ಬೆಂಗಳೂರು: ತುರುವೇಕೆರೆಯಲ್ಲಿ ಶಿಕ್ಷಕರೊಬ್ಬರು ಜೆಡಿಎಸ್ ಪಕ್ಷಕ್ಕೆ 25 ಅಂಚೆ ಮತಗಳನ್ನ ಹಾಕಿದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಶಂಕರಶೆಟ್ಟಿ ಎಂಬುವರೆ ಆರೋಪಕ್ಕೆ ಒಳಗಾಗಿರುವ ಶಿಕ್ಷಕ. ತುರುವೇಕೆರೆಯ ತಾಲೂಕು ಕಚೇರಿಯಲ್ಲಿಅಂಚೆಮತ ವಿಭಾಗದಲ್ಲಿ ಈ ಕೆಲಸ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿಯೇ ಇದ್ದ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಸಂಬಂಧ ತುರುವೇಕೆರೆಯ ತಾಲೂಕು ಕಚೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.  ಈ ಸಮಯದಲ್ಲಿ ಶಿಕ್ಷಕ ಶಂಕರಶೆಟ್ಟಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು ಎನ್ನಲಾಗಿದೆ. ಈ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ತನಿಖೆ ಮುಂದುವರಿದಿದೆ.

 

Please follow and like us:
0
http://bp9news.com/wp-content/uploads/2018/05/a15a7279f98eac9d77407e9cd1c2f6d6_XL.jpghttp://bp9news.com/wp-content/uploads/2018/05/a15a7279f98eac9d77407e9cd1c2f6d6_XL-150x150.jpgBP9 Bureauತುಮಕೂರುಪ್ರಮುಖಬೆಂಗಳೂರು: ತುರುವೇಕೆರೆಯಲ್ಲಿ ಶಿಕ್ಷಕರೊಬ್ಬರು ಜೆಡಿಎಸ್ ಪಕ್ಷಕ್ಕೆ 25 ಅಂಚೆ ಮತಗಳನ್ನ ಹಾಕಿದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಶಂಕರಶೆಟ್ಟಿ ಎಂಬುವರೆ ಆರೋಪಕ್ಕೆ ಒಳಗಾಗಿರುವ ಶಿಕ್ಷಕ. ತುರುವೇಕೆರೆಯ ತಾಲೂಕು ಕಚೇರಿಯಲ್ಲಿಅಂಚೆಮತ ವಿಭಾಗದಲ್ಲಿ ಈ ಕೆಲಸ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿಯೇ ಇದ್ದ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಸಂಬಂಧ ತುರುವೇಕೆರೆಯ ತಾಲೂಕು ಕಚೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ...Kannada News Portal