ಬೆಂಗಳೂರು : ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ಕೆಲಸ ಮಾಡಲು ಅವಕಾಶ ಮಾಡಿಕೊಡುವ ಗ್ರೀನ್ ಕಾರ್ಡ್ ಪಡೆಯಲು ಸ್ನಾತಕೋತ್ತರ ಪದವಿ ಪಡೆದಿರುವ ಭಾರತೀಯರು 151 ವರ್ಷ ಕಾಯಬೇಕಾಗುತ್ತದೆ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ಹೇಳಿದೆ. 2017ರಲ್ಲಿ ಅಮೆರಿಕವು ಭಾರತೀಯರಿಗೆ ನೀಡಿರುವ ಗ್ರೀನ್‌ಕಾರ್ಡ್ ಮತ್ತು ಗ್ರೀನ್‌ಕಾರ್ಡ್‌ಗಾಗಿ 2018ರಲ್ಲಿ ಅರ್ಜಿ ಸಲ್ಲಿಸಿರುವ ಭಾರತೀಯರ ಸಂಖ್ಯೆಯನ್ನು ಲೆಕ್ಕಹಾಕಿ ಕ್ಯಾಟೊ ಇನ್‌ಸ್ಟಿಟ್ಯೂಟ್ ಈ ಮಾಹಿತಿ ನೀಡಿದೆ.

ಮೂರು ವರ್ಗಗಳು :

ಶಿಕ್ಷಣ ಮತ್ತು ಪ್ರತಿಭೆಯನ್ನು ಆಧರಿಸಿ ವಲಸಿಗರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಅತ್ಯುನ್ನತ ಶಿಕ್ಷಣ ಮತ್ತು ಪರಿಣತರದ್ದು ಮೊದಲನೇ ವರ್ಗ (ಎಕ್ಸಟ್ರಾಆರ್ಡಿನರಿ ಎಬಿಲಿಟಿ: ಇಬಿ1), ಸ್ನಾತಕೋತ್ತರ ಪದವವೀಧರರದ್ದು ಎರಡನೇ ವರ್ಗ (ಅಡ್ವಾನ್ಸ್ಡ್ ಡಿಗ್ರಿ: ಇಬಿ2) ಮತ್ತು ಸಾಮಾನ್ಯ ಪದವೀಧರರದ್ದು ಮೂರನೇ ವರ್ಗ (ಬ್ಯಾಚುಲರ್ಸ್ ಡಿಗ್ರಿ: ಇಬಿ–3). ಮೂರೂ ವರ್ಗಕ್ಕೂ ಪ್ರತಿ ವರ್ಷ ನಿಗದಿತ ಸಂಖ್ಯೆಯ ಗ್ರೀನ್‌ ಕಾರ್ಡ್‌ಗಳನ್ನಷ್ಟೇ ನೀಡಲಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುವುದರಿಂದ, ಹಲವು ವರ್ಷಗಳಿಂದ ಅರ್ಜಿಗಳು ಬಾಕಿ ಉಳಿದಿವೆ. ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆಯ ಲೆಕ್ಕಾಚಾರದಲ್ಲಿ ಮೂರೂ ವರ್ಗದ ಅರ್ಜಿದಾರರು ಕ್ರಮವಾಗಿ 6, 151 ಮತ್ತು 17 ವರ್ಷ ಕಾಯಬೇಕಾಗುತ್ತದೆ.

ಅಮೆರಿಕದ ವಲಸಿಗರ ವ್ಯವಹಾರಗಳ ಕಚೇರಿ ಮುಂದಿರುವ ಭಾರತೀಯರ ಅರ್ಜಿಗಳು (ಇಂಡಿಕೇಟರ್‌ಗಳು) ,ಪ್ರತಿ ವರ್ಗದಲ್ಲಿ ಅಮೆರಿಕ ನಿಗದಿ ಮಾಡಿರುವ ಗ್ರೀನ್‌ಕಾರ್ಡ್‌ಗಳ ಸಂಖ್ಯೆ , ಗ್ರೀನ್‌ಕಾರ್ಡ್‌ಗೆ ಅರ್ಜಿಸಲ್ಲಿಸಿರುವ ಭಾರತೀಯ ಉದ್ಯೋಗಿಗಳು – ಉದ್ಯೋಗಿಗಳ ಸಂಗಾತಿಗಳು ಮತ್ತು ಮಕ್ಕಳು , 2017ರಲ್ಲಿ ಭಾರತೀಯರಿಗೆ ನೀಡಲಾದ ಗ್ರೀನ್‌ಕಾರ್ಡ್‌ಗಳು :

ಇಬಿ1 :

40,040

34,824+48,754

13,082

ಈ ವರ್ಗದಲ್ಲಿ ಯಾವುದೇ ದೇಶಕ್ಕೆ ನೀಡಬಹುದಾದ ಗ್ರೀನ್‌ಕಾರ್ಡ್‌ಗಳ ಸಂಖ್ಯೆಯ ಮೇಲೆ ಮಿತಿ ಇಲ್ಲ. ಅಲ್ಲದೆ ಈ ವರ್ಗದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯೂ ಕಡಿಮೆ. ಹೀಗಾಗಿ ಈ ಗ್ರೀನ್‌ಕಾರ್ಡ್‌ಗಳನ್ನು ಪಡೆಯಲು ಭಾರತೀಯರು 6 ವರ್ಷವಷ್ಟೇ ಕಾಯಬೇಕಾಗುತ್ತದೆ

