ಬೆಂಗಳೂರು : ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾತ್ರೋರಾತ್ರಿ ಜನಾರ್ಧನ ರೆಡ್ಡಿ ಮತ್ತೆ ಕಾಣಿಸಿಕೊಂಡಿದ್ದಾರೆ. ಬಿಜೆಪಿ ದೆಹಲಿ ನಾಯಕರು ಮಾಧ್ಯಮಗಳ ಮುಂದೆ ನೀಡುತ್ತಿದ್ದ ಹೇಳಿಕೆಯಿಂದ ಬೇಸರಗೊಂಡಿದ್ದ ರೆಡ್ಡಿ, ಕ್ಷೇತ್ರದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಜನಾರ್ಧನ ರೆಡ್ಡಿ ನೈಟ್ ಬೀಟ್ ಆರಂಭಿಸಿದ್ದಾರೆ.

ನಿನ್ನೆ ರಾತ್ರಿ ಜನಾರ್ಧನ ರೆಡ್ಡಿ ಗೆಳೆಯನ ಗೆಲುವಿಗಾಗಿ ಮೊಳಕಾಲ್ಮೂರು ಕ್ಷೇತ್ರದ ಹೋಬಳಿ ಒಂದರಲ್ಲಿ ರಾತ್ರಿ ವೇಳೆ ಸಂಘಟನೆ ಕಾರ್ಯ ಮಾಡುತ್ತಿದ್ದರು ಎಂಬ ವಿಚಾರ ತಿಳಿದು ಬಂದಿದೆ. ಅದೇನು ಬೆಳಿಗ್ಗೆ ಮಾಡದ ಸಂಘಟನೆ ಕಾರ್ಯ ರಾತ್ರಿ ವೇಳೆ ಎಂಬ ನೂರು ಅನುಮಾನಗಳು ಹುಟ್ಟುಕೊಂಡಿದ್ದು, ಮಾಧ್ಯಮಗಳಿಂದ ತಪ್ಪಿಸಿ ಕೊಳ್ಳಲು ಈ ದಾರಿ ಹುಡುಕಿದರೇ ರೆಡ್ಡಿ ಎಂಬ ಮಾತುಗಳೂ ಸಹ ಕೇಳಿಬಂದಿದೆ.

ಒಟ್ಟಾರೆ ಬಿಜೆಪಿ ಹೈಕಮಾಂಡ್ ಬಿಜೆಪಿಗೂ ರೆಡ್ಡಿಗೂ ಯಾವುದೇ ಸಂಬಂಧ ಇಲ್ಲ ಎಂದರೂ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ನಡುವಣ ಸಂಬಂಧವನ್ನು ಕೇಂದ್ರ ನಾಯಕರಿಂದ ತಡೆಯಲು ಸಾಧ್ಯವಾಗಿಲ್ಲ ಎಂಬುದೂ ಸಹ ಅಕ್ಷರಸಹ ಸತ್ಯ.

Please follow and like us:
0
http://bp9news.com/wp-content/uploads/2018/05/Gali-Janardhana-Reddy-Makes-A-Comeback-to-BJP-Politics.jpghttp://bp9news.com/wp-content/uploads/2018/05/Gali-Janardhana-Reddy-Makes-A-Comeback-to-BJP-Politics-150x150.jpgPolitical Bureauಚಿತ್ರದುರ್ಗಪ್ರಮುಖರಾಜಕೀಯಬೆಂಗಳೂರು : ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾತ್ರೋರಾತ್ರಿ ಜನಾರ್ಧನ ರೆಡ್ಡಿ ಮತ್ತೆ ಕಾಣಿಸಿಕೊಂಡಿದ್ದಾರೆ. ಬಿಜೆಪಿ ದೆಹಲಿ ನಾಯಕರು ಮಾಧ್ಯಮಗಳ ಮುಂದೆ ನೀಡುತ್ತಿದ್ದ ಹೇಳಿಕೆಯಿಂದ ಬೇಸರಗೊಂಡಿದ್ದ ರೆಡ್ಡಿ, ಕ್ಷೇತ್ರದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಜನಾರ್ಧನ ರೆಡ್ಡಿ ನೈಟ್ ಬೀಟ್ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಜನಾರ್ಧನ ರೆಡ್ಡಿ ಗೆಳೆಯನ ಗೆಲುವಿಗಾಗಿ ಮೊಳಕಾಲ್ಮೂರು ಕ್ಷೇತ್ರದ ಹೋಬಳಿ ಒಂದರಲ್ಲಿ ರಾತ್ರಿ ವೇಳೆ ಸಂಘಟನೆ ಕಾರ್ಯ ಮಾಡುತ್ತಿದ್ದರು ಎಂಬ ವಿಚಾರ ತಿಳಿದು ಬಂದಿದೆ. ಅದೇನು...Kannada News Portal