ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯ ವಿಷಯವೆನ್ನುವಂತಾಗಿದೆ. ಯಾಕೆಂದರೆ ಪ್ರತಿಯೊಬ್ಬರು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದಕ್ಕೆ ಮಹಿಳೆಯರು ಮತ್ತು ಪುರುಷರು ಎನ್ನುವ ಭೇದವಿಲ್ಲ. ಕೆಲವರು ಎಲ್ಲರಿಗೂ ತೋರುವಂತಹ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡರೆ ಇನ್ನು ಕೆಲವರು ಯಾರಿಗೂ ಕಾಣದ ಹಾಗೆ ಟ್ಯಾಟೂ ಹಾಕಿಸಿಕೊಳ್ಳುವರು. ತಮಗೆಇಷ್ಟದ ದೇವರು, ತಮ್ಮ ಹೆಸರು, ಪ್ರೀತಿಪಾತ್ರರ ಹೆಸರು ಹಾಗೂ ಬೇರೆ ಬೇರೆ ವಿನ್ಯಾಸದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವರು.

ಅದರಲ್ಲೂ ಇಂದಿನ ಯುವಜನತೆಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಆ ಜಾಗದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಟ್ಯಾಟೂದಿಂದ ಯಾವುದೇ ರೀತಿಯ ಸೋಂಕು ಆಗಿಲ್ಲವೆನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಆರಂಭಿಕ ದಿನಗಳಲ್ಲಿ ಟ್ಯಾಟೂ ಹಾಕಿದ ಜಾಗದ ಬಗ್ಗೆ ಆರೈಕೆ ಮಾಡಿದರೆ ಮತ್ತೆ ಚಿಂತೆ ಮಾಡಬೇಕಿಲ್ಲ. ಟ್ಯಾಟೂ ಹಾಕಿಸಿಕೊಂಡ ಬಳಿಕ ಏನು ಮಾಡಬೇಕು ಎಂದು ನಿಮಗೆ ಇಲ್ಲಿ ಸಲಹೆಗಳನ್ನ ನೀಡಿದ್ದೇವೆ ನೋಡಿ….

ಟ್ಯಾಟೂ ಹಾಕಿಸಿಕೊಂಡ ಬಳಿಕ ಅದನ್ನು ಮುಚ್ಚಬಾರದು. ಯಾಕೆಂದರೆ ಮುಚ್ಚಿದರೆ ಒಣಗಲು ಸಮಸ್ಯೆಯಾಗುವುದು. ಬಟ್ಟೆಯಿಂದ ಮುಚ್ಚಿದರೆ ಅದು ಚರ್ಮಕ್ಕೆ ಉಜ್ಜಿಕೊಂಡು ಒಣಗಲು ಸಮಯ ಬೇಕಾಗಬಹುದು.

ಟ್ಯಾಟೂ ಹಾಕಿಸಿಕೊಂಡ ಮೊದಲ ಕೆಲವು ದಿನಗಳಲ್ಲಿ ಬಿಸಿ ನೀರಿನಿಂದ ಅದನ್ನು ಸ್ವಚ್ಛಗೊಳಿಸಬೇಕು. ಈ ವೇಳೆ ಚರ್ಮವು ಒಣಗುತ್ತಾ ಇರುತ್ತದೆ. ಬಿಸಿ ನೀರು ಚರ್ಮವು ಶಮನವಾಗಲು ನೆರವಾಗುವುದು. ಟ್ಯಾಟೂ ಹಾಕಿದ ಜಾಗವನ್ನು ಉಜ್ಜಬೇಡಿ. ಇದರಿಂದ ಆ ಭಾಗವು ಕೆಂಪು ಬಣ್ಣಕ್ಕೆ ತಿರುಗಬಹುದು. ಈ ರೀತಿ ಟ್ಯಾಟೂ ಆರೈಕೆ ಮಾಡಬಹುದು.

