಂದು  ದಿವಂಗತ ಸೈನಿಕ ಔರಂಗ ಜೇಬ್​ ಸಹೋದರ ತಿಳಿಸಿದ್ದಾರೆ.

ತಂದೆಯೂ ಕೂಡ ಸಿಪಾಯಿಯಾಗಿಯೇ ಕೆಲಸ ಮಾಡಿದ್ದವರು. ನಮ್ಮ ಕುಟುಂಬದಲ್ಲಿ ಸೇನೆಗೆ ಸೇರುವ ಸಂಪ್ರದಾಯವಿದೆ. ಆದರೆ ಅಣ್ಣನ ಸಾವು ಮೋಸದಿಂದ ಮಾಡಿದ್ದು, ಸಾಯುವ ಮುಂಚೆ ತಮ್ಮನ ಜೊತೆ  ಫೋನಿನಲ್ಲಿ ಮಾತನಾಡಿದ್ರಂತೆ  ಈದ್​ ಪ್ರಯುಕ್ತ ಹೊಸ ಬಟ್ಟೆಗಳು, ಉಡುಗೊರೆಗಳು ಹಾಗೂ ಕ್ರಿಕೆಟ್​ ಬ್ಯಾಟ್​  ತರುವುದಾಗಿ ಹೇಳಿದ್ದರು. ಆದರೆ ಅವನೇ ಇಲ್ಲ ನನಗೆ, ನನ್ನ ಸಹೋದರ ಬೇಕು. ಮೋಸದಿಂದ  ಶಸ್ತ್ರಾಸ್ತ್ರಗಳು ಇಲ್ಲದ  ವೇಳೆ ನೋಡಿಕೊಂಡು ಈ ಕೃತ್ಯವೆಸಗಿದ್ದಾರೆ ಎಂದು ಆಸಿಮ್​ ಹೇಳುತ್ತಾರೆ.  ಈದ್​ ಹಬ್ಬದ ಆಚರಣೆಗಾಗಿ ಮನೆಯತ್ತ ಹೊರಟಿದ್ದಾಗ ಉಗ್ರರು ಅವರನ್ನು ಅಪಹರಿಸಿ, ನಂತರ ಗುಂಡಿಕ್ಕಿ ಸಾಯಿಸಿದರು.

Please follow and like us:
0
http://bp9news.com/wp-content/uploads/2018/06/download-4-4.jpghttp://bp9news.com/wp-content/uploads/2018/06/download-4-4-150x150.jpgBP9 Bureauಪ್ರಮುಖರಾಷ್ಟ್ರೀಯಜಮ್ಮು –ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ  ಭಾರತೀಯ ಸೇನೆಯ ರೈಫಲ್​ ಮ್ಯಾನ್​ ಔರಂಗ ಜೇಬ್​  ಸಹೋದರ ಇದೀಗ ತಾನು  ಸೇನೆಗೆ  ಸೇರುವ ನಿರ್ಧಾರ ಮಾಡಿದ್ದಾನಂತೆ. ಮಗನನ್ನು ಕಳೆದುಕೊಂಡ ತಂದೆ ತನ್ನ ಮಗನ ಸಾವಿಗೆ ಕಾಣರಾದ ಉಗ್ರರನ್ನು ನಿರ್ನಾಮ ಮಾಡಿ, ಇಲ್ಲವೇ ನನ್ನನ್ನು ಬಿಡಿ  ನಾನು ಆ ಕೆಲಸ ಮಾಡುತ್ತೇನೆ ಎಂದು  ದಃಖತಪ್ತರಾಗಿ ನುಡಿದಿದ್ದರು. ಅಪಹರಣಕ್ಕೊಳಗಾಗಿ ಹತ್ಯೆಯಾದ ಔರಂಗ ಜೇಬ್​ ಕುಟುಂಬ ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ.  ಹಿರಿಯ ಸಹೋದರ...Kannada News Portal