ಮುಂಬೈ: ಡಾಲರ್​ ಎದುರು ರೂಪಾಯಿ ವಿನಿಮಯ ದರ 14 ಪೈಸೆ ಸುಧಾರಿಸಿರುವುದನ್ನು ಅನುಸರಿಸಿ, ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಷೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬೈ ಷೇರುಪೇಟೆಯಲ್ಲಿ ಇಂದು 112 ಅಂಕಗಳ ಉತ್ತಮ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.

ಸೆನ್ಸೆಕ್ಸ್​
ಸೆನ್ಸೆಕ್ಸ್​

ಏಷ್ಯನ್​ ಷೇರು ಮಾರುಕಟ್ಟೆಯಲ್ಲಿ ತೇಜಿ ಉತ್ತಮಗೊಂಡಿರುವುದು ಕಂಡು ಬಂದಿದೆ. ಮಂಗಳವಾರದ ವಹಿವಾಟನ್ನು ಅಮೆರಿಕದ ವಾಲ್​ಸ್ಟ್ರೀಟ್​ ಮೇಲ್ಮಟ್ಟದಲ್ಲಿ ಕೊನೆಗೊಳಿಸಿರುವುದು ಇಂದು ಮುಂಬೈ ಷೇರು ಪೇಟೆಗೆ ಹೊಸ ಉತ್ಸಾಹ ನೀಡಿದೆ. ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್​ 717.91 ಅಂಕ ಸಂಪಾದಿಸಿರುವುದು ಮುಂಬೈ ಷೇರು ಪೇಟೆಯಲ್ಲಿ ಗೂಳಿಯ ಸಂಭ್ರಮಕ್ಕೆ ಕಾರಣವಾಗಿದೆ. ಬೆಳಗ್ಗೆ 11 ರ ನಂತರ ಸೆನ್ಸೆಕ್ಸ್​ 50.66 ಅಂಕಗಳ ಮುನ್ನಡೆ ಕಾಯ್ದುಕೊಂಡು 33,529.01 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.10 ಅಂಕಗಳ ಮುನ್ನಡೆ ಕಾಯ್ದುಕೊಂಡು 10,330.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು ಎಂದು ವಿಶ್ಲೇಷಕರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2017/11/BSE_-_Bombay_Stock_Exchange_Building-1024x857.jpghttp://bp9news.com/wp-content/uploads/2017/11/BSE_-_Bombay_Stock_Exchange_Building-150x150.jpgBP9ತಂತ್ರಜ್ಞಾನಪ್ರಮುಖರಾಷ್ಟ್ರೀಯIncrease in Sensex: Bullion Rally in Stock Market,Index,Mumbaiಮುಂಬೈ: ಡಾಲರ್​ ಎದುರು ರೂಪಾಯಿ ವಿನಿಮಯ ದರ 14 ಪೈಸೆ ಸುಧಾರಿಸಿರುವುದನ್ನು ಅನುಸರಿಸಿ, ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಷೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬೈ ಷೇರುಪೇಟೆಯಲ್ಲಿ ಇಂದು 112 ಅಂಕಗಳ ಉತ್ತಮ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ. ಏಷ್ಯನ್​ ಷೇರು ಮಾರುಕಟ್ಟೆಯಲ್ಲಿ ತೇಜಿ ಉತ್ತಮಗೊಂಡಿರುವುದು ಕಂಡು ಬಂದಿದೆ. ಮಂಗಳವಾರದ ವಹಿವಾಟನ್ನು ಅಮೆರಿಕದ ವಾಲ್​ಸ್ಟ್ರೀಟ್​ ಮೇಲ್ಮಟ್ಟದಲ್ಲಿ ಕೊನೆಗೊಳಿಸಿರುವುದು ಇಂದು ಮುಂಬೈ ಷೇರು ಪೇಟೆಗೆ ಹೊಸ ಉತ್ಸಾಹ ನೀಡಿದೆ. ನಾಲ್ಕು ದಿನಗಳ ವಹಿವಾಟಿನಲ್ಲಿ...Kannada News Portal