ಇಬಿ2 :

40,040

2.16 ಲಕ್ಷ+2.16 ಲಕ್ಷ

2,879

ಈ ಗ್ರೀನ್‌ಕಾರ್ಡ್‌ಗಳಿಗಾಗಿ ಎಲ್ಲ ದೇಶದವರೂ ಭಾರಿ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಸುವವರಲ್ಲಿ ಭಾರತೀಯರದ್ದು ಮೊದಲ ಸ್ಥಾನ. ಒಟ್ಟು ಗ್ರೀನ್‌ಕಾರ್ಡ್‌ಗಳಲ್ಲಿ ಪ್ರತಿ ದೇಶಕ್ಕೆ ಶೇ 7ರಷ್ಟು ಕಾರ್ಡ್‌ಗಳನ್ನು ಮಾತ್ರ ನೀಡಲಾಗುತ್ತದೆ. ಆದ್ದರಿಂದಲೇ ಲಕ್ಷಾಂತರ ಭಾರತೀಯರ ಅರ್ಜಿಗಳು ಹಿಂಬಾಕಿಯಾಗಿವೆ. ಹೀಗಾಗಿಯೇ ಆ ಎಲ್ಲ ಅರ್ಜಿದಾರರಿಗೆ ಗ್ರೀನ್‌ಕಾರ್ಡ್ ಸಿಗಲು ಇನ್ನೂ 151 ವರ್ಷ ಬೇಕಾಗುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ 151ಕ್ಕಿಂತಲೂ ಹೆಚ್ಚು ವರ್ಷ ಬೇಕಾಗುತ್ತದೆ

ಇಬಿ3 :

40,040

54,892+60,381

6,641

ಪ್ರತಿ ದೇಶಕ್ಕೆ ಈ ವರ್ಗದ ಶೇ 7ರಷ್ಟು ಕಾರ್ಡ್‌ಗಳನ್ನು ಮೀಸಲಿರಿಸಲಾಗುತ್ತದೆ. ಆದರೆ ಈ ವರ್ಗಕ್ಕೆ ಹೆಚ್ಚಿನ ಜನರು ಅರ್ಜಿ ಹಾಕುವುದಿಲ್ಲ. ಹೀಗಾಗಿ ಆ ಮೀಸಲು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರುತ್ತದೆ. ಅರ್ಜಿ ಹಾಕುವವರಲ್ಲಿ ಭಾರತೀಯರೇ ಹೆಚ್ಚು ಇರುವುದರಿಂದ 2017ರಲ್ಲಿ ಭಾರತೀಯರಿಗೆ ಒಟ್ಟು ಗ್ರೀನ್‌ಕಾರ್ಡ್‌ಗಳಲ್ಲಿ ಶೇ 18ರಷ್ಟು ಕಾರ್ಡ್‌ಗಳು ಲಭಿಸಿವೆ.

3.06 ಲಕ್ಷ ಗ್ರೀನ್‌ಕಾರ್ಡ್‌ನ ಭಾರತೀಯ ಪ್ರಾಥಮಿಕ ಅರ್ಜಿದಾರರು , 3.25 ಲಕ್ಷ ಪ್ರಾಥಮಿಕ ಅರ್ಜಿದಾರರ ಸಂಗಾತಿಗಳು ಮತ್ತು ಮಕ್ಕಳು , 22,602 2017ರಲ್ಲಿ ಭಾರತೀಯರಿಗೆ ನೀಡಲಾದ ಗ್ರೀನ್‌ಕಾರ್ಡ್‌ಗಳು .

ಆಧಾರ: ಪಿಟಿಐ

Please follow and like us:
0
http://bp9news.com/wp-content/uploads/2018/06/ind-1.jpghttp://bp9news.com/wp-content/uploads/2018/06/ind-1-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯIndians do not have USA Grain Card !!! Why do ???ಬೆಂಗಳೂರು : ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ಕೆಲಸ ಮಾಡಲು ಅವಕಾಶ ಮಾಡಿಕೊಡುವ ಗ್ರೀನ್ ಕಾರ್ಡ್ ಪಡೆಯಲು ಸ್ನಾತಕೋತ್ತರ ಪದವಿ ಪಡೆದಿರುವ ಭಾರತೀಯರು 151 ವರ್ಷ ಕಾಯಬೇಕಾಗುತ್ತದೆ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ಹೇಳಿದೆ. 2017ರಲ್ಲಿ ಅಮೆರಿಕವು ಭಾರತೀಯರಿಗೆ ನೀಡಿರುವ ಗ್ರೀನ್‌ಕಾರ್ಡ್ ಮತ್ತು ಗ್ರೀನ್‌ಕಾರ್ಡ್‌ಗಾಗಿ 2018ರಲ್ಲಿ ಅರ್ಜಿ ಸಲ್ಲಿಸಿರುವ ಭಾರತೀಯರ ಸಂಖ್ಯೆಯನ್ನು ಲೆಕ್ಕಹಾಕಿ ಕ್ಯಾಟೊ ಇನ್‌ಸ್ಟಿಟ್ಯೂಟ್ ಈ ಮಾಹಿತಿ ನೀಡಿದೆ. ಮೂರು ವರ್ಗಗಳು : ಶಿಕ್ಷಣ ಮತ್ತು ಪ್ರತಿಭೆಯನ್ನು ಆಧರಿಸಿ ವಲಸಿಗರನ್ನು...Kannada News Portal