ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾನೇ ಗೆಲ್ಲಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು, ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇನ್ನು ಇದೇ ಕ್ಷೇತ್ರದಿಂದ ಜೆಡಿಎಸ್​ನ ಪ್ರಭಾವಿ ನಾಯಕ ಜಿ.ಟಿ ದೇವೇಗೌಡರು ಸ್ಪರ್ಧಿಸುತ್ತಿರುವುದು, ಎಲ್ಲೋ ಸಿಎಂ ಅವರಿಗೆ ಸೋಲಿನ ಭಯವನ್ನುಂಟು ಮಾಡಿದೆ. ಇದೇ ಕಾರಣಕ್ಕೆ ಸಿಎಂ ದ್ವೇಷದ ರಾಜಕೀಯಕ್ಕೆ ಮುಂದಾಗಿದ್ದು, ಜಿ.ಟಿ ದೇವೇಗೌಡರ ಹಳೆಯ ಪ್ರಕರಣವನ್ನು ಎಸಿಬಿ ಗೆ ವರ್ಗಾಯಿಸುವಂತೆ ಆದೇಶಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಎಚ್​.ಡಿ.ಕುಮಾರಸ್ವಾಮಿ
ಎಚ್​.ಡಿ.ಕುಮಾರಸ್ವಾಮಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್​ಡಿಕೆ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೆಡಿಎಸ್​ ವತಿಯಿಂದ ಕುಮಾರ ಪರ್ವ ಕಾರ್ಯಕ್ರಮ ನಡೆದಿತ್ತು. ಅಪಾರ ಜನರು ಕುಮಾರ ಪರ್ವ ಜಾಥಾದಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡ ಸಿದ್ದರಾಮಯ್ಯನವರಿಗೆ ತಡೆಯಲಾಗುತ್ತಿಲ್ಲ. ಇನ್ನು ತಮ್ಮ ಸೋಲು ಖಚಿತ ಎಂದು ಹೀಗೆಲ್ಲ ದ್ವೇಷ ಕಾರುತ್ತಿದ್ದಾರೆ. ಹಳೆಯ ಪ್ರಕರಣಗಳನ್ನೆಲ್ಲವನ್ನು ಕೆದಕುತ್ತಿದ್ದಾರೆ. ತಮ್ಮ ಕಚೇರಿಯಲ್ಲಿ 7/11 ರಂದು ಸಭೆ ನಡೆಸಿ, ಪ್ರಕರಣವನ್ನು ಎಸಿಬಿಗೆ ವಹಿಸಿ ಎಂದು ಸಿಎಂ ಆದೇಶಿಸಿದ್ದಾರೆ. ಕುಮಾರ ಪರ್ವದ ಕಾರ್ಯಕ್ರಮವನ್ನು ಪದೇ ಪದೆ ಸಿಎಂ ವೀಕ್ಷಿಸಿದ್ದು, ಶತಪಥ ಹಾಕಿದ್ದಾರೆ. ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಜೆಡಿಎಸ್​ ಇದಕ್ಕೆಲ್ಲಾ ಹೆದರೋದಿಲ್ಲಾ. ಚುನಾವಣೆ ಹೊಸ್ತಿಲಲ್ಲಿ ಹಳೆಯ ಪ್ರಕರಣಗಳನ್ನು ಕೆದಕಿ, ಭಯ ತೋರಿಸುವ ಕೆಲಸಕ್ಕೆ ಸಿಎಂ ಮುಂದಾಗಿದ್ದಾರೆ ಎಂದು ಎಚ್​ಡಿಕೆ ಆರೋಪಿಸಿದ್ದಾರೆ.

Please follow and like us:
0
http://bp9news.com/wp-content/uploads/2017/12/08KUMARASWAMY01_0_0_0_0_0_0.jpghttp://bp9news.com/wp-content/uploads/2017/12/08KUMARASWAMY01_0_0_0_0_0_0-150x150.jpgBP9ಪ್ರಮುಖಬೆಂಗಳೂರುರಾಜಕೀಯbangalore,JDS head to Siddaramaiah's ACB dice: HD Kumaraswamyಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾನೇ ಗೆಲ್ಲಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು, ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇನ್ನು ಇದೇ ಕ್ಷೇತ್ರದಿಂದ ಜೆಡಿಎಸ್​ನ ಪ್ರಭಾವಿ ನಾಯಕ ಜಿ.ಟಿ ದೇವೇಗೌಡರು ಸ್ಪರ್ಧಿಸುತ್ತಿರುವುದು, ಎಲ್ಲೋ ಸಿಎಂ ಅವರಿಗೆ ಸೋಲಿನ ಭಯವನ್ನುಂಟು ಮಾಡಿದೆ. ಇದೇ ಕಾರಣಕ್ಕೆ ಸಿಎಂ ದ್ವೇಷದ ರಾಜಕೀಯಕ್ಕೆ ಮುಂದಾಗಿದ್ದು, ಜಿ.ಟಿ ದೇವೇಗೌಡರ ಹಳೆಯ ಪ್ರಕರಣವನ್ನು ಎಸಿಬಿ ಗೆ ವರ್ಗಾಯಿಸುವಂತೆ ಆದೇಶಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ...Kannada News Portal