ಬೆಂಗಳೂರು:  ಕರ್ನಾಟಕ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಮತ್ತೊಂದು ಐಟಿ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್‌ ಕೆ ಪಾಟೀಲ್‌ ಅವರ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಗುರಣ್ಣ ಬಳಗಾನೂರ್ ಮತ್ತು ರಂಗನಗೌಡ ಓದುಗೌಡರ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ಗುರಣ್ಣ ಬಳಗಾನೂರು ಸಚಿವ ಹೆಚ್‌ ಕೆ ಪಾಟೀಲ್‌ರ ಪರಮಾಪ್ತರು ಹಾಗೂ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ.

ಈ ಇಬ್ಬರು ಮುಖಂಡರ ನಿವಾಸಗಳ ಮೇಲೆ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಳಸಾಪುರ ರಸ್ತೆಯಲ್ಲಿರುವ ಬಳಗಾನೂರ್‌ ಅವರ ನಿವಾಸ ಮತ್ತು ಕೇಶವ ನಗರದಲ್ಲಿರುವ ಓದುಗೌಡರ್‌ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಐಟಿ ಅಧಿಕಾರಿಗಳಿಗೆ ಅಬಕಾರಿ ಮತ್ತು ಪೊಲೀಸ್‌ ಅಧಿಕಾರಿಗಳು ಸಾತ್‌ ನೀಡಿದ್ದಾರೆ.

ಈ ಇಬ್ಬರು ನಾಯಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮನ್ಸ್‌ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ  ಹಾಜರಾಗದೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಬಳಗಾನೂರ್‌ ಮತ್ತು ಓದುಗೌಡರ್‌ ಅವರಿಗೆ ಇಂದು ಶಾಕ್‌ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/05/patil-1.jpghttp://bp9news.com/wp-content/uploads/2018/05/patil-1-150x150.jpgBP9 Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡIT attack on HK Patil operators - summons by officials  ಬೆಂಗಳೂರು:  ಕರ್ನಾಟಕ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಮತ್ತೊಂದು ಐಟಿ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್‌ ಕೆ ಪಾಟೀಲ್‌ ಅವರ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಗುರಣ್ಣ ಬಳಗಾನೂರ್ ಮತ್ತು ರಂಗನಗೌಡ ಓದುಗೌಡರ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ಗುರಣ್ಣ ಬಳಗಾನೂರು ಸಚಿವ ಹೆಚ್‌ ಕೆ ಪಾಟೀಲ್‌ರ ಪರಮಾಪ್ತರು ಹಾಗೂ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ. ಈ ಇಬ್ಬರು...Kannada News Portal