ಮೈಸೂರು : ಪ್ರಗತಿ ಪರ ಚಿಂತಕ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹೇಶಚಂದ್ರ ಗುರುಗೆ ಜೀವ ಬೆದರಿಕೆ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅವರಿಗೆ ಗನ್ ಮೆನ್ ನೀಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರೊ. ಮಹೇಶ್ ಚಂದ್ರಗುರು, ನಿಮಗೆ ನಿಜವಾಗಿಯೂ ತಾಕತ್ ಇದ್ದರೆ ಎದುರಿಗೆ ಬಂದು ಕೊಲ್ಲಿ. ನಾನೇ ಅಂಬೇಡ್ಕರ್ ಪ್ರತಿಮೆ ಎದುರು ಬಂದು ನಿಲ್ಲುತ್ತೇನೆ ಎಂದು ಗುಡುಗಿದ್ದಾರೆ.

ಬೆನ್ನ ಹಿಂದಿನಿಂದ ಬಂದು ಚೂರಿ ಹಾಕುವ ಕೆಲಸ ಮಾಡಬೇಡಿ ಎಂದು ಬಹಿರಂಗ ಸವಾಲ್ ಹಾಕಿದ ಅವರು, ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ವಿರುದ್ಧ ಕಿಡಿ ಕಾರಿರುವ ಅವರು ಹಿಂದುತ್ವವಾದಿಗಳಿಗೆ ಕೇಂದ್ರ ಸರಕಾರ ಬೆಂಬಲ ನೀಡುತ್ತಿದೆ. ಸಿಬಿಐ ಕೂಡ ಅವರ ಅಣತಿಯಂತೆ ನಡೆಯುತ್ತಿದೆ ಎಂದು ಪ್ರೊ. ಮಹೇಶ್ ಚಂದ್ರ ಗುರು ಆಪಾದಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಆರೋಪ ಎದುರಿಸುತ್ತಿರುವ ಪ್ರಶಾಂತ್ ವಾಗ್ಮೋರೆ ಬಂಧನದ ವೇಳೆ ಕೆಲ ಪ್ರಗತಿ ಪರ ಚಿಂತಕರನ್ನು ಕೊಲ್ಲುವ ಪಟ್ಟಿಯಲ್ಲಿ ಕೆ.ಎಸ್. ಭಗವಾನ್, ಮಹೇಶಚಂದ್ರ ಗುರು ಸೇರಿದಂತೆ ಹಲವರ ಹೆಸರಿವೆ ಎಂಬುದನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿತ್ತು.

Please follow and like us:
0
http://bp9news.com/wp-content/uploads/2018/06/23-1435051850-23-1432383396-kumaraswamy3-1.jpghttp://bp9news.com/wp-content/uploads/2018/06/23-1435051850-23-1432383396-kumaraswamy3-1-150x150.jpgPolitical Bureauಪ್ರಮುಖಮೈಸೂರುರಾಜಕೀಯIf Hindutva militants are in trouble then come and fight! Progressive Thinker Pro. Maheshchandra guru !!!ಮೈಸೂರು : ಪ್ರಗತಿ ಪರ ಚಿಂತಕ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹೇಶಚಂದ್ರ ಗುರುಗೆ ಜೀವ ಬೆದರಿಕೆ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅವರಿಗೆ ಗನ್ ಮೆನ್ ನೀಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರೊ. ಮಹೇಶ್ ಚಂದ್ರಗುರು, ನಿಮಗೆ ನಿಜವಾಗಿಯೂ ತಾಕತ್ ಇದ್ದರೆ ಎದುರಿಗೆ ಬಂದು ಕೊಲ್ಲಿ. ನಾನೇ ಅಂಬೇಡ್ಕರ್ ಪ್ರತಿಮೆ ಎದುರು ಬಂದು ನಿಲ್ಲುತ್ತೇನೆ ಎಂದು ಗುಡುಗಿದ್ದಾರೆ. var domain = (window.location != window.parent.location)? document.referrer :...Kannada News Portal