ಕೊಪ್ಪಳದ ಜೂನಿಯರ್​ ಎಸ್​ ಜಾನಕಿ ಯರನ್ನ ನೀವ್​ ನೋಡಿದ್ದೀರಾ. ಅಥವಾ ಅವರ ಸಾಂಗ್​ ಏನಾದ್ರೂ ಕೇಳಿದ್ದೀರಾ..ಕೇಳಿಲ್ಲಾ ಅಂದ್ರೆ ನೀವು ಒಂದು ಅದ್ಭುತ ಕಂಠ ಮಿಸ್​ ಮಾಡ್ಕೊಂಡಿದ್ದೀರಾ.

ನಿನ್ನೆ-ಮೊನ್ನೆಯೆಲ್ಲಾ ಫೇಸ್​ಬುಕ್​ನಲ್ಲಿ ಜೂನಿಯರ್​ ಎಸ್​ ಜಾನಕಿ ಅಂತಾ ಟ್ರೆಂಡ್​ ಆಗಿದ್ದ ಗಂಗಮ್ಮನವರ ಮತ್ತೊಂದು ಸಾಂಗ್​ ಸಿಕ್ಕಾಪಟ್ಟೆ ಲೈಕ್ಸ್​ಗಿಟ್ಟಿಸಿಕೊಂಡಿದೆ.  ಅವರು ಸೋಶಿಯಲ್​ ಮಿಡಿಯಾಕ್ಕೆ ಇಷ್ಟು ಚಿರಪರಚಿತರಾಗೋಕೆ ಕಾರಣ ಅವರ ಹಾಡಿದ ಸತ್ಯಂ ಶಿವಂ ಸುಂದರಂ ಎಂಬ ಹಿಂದಿಯ ಹಾಡು.

ಬರೇ ಹಾಡನ್ನು ಕೇಳಿ ಎಸ್​ ಜಾನಕಿಯಮ್ಮ ಹಾಡಿದ್ದಾರೆ ಎಂದು ಅನ್ಕೊಂಡ್ರೆ ನೋ, ನೆವೆರ್​..ಅದನ್ನ ಹಾಡಿರೋದು ಒಬ್ಬ ಸಾಧಾರಣ ಹಳ್ಳಿಯಲ್ಲಿ ಕೆಲಸಮಾಡುವ ಕೂಲಿ ಕಾರ್ಮಿಕ ಮಹಿಳೆ. ಇವರ ಕೋಗಿಲೆ ಯಂತಹ ಕಂಠಕ್ಕೆ ಮಾರು ಹೋದ ಸ್ವತಃ ಎಸ್​ ಜಾನಕಿಯವರೇ , ಗಂಗಮ್ಮ ಜೂನಿಯರ್​ ಜಾನಕಿ ಅಂತಾ ಕೊಂಡಾಡಿದ್ದಾರೆ. ಅಂದಹಾಗೇ ಎಸ್​ ಜಾನಕಿ ಕೊಪ್ಪಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭ ಆಕೇಸ್ಟ್ರಾದಲ್ಲಿ ಹಾಡುತ್ತಿದ್ದ ಗಂಗಮ್ಮನವರನ್ನು ಹಾಡು ಕೇಳಿ ಬೆಕ್ಕಸ ಬೆರಗಾದರಂತೆ ಗಾನ ಕೋಗಿಲೆ.

ಈಗ ಇವರ ಕಂಠ ಸಿರಿಯಲ್ಲಿ ಎರಡು ಕನಸು ಸಿನಿಮಾದ ಕನ್ನಡದ ಮೋಸ್ಟ್​ ಫೇವರೀಟ್​ ಸಾಂಗ್ ​  ‘‘ತಮ್​ನಮ್​ ತಮ್​ನಮ್​ ಮನಸು ಮಿಡಿಯುತಿದೆ’’ ಎಂಬ ಹಾಡು ವೈರಲ್​ ಆಗಿದೆ. ಫೇಸ್​ಬುಕ್​ಗೆ ಪೋಸ್ಟ್​ ಮಾಡಿದ ಹದಿನಾಲ್ಕು ಗಂಟೆಯಲ್ಲೇ ಮೂರುಲಕ್ಷಕ್ಕೂ ಅಧಿಕ ವೀವ್ಸ್​ ಆಗಿದೆ.

 

Please follow and like us:
0
http://bp9news.com/wp-content/uploads/2018/07/Karnatakada-Miditha-41.jpeghttp://bp9news.com/wp-content/uploads/2018/07/Karnatakada-Miditha-41-150x150.jpegBP9 Bureauಟೈಮ್ ಪಾಸ್ಸಾಧಕರುಸಿನಿಮಾಕೊಪ್ಪಳದ ಜೂನಿಯರ್​ ಎಸ್​ ಜಾನಕಿ ಯರನ್ನ ನೀವ್​ ನೋಡಿದ್ದೀರಾ. ಅಥವಾ ಅವರ ಸಾಂಗ್​ ಏನಾದ್ರೂ ಕೇಳಿದ್ದೀರಾ..ಕೇಳಿಲ್ಲಾ ಅಂದ್ರೆ ನೀವು ಒಂದು ಅದ್ಭುತ ಕಂಠ ಮಿಸ್​ ಮಾಡ್ಕೊಂಡಿದ್ದೀರಾ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180719112831'); document.getElementById('div_1520180719112831').appendChild(scpt); ನಿನ್ನೆ-ಮೊನ್ನೆಯೆಲ್ಲಾ ಫೇಸ್​ಬುಕ್​ನಲ್ಲಿ ಜೂನಿಯರ್​ ಎಸ್​ ಜಾನಕಿ ಅಂತಾ ಟ್ರೆಂಡ್​...Kannada News Portal