ಮಂಗಳೂರು:  ಮಂಗಳೂರಿನ ಹಲವು ಕಡೆ ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್‌ಗಳಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಈ ಹಿಂದೆ ಪಬ್ ಮೇಲೆ ನಡೆದ ದಾಳಿ ಪ್ರಕ್ರಿಯೆಗಳು ಮರುಕಳಿಸಬಹುದು ಎಂದು ವಿಎಚ್‌ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಸಂಗೀತಕ್ಕೆ ವಿರೋಧಿಗಳಲ್ಲ. ಆದರೆ, ಅದರ ಹೆಸರಿನಲ್ಲಿ ಡ್ಯಾನ್ಸ್ ಮತ್ತಿತ್ಯಾದಿಗಳಿಗೆ ವಿರೋಧವಿದೆ. ನಗರದ ಹಲವು ಕಡೆಗಳಲ್ಲಿ ಲೈವ್‌ಬ್ಯಾಂಡ್, ಲೇಡಿಸ್ ಬಾರ್​ಗಳು ತಲೆ ಎತ್ತುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕು ಎಂದರು.


ಇನ್ನು ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಮಾತನಾಡಿ ಮಂಗಳೂರಿನ ಲಾಲ್‌ಬಾಗ್, ಹಂಪನಕಟ್ಟೆ, ಪಂಪ್‌ವೆಲ್ ಮತ್ತಿತರ ಕಡೆಗಳಲ್ಲಿ ಲೇಡಿಸ್ ಬಾರ್, ಲೈವ್‌ಬ್ಯಾಂಡ್, ಪಬ್, ಮಸಾಜ್ ಸೆಂಟರ್‌ಗೆ ಅನುಮತಿ ನೀಡಲಾಗಿದೆ. ಇದರಿಂದ ಅದೆಷ್ಟೋ ಮಕ್ಕಳು ದಾರಿ ತಪ್ಪುವ ಸಾಧ್ಯತೆ  ಲೈವ್​ಬ್ಯಾಂಡ್​ ಆರಂಭವಾದರೆ ವೇಶ್ಯಾವಾಟಿಕೆ ನಡೆಯುವ ಸಾಧ್ಯತೆ ಇರುತ್ತದೆ.  ಯುವಕರೂ ಹಾದಿ ತಪ್ಪುವ ಅಪಾಯವೂ ಇದೆ. ಹಾಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು  ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Please follow and like us:
0
http://bp9news.com/wp-content/uploads/2018/06/Karnatakada-Miditha-75.jpeghttp://bp9news.com/wp-content/uploads/2018/06/Karnatakada-Miditha-75-150x150.jpegBP9 Bureauಮಂಗಳೂರುಮಂಗಳೂರು:  ಮಂಗಳೂರಿನ ಹಲವು ಕಡೆ ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್‌ಗಳಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಈ ಹಿಂದೆ ಪಬ್ ಮೇಲೆ ನಡೆದ ದಾಳಿ ಪ್ರಕ್ರಿಯೆಗಳು ಮರುಕಳಿಸಬಹುದು ಎಂದು ವಿಎಚ್‌ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಸಂಗೀತಕ್ಕೆ ವಿರೋಧಿಗಳಲ್ಲ. ಆದರೆ, ಅದರ ಹೆಸರಿನಲ್ಲಿ ಡ್ಯಾನ್ಸ್ ಮತ್ತಿತ್ಯಾದಿಗಳಿಗೆ ವಿರೋಧವಿದೆ. ನಗರದ ಹಲವು ಕಡೆಗಳಲ್ಲಿ ಲೈವ್‌ಬ್ಯಾಂಡ್, ಲೇಡಿಸ್ ಬಾರ್​ಗಳು...Kannada News Portal