ಬೆಂಗಳೂರು : ರಾಜ್ಯದ ರೋಚಕ ರಣಾಂಗಣ ಮೊಳಕಾಲ್ಮೂರು ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂಬ ಮಾತುಗಳು ಇದೀಗ ಸತ್ಯವಾಗಿದೆ. ಸಿಎಂ ಮತ್ತು ರಾಮುಲು ಈ ಕ್ಷೇತ್ರದ ರಣಕಲಿಗಳಾಗಿದ್ದು, ಇಬ್ಬರು ತಮ್ಮ ತಮ್ಮ ಪ್ರತಿಷ್ಟೆಗಳನ್ನು ಪಣಹೊಡ್ಡಿ ಈ ಕ್ಷೇತ್ರದ ರಣತಂತ್ರ ರೂಪಿಸುತ್ತಿದ್ದಾರೆ.

ಇನ್ನು ಇಂದು ಬೆಳಗಿನಜಾವ ಐಟಿ ಅಧಿಕಾರಿಗಳು ನಡೆಸಿರುವ ಭರ್ಜರಿ ಕಾರ್ಯಾಚರಣೆಯಲ್ಲಿ 2 ಕೋಟಿ‌ 17 ಲಕ್ಷ 38 ಸಾವಿರ ರೂ.ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶದದಿಂದ ಮೊಳಕಾಲ್ಮೂರಿಗೆ ಮತದಾದರರಿಗೆ ಹಂಚಲು ತರುತ್ತಿದ್ದ ಹಣ ಇದಾಗಿತ್ತು ಎಂದು ತಿಳೀದು ಬಂದಿದ್ದು, ಜಿಲ್ಲೆ ಗಡಿಭಾಗದ ರಾಯದುರ್ಗದ ಹತ್ತಿರ ಯದ್ದಲಬೊಬ್ಬನಹಟ್ಟಿ ಗ್ರಾಮದ ಬಳಿ ಪಕ್ಕಾ ಮಾಹಿತಿ ಮೇರೆಗೆ  ಸ್ಕಾರ್ಪಿಯೋ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಿದ ವೇಳೆ ಈ ಬಾರಿ ಮೊತ್ತದ ಹಣ ಪತ್ತೆಯಾಗಿದೆ.

ಸದ್ಯ ಹಣವನ್ನ ವಶಕ್ಕೆ ಪಡೆದು ಮೊಳಕಾಲ್ಮೂರು ಎಸ್ ಬಿ ಐ ಬ್ಯಾಂಕ್ ಗೆ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದು, ಬಿಜೆಪಿ ಅಭ್ಯರ್ಥಿಗೆ ಸೇರಿರುವ ಹಣ ಇದು ಎಂದು ಡ್ರೈವರ್ ತಿಳಿಸಿದ್ದಾನೆ ಎಂಬ ಮಾಹಿತಿ ದೊರೆಯುತ್ತಿದೆ. ಆದರೆ ಈ ಬಗ್ಗೆ ಚುನಾವಣಾ ಅಧಿಕಾರಿಗಳೇ ಈ ಅಕ್ರಮ ಹಣ ಸಾಗಾಣಿಕೆಯ ಮಾಲಿಕಯಾರು ಎಂಬುದನ್ನು ತಿಳಿಸಬೇಕಿದೆ.

Please follow and like us:
0
http://bp9news.com/wp-content/uploads/2018/05/monakalmuru-1.jpghttp://bp9news.com/wp-content/uploads/2018/05/monakalmuru-1-150x150.jpgPolitical Bureauಚಿತ್ರದುರ್ಗಪ್ರಮುಖರಾಜಕೀಯಬೆಂಗಳೂರು : ರಾಜ್ಯದ ರೋಚಕ ರಣಾಂಗಣ ಮೊಳಕಾಲ್ಮೂರು ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂಬ ಮಾತುಗಳು ಇದೀಗ ಸತ್ಯವಾಗಿದೆ. ಸಿಎಂ ಮತ್ತು ರಾಮುಲು ಈ ಕ್ಷೇತ್ರದ ರಣಕಲಿಗಳಾಗಿದ್ದು, ಇಬ್ಬರು ತಮ್ಮ ತಮ್ಮ ಪ್ರತಿಷ್ಟೆಗಳನ್ನು ಪಣಹೊಡ್ಡಿ ಈ ಕ್ಷೇತ್ರದ ರಣತಂತ್ರ ರೂಪಿಸುತ್ತಿದ್ದಾರೆ. ಇನ್ನು ಇಂದು ಬೆಳಗಿನಜಾವ ಐಟಿ ಅಧಿಕಾರಿಗಳು ನಡೆಸಿರುವ ಭರ್ಜರಿ ಕಾರ್ಯಾಚರಣೆಯಲ್ಲಿ 2 ಕೋಟಿ‌ 17 ಲಕ್ಷ 38 ಸಾವಿರ ರೂ.ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶದದಿಂದ ಮೊಳಕಾಲ್ಮೂರಿಗೆ ಮತದಾದರರಿಗೆ ಹಂಚಲು...Kannada News Portal