ಬೆಂಗಳೂರು : ಕನಕಪುರ ತಾಲಿಬಾನ್ ಹಾಗೂ ಜಮ್ಮು ಕಾಶ್ಮೀರದಂತಾಗಿದ್ದು ಡಿ.ಕೆ.ಸಹೋದರರ ಕಪಿಮುಷ್ಠಿಯಲ್ಲಿದೆ. ನಾನು ಡಿಕೆಶಿ ಸ್ವಗ್ರಾಮ ದೊಡ್ಡಾಲಹನಹಳ್ಳಿಗೆ ಪಕ್ಷದ ಪ್ರಚಾರದ ಸಲುವಾಗಿ ಹೋಗಿದ್ದೆ, ಅಲ್ಲಿಗೆ ನಾನು ಹೋದ ವೇಳೆಯಲ್ಲಿ ಕೆಲವರು ನೀವುವೋಟು ಕೇಳಿಕೊಂಡು ಹೋಗಬೇಕು ಅಷ್ಟೇ. ಬೇರೆ ಮಾತನಾಡಬಾರದು ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಕನಕಪುರ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಆ ಗ್ರಾಮದ ಜನರಿಗೆ ನಮಗೆ ವೋಟಾಕ ಬೇಕು ಎಂದು ಡಿಕೆಶಿ ಮತ್ತು ಅವರ ತಮ್ಮ ಬೆದರಿಸಿ ಆದೇಶಿಸಿದ್ದಾರೆ. ನಮಗೇ ಮತ ಹಾಕಬೇಕು ಎಂಬ ಅವರ ಧೋರಣೆ ಸರಿಯಲ್ಲ. ಅವರ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರಿಗೂ ಇಲ್ಲ. ನಾವೇನೂ ಕನಕಪುರವನ್ನು ಅವರಿಗೆ ಬರೆದುಕೊಟ್ಟಿದ್ದೇವಾ ಎಂದು ಪ್ರಶ್ನಿಸಿದ್ದಾರೆ.

ಕನಕಪುರ ತಾಲಿಬಾನ್ ಹಾಗೂ ಜಮ್ಮು ಕಾಶ್ಮೀರದಂತಾಗಿದ್ದು ಡಿ.ಕೆ.ಸಹೋದರರ ಕಪಿಮುಷ್ಠಿಯಲ್ಲಿದೆ. ಡಿಕೆಶಿ ಬೆಂಬಲಿಗರ ಬೆದರಿಕೆಗೆಲ್ಲ ನಾವು ಜಗ್ಗೋದಿಲ್ಲ. 25 ವರ್ಷಗಳಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದುಹೋಗಿದೆ ಎಂದು ಆರೋಪಿಸಿದ ಅವರು ನಾನು ಡಿಕೆಶಿ ವಿರುದ್ಧ ತೀವ್ರ ಸ್ಪರ್ಧೆಯನ್ನು ನೀಡೇ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/dks-1.jpghttp://bp9news.com/wp-content/uploads/2018/05/dks-1-150x150.jpgPolitical Bureauಪ್ರಮುಖರಾಜಕೀಯರಾಯಚೂರುKanakapura Taliban - Like Jammu and Kashmir; DK Sadr's hatred !!!ಬೆಂಗಳೂರು : ಕನಕಪುರ ತಾಲಿಬಾನ್ ಹಾಗೂ ಜಮ್ಮು ಕಾಶ್ಮೀರದಂತಾಗಿದ್ದು ಡಿ.ಕೆ.ಸಹೋದರರ ಕಪಿಮುಷ್ಠಿಯಲ್ಲಿದೆ. ನಾನು ಡಿಕೆಶಿ ಸ್ವಗ್ರಾಮ ದೊಡ್ಡಾಲಹನಹಳ್ಳಿಗೆ ಪಕ್ಷದ ಪ್ರಚಾರದ ಸಲುವಾಗಿ ಹೋಗಿದ್ದೆ, ಅಲ್ಲಿಗೆ ನಾನು ಹೋದ ವೇಳೆಯಲ್ಲಿ ಕೆಲವರು ನೀವುವೋಟು ಕೇಳಿಕೊಂಡು ಹೋಗಬೇಕು ಅಷ್ಟೇ. ಬೇರೆ ಮಾತನಾಡಬಾರದು ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಕನಕಪುರ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಆ ಗ್ರಾಮದ ಜನರಿಗೆ ನಮಗೆ ವೋಟಾಕ ಬೇಕು ಎಂದು ಡಿಕೆಶಿ ಮತ್ತು...Kannada News Portal