ಗೋಣಿಕೊಪ್ಪಲು : ಕೆಲಸ ಮುಗಿಸಿ ಮನೆಗೆ ತೆರೆಳುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಟಾಟ ಎಸ್ ವಾಹನದ ಮೇಲೆ  ಸಿಲ್ವರ್ ಮರ ಬಿದ್ದು ಕಾರ್ಮಿಕನೊರ್ವ ಸಾವನಪ್ಪಿದ್ದು, ಮೂರು ಜನರಿಗೆ ಗಂಭೀರ ಗಾಯಗಳಾದ ಘಟನೆ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ.

ಅನುಗೋಡು ನಿವಾಸಿ ರಾಜು (35) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಪಾಲಿಬೆಟ್ಟ ಹೊಸಳ್ಳಿ ಎಂಬ ಜಾಗದಲ್ಲಿ ತೋಟ ಕೆಲಸ ಮುಗಿಸಿ ಅನುಗೋಡುವಿನ ತಮ್ಮ ಊರಿಗೆ ಟಾಟ ಎಸ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಸಿಲ್ವರ್ ಮರ ಬಿದ್ದು, ಸಾವನಪ್ಪಿದ್ದಾನೆ. ವಾಹನದಲ್ಲಿ ಸುಮಾರು 13 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಸಮೀಪವೇ ಕುಳಿತಿದ್ದ ಈತನ ತಲೆಯ ಭಾಗಕ್ಕೆ ಮರ ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಭಾಗದಲ್ಲಿ ಕುಳಿತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರು ದುಬಾರೆ ಎಸ್ಟೇಟ್‍ನ ಕಾರ್ಮಿಕರಾಗಿದ್ದು, ಅನುಗೋಡು ನಿವಾಸಿಗಳಾಗಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-19-at-5.52.45-PM-1-1.jpeghttp://bp9news.com/wp-content/uploads/2018/06/WhatsApp-Image-2018-06-19-at-5.52.45-PM-1-1-150x150.jpegPolitical Bureauಪ್ರಮುಖರಾಜಕೀಯJawaharlu sent to Masani to fall into the tree !!! : The wage laborer who died in Titiyaಗೋಣಿಕೊಪ್ಪಲು : ಕೆಲಸ ಮುಗಿಸಿ ಮನೆಗೆ ತೆರೆಳುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಟಾಟ ಎಸ್ ವಾಹನದ ಮೇಲೆ  ಸಿಲ್ವರ್ ಮರ ಬಿದ್ದು ಕಾರ್ಮಿಕನೊರ್ವ ಸಾವನಪ್ಪಿದ್ದು, ಮೂರು ಜನರಿಗೆ ಗಂಭೀರ ಗಾಯಗಳಾದ ಘಟನೆ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ. ಅನುಗೋಡು ನಿವಾಸಿ ರಾಜು (35) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಪಾಲಿಬೆಟ್ಟ ಹೊಸಳ್ಳಿ ಎಂಬ ಜಾಗದಲ್ಲಿ ತೋಟ ಕೆಲಸ ಮುಗಿಸಿ ಅನುಗೋಡುವಿನ ತಮ್ಮ ಊರಿಗೆ ಟಾಟ ಎಸ್ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ...Kannada News Portal