shruthi hariharanಸ್ಯಾಂಡಲ್​ವುಡ್​: ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಶೃತಿ ಹರಿಹರನ್​ ಮತ್ತೆ ಸುದ್ದಿಯಾಗಿದ್ದಾರೆ. ಹೌದು… ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿ ಸಖತ್​ ಸುದ್ದಿ ಮಾಡಿದ್ದ ಶೃತಿ ಈಗ ತಮ್ಮ ಮದುವೆ ವಿಚಾವಾಗಿ ಮತ್ತೆ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಶೃತಿ ಹರಿಹರನ್​ ಅವರು ಕದ್ದು ಮುಚ್ಚಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಕೆಂಡಾಮಂಡಲರಾಗಿದ್ದ ಶೃತಿ, ನಾನು ಮದುವೆ ಆಗುವುದಾದರೆ ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ. ಕದ್ದು ಮುಚ್ಚಿ ಮದುವೆಯಾಗುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದರು. ಆದರೆ ಯುಗಾಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡುವ ಮೂಲಕ ಎಲ್ಲರಿಗೂ ಶಾಕಿಂಗ್​ ಸುದ್ದಿ ನೀಡಿದ್ದಾರೆ.

shruthi hariharanಯುಗಾಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಶೃತಿ ‘‘ಈಗಾಗಲೇ ನಾನು ಮಾನಸಿಕವಾಗಿ ಮದುವೆಯಾಗಿದ್ದು, ನನ್ನ ತಂದೆ ತಾಯಿಯವರ ಇಷ್ಟದಂತೆ ಮತ್ತೆ ಮದುವೆಯಾಗಬೇಕಾಗಿದೆ’’ ಎಂಬ ಮಾತನ್ನು ಹೇಳಿದ್ದು ಅವರು ಪ್ರೀತಸುತ್ತಿರುವ ವಿಚಾರವನ್ನು ರಿವೀಲ್​ ಮಾಡಿದ್ದಾರೆ.

shruthi hariharanನಾನೆಂದು ಸಿಂಗಲ್​ ಎಂದು ಎಲ್ಲಿಯೂ ಹೇಳಿಲ್ಲ ಎಂದು ಹೇಳಿರುವ ಅವರು ಕಳೆದ 7 ವರ್ಷದಿಂದ ಪ್ರೀತಿಸುತ್ತಿರುವ ವಿಷಯವನ್ನು ತಿಳಿಸಿದ್ದಾರೆ.  ಶೃತಿ ಹರಿಹರನ್​ ಅವರ ಕನಸಿನ ರಾಜ ನೃತ್ಯ ನಿರ್ದೇಶಕ ರಾಮ್​ ಕುಮಾರ್​, ಇಬ್ಬರು ಡಾನ್ಸ್​ ಕ್ಲಾಸ್​ಗೆ ಹೋಗುತ್ತಿರುವಾಗಲೆ ಪ್ರೇಮಾಂಕುರವಾಗಿದ್ದು ಇವರಿಬ್ಬರು ಅಂದಿನಿಂದ ರಿಲೇಷನ್​ಶಿಪ್​ನಲ್ಲಿ ಇದ್ದಾರೆ.

Please follow and like us:
0
http://bp9news.com/wp-content/uploads/2018/03/111.pnghttp://bp9news.com/wp-content/uploads/2018/03/111-150x150.pngBP9 News Bureauಸಿನಿಮಾshruthi hariharanಸ್ಯಾಂಡಲ್​ವುಡ್​: ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಶೃತಿ ಹರಿಹರನ್​ ಮತ್ತೆ ಸುದ್ದಿಯಾಗಿದ್ದಾರೆ. ಹೌದು… ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿ ಸಖತ್​ ಸುದ್ದಿ ಮಾಡಿದ್ದ ಶೃತಿ ಈಗ ತಮ್ಮ ಮದುವೆ ವಿಚಾವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಶೃತಿ ಹರಿಹರನ್​ ಅವರು ಕದ್ದು ಮುಚ್ಚಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಕೆಂಡಾಮಂಡಲರಾಗಿದ್ದ ಶೃತಿ, ನಾನು ಮದುವೆ ಆಗುವುದಾದರೆ ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ. ಕದ್ದು ಮುಚ್ಚಿ ಮದುವೆಯಾಗುವ ಅವಶ್ಯಕತೆ...Kannada News Portal