ಬೆಂಗಳೂರು : ನನಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹೊಟ್ಟೆಕಿಚ್ಚು. ಪ್ರಪಂಚದಲ್ಲಿ ಎಲ್ಲಾ  ರೋಗಕ್ಕೂ  ಮದ್ದಿದೆ ಆದರೆ ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಸಚಿವೆ ಡಾ.  ಜಯಮಾಲಾ ಅವರು ಲಕ್ಷ್ಮಿ ಹೆಬ್ಬಾಳ್ಕರ್​ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಚಿವೆ ಸ್ಥಾನ  ಹಂಚಿಕೆಯಾದಾಗಿನಿಂದಲೂ ಲಕ್ಷ್ಮಿ ಹೆಬ್ಬಾಳ್ಕರ್​ ಮತ್ತು  ಜಯಮಾಲ ನಡುವೆ ಶೀತಲ ಸಮರ  ನಡೆಯುತ್ತಲೇ ಇದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲ ಅವರು,  ನಾನು ಎಲ್ಲಾ ಹಂತದ ಸಾಧನೆಗಳನ್ನು ಮಾಡಿಯೇ ಈ ಹಂತಕ್ಕೆ ಬಂದಿದ್ದೇನೆ.  ಅವರ ಹೇಳಿಕೆ ಸರಿಯಿಲ್ಲ ಎಂದು  ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ​ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಪಕ್ಷದಲ್ಲಿ ಹೆಚ್ಚು ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದ ಜಯಮಾಲಾಗೆ ಈ ಬಾರಿ ಸಚಿವೆ ಸ್ಥಾನ ಸಿಕ್ಕಿದ  ಮೇಲೆ,  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​  ಜಯಮಾಲಾ ವಿರುದ್ಧ ಅಸಮಾಧಾನ   ವ್ಯಕ್ತಪಡಿಸಿದರು.

ನನಗೆ ಅನ್ಯಾಯವಾಗಿದೆ, ನನಗೆ ಸಚಿವೆ ಸ್ಥಾನ ನೀಡಲಿಲ್ಲ ಪಕ್ಷ, ನನ್ನ ಸಾಧನೆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಪಕ್ಷ , ಜಯಮಾಲಾ ಅವರನ್ನು ಸಚಿವೆಯನ್ನಾಗಿ ಮಾಡಿತು. ಬಹುಷಃ ಜಯಮಾಲಾ ಅವರ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿರಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್​ ಎಂದು  ಹೇಳಿದ್ದರು.ಈ  ಹೇಳಿಕೆಗೆ  ಜಯಮಾಲಾ ತೀವ್ರ  ವಿರೋಧ ವ್ಯಕ್ತಪಡಿಸಿದ್ದು ನಾನು ಕಷ್ಟಪಟ್ಟೇ ಈ ಸ್ಥಾನ ಗಿಟ್ಟಿಸಿಕೊಂಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/collage-23.jpghttp://bp9news.com/wp-content/uploads/2018/06/collage-23-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು : ನನಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹೊಟ್ಟೆಕಿಚ್ಚು. ಪ್ರಪಂಚದಲ್ಲಿ ಎಲ್ಲಾ  ರೋಗಕ್ಕೂ  ಮದ್ದಿದೆ ಆದರೆ ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಸಚಿವೆ ಡಾ.  ಜಯಮಾಲಾ ಅವರು ಲಕ್ಷ್ಮಿ ಹೆಬ್ಬಾಳ್ಕರ್​ ವಿರುದ್ಧ ತಿರುಗಿ ಬಿದ್ದಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಸಚಿವೆ ಸ್ಥಾನ ...Kannada News Portal