ಬೆಂಗಳೂರು : ಪ್ರಾಂತಿಯ ಪಕ್ಷ ಜೆ.ಡಿ.ಎಸ್ ಈ ಚುನಾವಣೆಯಲ್ಲಿ 25 ಸೀಟ್ ಬರುವುದು ಕಷ್ಟ. ಬಿ.ಎಸ್.ಪಿ ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ಅವರ ಬಗ್ಗೆ ನನಗೆ ಗೌರವ ಇದೆ. ಆದರೇ ಕರ್ನಾಟಕದಲ್ಲಿ ಗೆಲ್ಲುವ ಶಕ್ತಿ ಇವರಿಗಿಲ್ಲ. ಹೀಗಾಗಿ ಬಿ.ಎಸ್.ಪಿಗೆ ಮತ ಹಾಕಿದರೆ ಬಿ.ಜೆ.ಪಿಗೆ ಅನುಕೂಲವಾಗುವುದರಿಂದ ಬಿ.ಎಸ್.ಪಿ ಅಭ್ಯರ್ಥಿ ಬದಲು ಕಾಂಗ್ರೇಸ್ ಅಭ್ಯರ್ಥಿಗೆ ಮತಹಾಕಿ ಎಂದು ಸಿಎಂ ಚಾಮರಾಜನಗರ ಕೊಳ್ಳೆಗಾಲ ಕಾರ್ಯಕರ್ತರ ಸಮಾವೇಶದಲ್ಲಿ ಹೇಳಿದ್ದಾರೆ.

ಇತ್ತ ಸಂಸದ ಆರ್.ಧೃವನಾರಯಾಣ ಮಾತನಾಡಿ, ನುಡಿದಂತೆ ನಮ್ಮ ಸರ್ಕಾರ ನಡೆದಿದೆ ನಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯನವರ 1280 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ರೈತರು ಸೊಸೈಟಿಯಲ್ಲಿ ಮಾಡಿದ್ದ ಸಾಲದಲ್ಲಿ 50 ಸಾವಿರವನ್ನು ಮನ್ನಾ ಮಾಡಿದೆ. 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಪಡೆಯುವಂತೆ ಮಾಡಿದೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಅನುದಾನವನ್ನು ಮೀಸಲಿಟ್ಟಿದ್ದಾರೆ. ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ರಾಜ್ಯದ ಪ್ರಗತಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.

ಕ್ಷೇತ್ರದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾನು ತೆಗೆದುಕೊಂಡ ರಾಜಕೀಯ ತೀರ್ಮಾನದಿಂದಾಗಿ ನಾನು 14 ವರ್ಷ ವನವಾಸ ಅನುಭವಿಸಿದ್ದೇನೆ. ನನ್ನ ವನವಾಸದಿಂದ ಮುಕ್ತಿಗೊಳ್ಳಲಲು ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಶಾಸಕ ಜಯಣ್ಣ ಮಾಜಿ ಶಾಸಕ ಎಸ್.ಬಾಲ್ರಾರಜ್, ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ವಸಂತಿ ಶಿವಣ್ಣ ಮುಖಂಡರುಗಳಾದ ಕಿನಕನಹಳ್ಳಿ ರಾಚಯ್ಯ, ಡಿಎನ್ ನಟರಾಜ್, ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷ ಯೋಗೇಶ್,ಸದಸ್ಯ ಸದಾಶಿವ ಮೂರ್ತಿ ಯೂತ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್ ಸೇರಿದಂತೆ ಇತರರು ಇದ್ದರು.

Please follow and like us:
0
http://bp9news.com/wp-content/uploads/2018/05/siddaramaiah-jds-1522894673.jpghttp://bp9news.com/wp-content/uploads/2018/05/siddaramaiah-jds-1522894673-150x150.jpgPolitical Bureauಚಾಮರಾಜನಗರಪ್ರಮುಖರಾಜಕೀಯJDS limited to 25 seats in state : CM Siddhu Uwachaಬೆಂಗಳೂರು : ಪ್ರಾಂತಿಯ ಪಕ್ಷ ಜೆ.ಡಿ.ಎಸ್ ಈ ಚುನಾವಣೆಯಲ್ಲಿ 25 ಸೀಟ್ ಬರುವುದು ಕಷ್ಟ. ಬಿ.ಎಸ್.ಪಿ ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ಅವರ ಬಗ್ಗೆ ನನಗೆ ಗೌರವ ಇದೆ. ಆದರೇ ಕರ್ನಾಟಕದಲ್ಲಿ ಗೆಲ್ಲುವ ಶಕ್ತಿ ಇವರಿಗಿಲ್ಲ. ಹೀಗಾಗಿ ಬಿ.ಎಸ್.ಪಿಗೆ ಮತ ಹಾಕಿದರೆ ಬಿ.ಜೆ.ಪಿಗೆ ಅನುಕೂಲವಾಗುವುದರಿಂದ ಬಿ.ಎಸ್.ಪಿ ಅಭ್ಯರ್ಥಿ ಬದಲು ಕಾಂಗ್ರೇಸ್ ಅಭ್ಯರ್ಥಿಗೆ ಮತಹಾಕಿ ಎಂದು ಸಿಎಂ ಚಾಮರಾಜನಗರ ಕೊಳ್ಳೆಗಾಲ ಕಾರ್ಯಕರ್ತರ ಸಮಾವೇಶದಲ್ಲಿ ಹೇಳಿದ್ದಾರೆ. ಇತ್ತ ಸಂಸದ ಆರ್.ಧೃವನಾರಯಾಣ ಮಾತನಾಡಿ, ನುಡಿದಂತೆ ನಮ್ಮ...Kannada News Portal