ಬಾಲಿವುಡ್​ನಿಂದಿಡಿದೂ ಸ್ಯಾಂಡಲ್​ವುಡ್​ವರೆಗೂ ಸ್ಟಾರ್​ಗಳಷ್ಟೇ ಅಲ್ಲಾ, ಸ್ಟಾರ್​ ಕಿಡ್​ಗಳಿಗೂ ಭಾರೀ ಬೇಡಿಕೆ. ಅಂದಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಮೆರೆದ   ಸ್ಟಾರ್​ ಕಿಡ್​ ತೈಮೂರ್​ ನೆನಪಿರ ಬೇಕಲ್ವಾ. ಅದೇ…  ನಟಿ ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ ದಂಪತಿಯ ಮುದ್ದು ಕುವರ ತೈಮೂರ್​.  ತೈಮೂರ್​ಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ.  ತೈಮೂರ್​ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆದವು. ಮಮ್ಮಿ-ಪ್ಪಪನಾ ಥರವೇ  ಸಿಕ್ಕಾಪಟ್ಟೆ ಫೇಮಸ್​ ಆಗಿದ್ದ ತೈಮೂರ್​ ಅಮ್ಮ ಕರೀನಾಗೆ ಮತ್ತೊಂದು ಸ್ಟಾರ್​ ಕಿಡ್​ಗೆ ಅಮ್ಮನಾಗುವ  ಬಯಕೆ ಇದ್ಯಂತೆ.

ಹೌದು ತೈಮೂರ್​ಗೆ 2 ವರ್ಷವಾಗುತ್ತಿದ್ದಂತೆಯೇ ಮತ್ತೊಂದು ಮಗುವಿಗೆ ತಾಯಾಗುವ ಆಸೆ ಇದೆ ಎಂದಿದ್ದಾರೆ. 2016 ಡಿಸೆಂಬರ್​ 20ರಂದು ತೈಮರ್​ ಹುಟ್ಟಿದ್ದು, ಈಗ ಮುಂದಿನ ವರ್ಷ ಮತ್ತೊಂದು ಮಗುವಿಗಾಗಿ ತಯಾರಿಯಲ್ಲಿದ್ದಾರೆ ನವಾಬ್​ ದಂಪತಿ.  ಹಿಂದೆಲ್ಲಾ ಸ್ಟಾರ್​ ನಾಯಕಿಯರು ತಾವು ಅಮ್ಮನಾಗ್ತಿರುವ ವಿಚಾರವನ್ನ, ಅಮ್ಮನಾಗೋ ಖುಷಿಯನ್ನ  ಮುಚ್ಚಿಡ್ತಾ ಇದ್ರು. ಆದರೆ ಈಗ ನಾಯಕಿಯರು ತಾವು ತಾಯಿಯಾಗೋ ಆಸೆಯನ್ನ, ತಾಯಿಯಾಗ್ತಾ ಇರುವ ವಿಚಾರವನ್ನು ಸೀಕ್ರೆಟ್​ ಆಗಿ ಇಡಲ್ಲ. ಅದಕ್ಕೆ  ತಾಜಾ ಉದಾಹರಣೆ ತೆಲಗು  ಇಂಡಸ್ಟ್ರಿಯ ನಟಿ ಸಮಂತಾ, ತನಗೆ ತಾಯಿಯಾಗೋ ಆಸೆ ಇದೆ. ಆದರೆ ನಾಗಚೈತನ್ಯಗೆ ಸದ್ಯಕ್ಕೆ ಇಷ್ಟ ಇಲ್ಲ ಎನ್ನುತ್ತಿದ್ದಾರೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ಅಲ್ಲದೇ ಸ್ಯಾಂಡಲ್​ವುಡ್​ನ ಮಿಸಸ್​ ರಾಮಾಚಾರಿ ತಾನು ಅಮ್ಮನಾಗ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡು ಸಿಕ್ಕಾಪಟ್ಟೆ ಎಂಜಾಯ್​ ಮಾಡಿದ್ರು.  ಮತ್ತೊಬ್ಬ ನಟಿ ಶ್ವೇತಾ ಶ್ರೀವಾಸ್ತವ್​ ಅವರು  ತುಂಬು ಗರ್ಭಿಣಿಯಲ್ಲಿ  ಹೊಟ್ಟೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಸಿಕ್ಕಾಪಟ್ಟೆ ಎಂಜಾಯ್​ ಮಾಡಿದ್ರು.

Please follow and like us:
0
http://bp9news.com/wp-content/uploads/2018/09/1513185796-kareena-taimur_1_2.jpghttp://bp9news.com/wp-content/uploads/2018/09/1513185796-kareena-taimur_1_2-150x150.jpgBP9 Bureauಸಿನಿಮಾಬಾಲಿವುಡ್​ನಿಂದಿಡಿದೂ ಸ್ಯಾಂಡಲ್​ವುಡ್​ವರೆಗೂ ಸ್ಟಾರ್​ಗಳಷ್ಟೇ ಅಲ್ಲಾ, ಸ್ಟಾರ್​ ಕಿಡ್​ಗಳಿಗೂ ಭಾರೀ ಬೇಡಿಕೆ. ಅಂದಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಮೆರೆದ   ಸ್ಟಾರ್​ ಕಿಡ್​ ತೈಮೂರ್​ ನೆನಪಿರ ಬೇಕಲ್ವಾ. ಅದೇ...  ನಟಿ ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ ದಂಪತಿಯ ಮುದ್ದು ಕುವರ ತೈಮೂರ್​.  ತೈಮೂರ್​ಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ.  ತೈಮೂರ್​ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆದವು. ಮಮ್ಮಿ-ಪ್ಪಪನಾ ಥರವೇ  ಸಿಕ್ಕಾಪಟ್ಟೆ ಫೇಮಸ್​ ಆಗಿದ್ದ ತೈಮೂರ್​...Kannada News Portal