ಬೆಂಗಳೂರು: ಕೆಪಿಸಿಸಿ ಕಚೇರಿ ಇವತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಈ ಸಭೆಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದರು. ಈ ಸಭೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮುಂದಿನ ನಡೆ ಏನು ಅನ್ನೋ ವಿಚಾರವನ್ನು ಚರ್ಚಿಸಲಾಯಿತು.

ಸಿದ್ದರಾಮಯ್ಯ ಬಹುಮತ ಬರಲಿಲ್ಲ ಅಂತ ಶಾಕ್‌ ಆಗಿದ್ರಂತೆ. ಈ ಸಂದರ್ಭದಲ್ಲಿ  ಸಿದ್ದರಾಮಯ್ಯ ಮತ್ತು ಧರ್ಮಸೇನ ಗಳಗಳ ಕಣ್ಣೀರು ಹಾಕಿದ್ರಂತೆ. ಉತ್ತಮ ಆಡಳಿತ ಕೊಟ್ಟರು ಬಹುಮತ ಸಿಗಲಿಲ್ಲ.  ಒಳ್ಳೆ  ರೀತಿಯಲ್ಲಿ ಸರ್ಕಾರ ನಡೆಸಿದ್ರೂ, ಅಭಿವೃದ್ಧಿ ಪರ ಶ್ರಮಿಸಿದ್ರೂ ಜನ ಆಶೀರ್ವಾದ ಮಾಡಲಿಲ್ಲ ವೋಟ್‌ ಹಾಕಲಿಲ್ಲ ಅಂತ ಅತ್ಯಂತ ಭಾವುಕರಾಗಿದ್ರು.

ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಒಟ್ಟು 78 ನಾಯಕರಲ್ಲಿ ಮೂರ್ನಾಲ್ಕು ನಾಯಕರು ಗೈರಾಗಿದ್ದರು. ಈ ಸಭೆಯಲ್ಲಿ ಯಾರು ಶಾಸಕಾಂಗ ನಾಯಕ ಎಂಬುದನ್ನು ಚರ್ಚೆ ಮಾಡಿಲ್ಲ ಎನ್ನಲಾಗಿದೆ. ಮುಂದೆ ಸಮ್ಮಿಶ್ರ  ಸರ್ಕಾರ ಯಾವ ರೀತಿ ಮಾಡಬೇಕು ಅನ್ನೋ ಸಮಾಲೋಚನೆ ಮಾಡಲಾಗಿದೆ. ಇನ್ನು ರಾಜ್ಯಪಾಲರು ಸರ್ಕಾರ ಮಾಡಲು ಅವಕಾಶ ಕೊಡದಿದ್ದರೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಮುಖಂಡರು ಚರ್ಚಿಸಿದ್ರು. ರಾಜ್ಯಪಾಲರ ಮುಂದೆ ಜೆಡಿಎಸ್‌ ಮತ್ತು ಕಾಂಗ್ರೆಸ್‌  ಶಾಸಕರು ಪರೇಡ್‌ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಕೈ ತಂತ್ರ, ದಳ ತಂತ್ರಗಳ ಬಗ್ಗೆ ಅನೇಕ ಮಾತುಕತೆಗಳು ನಡೆದವು ಎನ್ನಲಾಗಿದೆ.

 

Please follow and like us:
0
http://bp9news.com/wp-content/uploads/2018/05/dc-Cover-qnkos5lktdb3cpu3ktbk5tjo40-20160730064337.Medi_.jpeghttp://bp9news.com/wp-content/uploads/2018/05/dc-Cover-qnkos5lktdb3cpu3ktbk5tjo40-20160730064337.Medi_-150x150.jpegBP9 Bureauಪ್ರಮುಖ  ಬೆಂಗಳೂರು: ಕೆಪಿಸಿಸಿ ಕಚೇರಿ ಇವತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಈ ಸಭೆಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದರು. ಈ ಸಭೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮುಂದಿನ ನಡೆ ಏನು ಅನ್ನೋ ವಿಚಾರವನ್ನು ಚರ್ಚಿಸಲಾಯಿತು. ಸಿದ್ದರಾಮಯ್ಯ ಬಹುಮತ ಬರಲಿಲ್ಲ ಅಂತ ಶಾಕ್‌ ಆಗಿದ್ರಂತೆ. ಈ ಸಂದರ್ಭದಲ್ಲಿ  ಸಿದ್ದರಾಮಯ್ಯ ಮತ್ತು ಧರ್ಮಸೇನ ಗಳಗಳ ಕಣ್ಣೀರು ಹಾಕಿದ್ರಂತೆ. ಉತ್ತಮ ಆಡಳಿತ ಕೊಟ್ಟರು ಬಹುಮತ ಸಿಗಲಿಲ್ಲ.  ಒಳ್ಳೆ  ರೀತಿಯಲ್ಲಿ...Kannada News Portal