ಬೆಂಗಳೂರು: ಮಳೆಗಾಲಕ್ಕೆ ಜಿಯೋ ತನ್ನ ಗ್ರಾಹಕರಿಗೆ ಧಮಾಖ ಆಫರ್ ನೀಡಿದೆ. ಈಗಿರುವುದಕ್ಕಿಂತ ದುಪ್ಪಟ್ಟು ದೇಟಾ ನೀಡಲು ಜಿಯೋ ಮುಂದಾಗಿದೆ. ಜೊತೆಗೆ 399ರ ಪ್ಲಾನ್ ಮೇಲೆ 100 ರೂ. ರೀಯಾಯಿತಿಯನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಯಾವುದೇ ಡೇಲಿ-ರಿಕರಿಂಗ್ ಡೇಟಾ ಪ್ಯಾಕ್‌ನೊಡನೆ ರೀಚಾರ್ಜ್ ಮಾಡುವ ತನ್ನ ಎಲ್ಲಾ ಗ್ರಾಹಕರಿಗೂ ಜಿಯೋ ಪ್ರತಿ ದಿನ 1.5 ಜಿಬಿ ಹೆಚ್ಚುವರಿ 4ಜಿ ಡೇಟಾ ನೀಡಲಿದೆ.

ಪ್ಲಾನ್ ವಿವರ

ಪ್ರತಿದಿನ 1.5 ಜಿಬಿ ಡೇಟಾ ಪ್ಯಾಕ್ ಬಳಕೆದಾರರು – ರೂ. 149, ರೂ. 349, ರೂ. 399 ಹಾಗೂ ರೂ. 449 ಪ್ಲಾನುಗಳಲ್ಲಿ ಇದೀಗ ಪ್ರತಿದಿನ 3 ಜಿಬಿ ಡೇಟಾ ಪಡೆಯಲಿದ್ದಾರೆ.

ಪ್ರತಿದಿನ 2 ಜಿಬಿ ಡೇಟಾ ಪ್ಯಾಕ್ ಬಳಕೆದಾರರು – ರೂ. 198, ರೂ. 398, ರೂ. 448 ಹಾಗೂ ರೂ. 498 ಪ್ಲಾನುಗಳಲ್ಲಿ ಇದೀಗ ಪ್ರತಿದಿನ 3.5 ಜಿಬಿ ಡೇಟಾ ಪಡೆಯಲಿದ್ದಾರೆ.  ಪ್ರತಿದಿನ 3 ಜಿಬಿ ಡೇಟಾ ಪ್ಯಾಕ್ ಬಳಕೆದಾರರು – ರೂ. 299 ಪ್ಲಾನಿನಲ್ಲಿ ಇದೀಗ ಪ್ರತಿದಿನ 4.5 ಜಿಬಿ ಡೇಟಾ ಪಡೆಯಲಿದ್ದಾರೆ.

ಪ್ರತಿದಿನ 4 ಜಿಬಿ ಡೇಟಾ ಪ್ಯಾಕ್ ಬಳಕೆದಾರರು – ರೂ. 509 ಪ್ಲಾನಿನಲ್ಲಿ ಇದೀಗ ಪ್ರತಿದಿನ 5.5 ಜಿಬಿ ಡೇಟಾ ಪಡೆಯಲಿದ್ದಾರೆ. ಪ್ರತಿದಿನ 5 ಜಿಬಿ ಡೇಟಾ ಪ್ಯಾಕ್ ಬಳಕೆದಾರರು – ರೂ. 799 ಪ್ಲಾನಿನಲ್ಲಿ ಇದೀಗ ಪ್ರತಿದಿನ 6.5 ಜಿಬಿ ಡೇಟಾ ಪಡೆಯಲಿದ್ದಾರೆ.

ಇಷ್ಟೇ ಅಲ್ಲದೆ, ಮೈಜಿಯೋ ಆಪ್ಲಿಕೇಶನ್ ಬಳಸಿ ಫೋನ್‌ಪೇ ಮೂಲಕ ಪಾವತಿಸಲಾದ ರೂ. 300 ಮೇಲ್ಪಟ್ಟ ಎಲ್ಲಾ ರೀಚಾರ್ಜ್‌ಗಳಿಗೆ ರೂ. 100 ರಿಯಾಯಿತಿಯನ್ನೂ ರೂ. 300ವರೆಗಿನ ರೀಚಾರ್ಜ್‌ಗಳಿಗೆ 20% ರಿಯಾಯಿತಿಯನ್ನೂ ಜಿಯೋ ನೀಡುತ್ತಿದೆ. ಈ ಹೆಚ್ಚುವರಿ ಡೇಟಾ ಕೊಡುಗೆಯು ಜೂನ್ 12ರ ಸಂಜೆ 4 ಗಂಟೆಯ ನಂತರ ಪ್ರಾರಂಭವಾಗಿ ಜೂನ್ 30, 2018ರವರೆಗೆ ಲಭ್ಯವಿರಲಿದೆ ಎಂದು ಜಿಯೋ ತಿಳಿಸಿದೆ.

Please follow and like us:
0
http://bp9news.com/wp-content/uploads/2018/06/jio1_559_123116023503.jpghttp://bp9news.com/wp-content/uploads/2018/06/jio1_559_123116023503.jpgBP9 Bureauಪ್ರಮುಖಬೆಂಗಳೂರು: ಮಳೆಗಾಲಕ್ಕೆ ಜಿಯೋ ತನ್ನ ಗ್ರಾಹಕರಿಗೆ ಧಮಾಖ ಆಫರ್ ನೀಡಿದೆ. ಈಗಿರುವುದಕ್ಕಿಂತ ದುಪ್ಪಟ್ಟು ದೇಟಾ ನೀಡಲು ಜಿಯೋ ಮುಂದಾಗಿದೆ. ಜೊತೆಗೆ 399ರ ಪ್ಲಾನ್ ಮೇಲೆ 100 ರೂ. ರೀಯಾಯಿತಿಯನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಯಾವುದೇ ಡೇಲಿ-ರಿಕರಿಂಗ್ ಡೇಟಾ ಪ್ಯಾಕ್‌ನೊಡನೆ ರೀಚಾರ್ಜ್ ಮಾಡುವ ತನ್ನ ಎಲ್ಲಾ ಗ್ರಾಹಕರಿಗೂ ಜಿಯೋ ಪ್ರತಿ ದಿನ 1.5 ಜಿಬಿ ಹೆಚ್ಚುವರಿ 4ಜಿ ಡೇಟಾ ನೀಡಲಿದೆ. var domain = (window.location != window.parent.location)? document.referrer :...Kannada News Portal