ವಿಮಾನಯಾನ ಜನ  ಸಾಮಾನ್ಯರಿಗೆ ಕಷ್ಟ. ಆದರೆ ವಿಮಾನ ಕಂಪನಿಗಳು ಪ್ರಯಾಣಿಕರನ್ನು ಸೆಳೆಯಲು ಹೊಸ ಹೊಸ ಆಫರ್​ಗಳನ್ನು ನೀಡುತ್ತಿವೆ. ಈಗ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಯೊಂದು ಬಂಪರ್​ ಆಫರ್​ ನೀಡ್ತಿದ್ದೆ. ಈ  ಪ್ಲ್ಯಾನ್​ ಅಡಿ  ಪ್ರಯಾಣಿಕರಿಗೆ ಕೇವಲ  13.500 ರುಪಾಯಿಗೆ  ದೆಹಲಿಯಿಂದ ನ್ಯೂಯಾರ್ಕ್​​ಗೆ ಹೋಗಬಹುದು. ಸಾಮಾನ್ಯವಾಗಿ ನವದೆಹಲಿಯಿಂದ ನ್ಯಾಯಾರ್ಕ್​​ಗೆ ತೆರಳಲು ಸುಮಾರು 50 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದ್ರೆ ಶೀಘ್ರದಲ್ಲಿಯೇ ಈ ಖರ್ಚು 13,500 ಕ್ಕಿಳಿಯಲಿದೆ. ಐಸ್ಲ್ಯಾಂಡ್ ನ ಬಜೆಟ್ ಏರ್ಲೈನ್ಸ್ ವಾವ್ ಈ ಆಫರ್ ನೀಡ್ತಿದೆ. ಶೀಘ್ರದಲ್ಲಿಯೇ ದೆಹಲಿ-ಉತ್ತರ ಅಮೆರಿಕಾ ಮಧ್ಯೆ ವಿಮಾನ ಹಾರಾಟ ಮಾಡಲಿದೆ. ಅದ್ರ ಪ್ರಯಾಣ ದರ 13,500 ರೂಪಾಯಿಯಿರಲಿದೆ ಎಂದು ಸಿಇಒ ಸ್ಕುಲಿ ಹೇಳಿದ್ದಾರೆ.

ದೆಹಲಿಯಿಂದ ಅಮೆರಿಕಾಕ್ಕೆ ಹೋಗಲು ಬೇರೆ ಮಾರ್ಗ ಬಳಸುತ್ತೇವೆ. ಅದರ ದೂರ ಕಡಿಮೆ ಇದೆ. ಹಾಗಾಗಿ ಖರ್ಚು ಕೂಡ ಕಡಿಮೆ ಬರಲಿದೆ ಎಂದಿದ್ದಾರೆ. ಸೀಟ್ ಹಾಗೂ ವಿಮಾನದಲ್ಲಿ ನೀಡುವ ವ್ಯವಸ್ಥೆ ಮೇಲೆ ಟಿಕೆಟ್ ದರದಲ್ಲಿ ಏರುಪೇರಾಗಲಿದೆ ಎಂದು ಸ್ಕುಲಿ ಹೇಳಿದ್ದಾರೆ. ಅತಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ನೀಡ್ತಿರುವ ಮೊದಲ ವಿಮಾನಯಾನ ಕಂಪನಿ ನಮ್ಮದಾಗಲಿದೆ ಎಂದು ಸಿಇಒ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/05/01-odds-facts-about-flying-490305380-Peter_Horvath-380x254.jpghttp://bp9news.com/wp-content/uploads/2018/05/01-odds-facts-about-flying-490305380-Peter_Horvath-380x254-150x150.jpgBP9 Bureauರಾಷ್ಟ್ರೀಯವಿಮಾನಯಾನ ಜನ  ಸಾಮಾನ್ಯರಿಗೆ ಕಷ್ಟ. ಆದರೆ ವಿಮಾನ ಕಂಪನಿಗಳು ಪ್ರಯಾಣಿಕರನ್ನು ಸೆಳೆಯಲು ಹೊಸ ಹೊಸ ಆಫರ್​ಗಳನ್ನು ನೀಡುತ್ತಿವೆ. ಈಗ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಯೊಂದು ಬಂಪರ್​ ಆಫರ್​ ನೀಡ್ತಿದ್ದೆ. ಈ  ಪ್ಲ್ಯಾನ್​ ಅಡಿ  ಪ್ರಯಾಣಿಕರಿಗೆ ಕೇವಲ  13.500 ರುಪಾಯಿಗೆ  ದೆಹಲಿಯಿಂದ ನ್ಯೂಯಾರ್ಕ್​​ಗೆ ಹೋಗಬಹುದು. ಸಾಮಾನ್ಯವಾಗಿ ನವದೆಹಲಿಯಿಂದ ನ್ಯಾಯಾರ್ಕ್​​ಗೆ ತೆರಳಲು ಸುಮಾರು 50 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದ್ರೆ ಶೀಘ್ರದಲ್ಲಿಯೇ ಈ ಖರ್ಚು 13,500 ಕ್ಕಿಳಿಯಲಿದೆ. ಐಸ್ಲ್ಯಾಂಡ್ ನ ಬಜೆಟ್ ಏರ್ಲೈನ್ಸ್...Kannada News Portal