ಚೆನ್ನೈ: ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ( PRL )ವಿಜ್ಞಾನಿಗಳ ತಂಡವು ಶನಿಗ್ರಹಕ್ಕಿಂತ ಸ್ವಲ್ಪ ಚಿಕ್ಕದಾದ ಹಾಗೂ ನೆಪ್ಚೂನ್ಗಿಂತ ದೊಡ್ಡ ಗಾತ್ರದ ನೂತನ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ.

ಇದು ಭೂಮಿ ದ್ರವ್ಯರಾಶಿಯ 27 ಪಟ್ಟು ಮತ್ತು ಭೂಮಿಯ ತ್ರಿಜ್ಯಕ್ಕಿಂತ ಆರು ಪಟ್ಟು ಹೆಚ್ಚು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಈ ಗ್ರಹ ಸೂರ್ಯನಂತಹ ನಕ್ಷತ್ರವೊಂದರ ಸುತ್ತ ಸುತ್ತುತ್ತಿದ್ದು, ಭೂಮಿಯಿಂದ ಸುಮಾರು 600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಲಾಗುತ್ತಿದೆ.

ಮೌಂಟ್ ಅಬುವಿನಲ್ಲಿರುವ ಪಿಆರ್ಎಲ್ನ ಗುರುಶಿಖರ್ ವೀಕ್ಷಣಾಲಯದಲ್ಲಿ 1.2 ಮೀ. ದೂರದರ್ಶಕದೊಂದಿಗೆ ಸಂಯೋಜಿತವಾಗಿರುವ ಅಡ್ವಾನ್ಸ್ ರೇಡಿಯಲ್-ವೆಲಾಸಿಟಿ ಅಬು-ಸ್ಕೈ ಸರ್ಚ್ (ಪಿಎಆರ್ಎಎಸ್) ಸ್ಪೆಕ್ಟ್ರೋಗ್ರಾಫ್ ಬಳಸಿಕೊಂಡು ಈ ಗ್ರಹವನ್ನು ಪತ್ತೆಮಾಡಲಾಗಿದೆ.

ಈ ಗ್ರಹಕ್ಕೆ ವಿಜ್ಞಾನಿಗಳು EPIC 211945201b or K2-236b ಎಂದು ಹೆಸರಿಟ್ಟಿದ್ದಾರೆ. ಈ ಗ್ರಹ ಸೂರ್ಯನನ್ನು ಒಂದು ಬಾರಿ ಸುತ್ತಲು 19.5 ದಿನ ತೆಗೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/ES-image-1-5.jpghttp://bp9news.com/wp-content/uploads/2018/06/ES-image-1-5-150x150.jpgPolitical Bureauಅಂತಾರಾಷ್ಟ್ರೀಯತಂತ್ರಜ್ಞಾನಪ್ರಮುಖರಾಷ್ಟ್ರೀಯIndian scientists discover new planetಚೆನ್ನೈ: ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ( PRL )ವಿಜ್ಞಾನಿಗಳ ತಂಡವು ಶನಿಗ್ರಹಕ್ಕಿಂತ ಸ್ವಲ್ಪ ಚಿಕ್ಕದಾದ ಹಾಗೂ ನೆಪ್ಚೂನ್ಗಿಂತ ದೊಡ್ಡ ಗಾತ್ರದ ನೂತನ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ. ಇದು ಭೂಮಿ ದ್ರವ್ಯರಾಶಿಯ 27 ಪಟ್ಟು ಮತ್ತು ಭೂಮಿಯ ತ್ರಿಜ್ಯಕ್ಕಿಂತ ಆರು ಪಟ್ಟು ಹೆಚ್ಚು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಈ ಗ್ರಹ ಸೂರ್ಯನಂತಹ ನಕ್ಷತ್ರವೊಂದರ ಸುತ್ತ ಸುತ್ತುತ್ತಿದ್ದು, ಭೂಮಿಯಿಂದ ಸುಮಾರು 600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಲಾಗುತ್ತಿದೆ. var domain = (window.location...Kannada News Portal