 

 

 

 

ಟ್ಯಾಟೂ ಹಾಕಿಸಿಕೊಂಡ ಕೆಲವು ದಿನಗಳ ಕಾಲ ಚರ್ಮವು ಒಣಗುವುದು ಮತ್ತು ತುರಿ ಇದರಲ್ಲಿ ತುಂಬಿಕೊಳ್ಳುವುದು. ಇದರಿಂದಾಗಿ ಶಮನವಾಗುವ ತುರಿಕೆ ಹಾಗೂ ಕಿರಿಕಿರಿ ಉಂಟಾಗಬಹುದು. ಚರ್ಮಕ್ಕೆ ಮೊಶ್ಚಿರೈಸರ್ ಹಚ್ಚಿಕೊಂಡರೆ ತುಂಬಾ ಒಳ್ಳೆಯದು.
ಟ್ಯಾಟೂ ಹಾಕಿಸಿಕೊಂಡ ಮೊದಲ ಕೆಲವು ದಿನಗಳು ತುಂಬಾ ಪ್ರಾಮುಖ್ಯವಾಗಿರುತ್ತದೆ. ಯಾಕೆಂದರೆ ಚರ್ಮವು ಶಮನವಾಗುತ್ತಿರುತ್ತದೆ. ಈ ವೇಳೆ ಟ್ಯಾಟೂವನ್ನು ಮುಟ್ಟಬಾರದು ಅಥವಾ ಅದನ್ನು ಉಜ್ಜಬಾರದು. ಇದನ್ನು ನೀವು ಪ್ರಮುಖ ಆರೈಕೆಯೆಂದು ಪರಿಗಣಿಸಿ.
ಟ್ಯಾಟೂ ಹಾಕಿಸಿಕೊಂಡ ಆರಂಭದಲ್ಲಿ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಾಕಿಕೊಳ್ಳಿ. ಇದರಿಂದ ಟ್ಯಾಟೂ ತನ್ನ ಬಣ್ಣ ಕಳಕೊಳ್ಳುವುದಿಲ್ಲ.
ಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಆದರೆ ಟ್ಯಾಟೂ ಹಾಕಿಸಿಕೊಂಡ ಜಾಗದ ಬಗ್ಗೆ ಆರೈಕೆ ತುಂಬಾ ಮುಖ್ಯವಾಗಿ ಬೇಕು. ಟ್ಯಾಟೂ ಹಾಕಿಸಿಕೊಂಡ ಆರಂಭದಲ್ಲಿ

 

Please follow and like us:
0
http://bp9news.com/wp-content/uploads/2017/09/201605160636328298_Tattoo-burnig-style_SECVPF.jpghttp://bp9news.com/wp-content/uploads/2017/09/201605160636328298_Tattoo-burnig-style_SECVPF-150x150.jpgFilm Bureauಲೈಫ್​ ಸ್ಟೈಲ್​​ ಗುರುಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯ ವಿಷಯವೆನ್ನುವಂತಾಗಿದೆ. ಯಾಕೆಂದರೆ ಪ್ರತಿಯೊಬ್ಬರು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದಕ್ಕೆ ಮಹಿಳೆಯರು ಮತ್ತು ಪುರುಷರು ಎನ್ನುವ ಭೇದವಿಲ್ಲ. ಕೆಲವರು ಎಲ್ಲರಿಗೂ ತೋರುವಂತಹ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡರೆ ಇನ್ನು ಕೆಲವರು ಯಾರಿಗೂ ಕಾಣದ ಹಾಗೆ ಟ್ಯಾಟೂ ಹಾಕಿಸಿಕೊಳ್ಳುವರು. ತಮಗೆಇಷ್ಟದ ದೇವರು, ತಮ್ಮ ಹೆಸರು, ಪ್ರೀತಿಪಾತ್ರರ ಹೆಸರು ಹಾಗೂ ಬೇರೆ ಬೇರೆ ವಿನ್ಯಾಸದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವರು. ಅದರಲ್ಲೂ ಇಂದಿನ ಯುವಜನತೆಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಆ...Kannada News Portal