ಬೆಂಗಳೂರು: ಕೊಡಗು, ಮಡಿಕೇರಿ ಸೇರಿದಂತೆ ಕೇರಳದಲ್ಲಿ ನಿರಂತರವಾಗಿ  ಸುರಿಯುತ್ತಿರುವ  ಮಳೆಯಿಂದಾಗಿ
ಕಬಿನಿ ಜಲಾಶಯವು ಹೊಸ ದಾಖಲೆ  ಬರೆದಿದೆ. ಕಳೆದ ತಿಂಗಳಿಂದ ಬಿಟ್ಟು ಬಿಡದೆ ಮಳೆ ಬರುತ್ತಿದ್ದು ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಇತ್ತ ಕಬಿನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು ಇದರಿಂದಾಗಿ ಒಳ ಹರಿವು ಹೆಚ್ಚಾಗಿದೆ. ಜೂನ್ ಎರಡನೇ ವಾರದಲ್ಲಿಯೇ ಕಬನಿ ಜಲಾಶಯ ಭರ್ತಿಯಾಗಿದೆ. ರಾಜ್ಯದಲ್ಲಿ ಈ ಬಾರಿ ಮೊದಲು ಭರ್ತೀಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಬಿನಿ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನ ಕಪಿಲಾ ನದಿಗೆ ಹರಿಸುತ್ತಿರುವದರಿಂದ ನದಿ ತೀರದಲ್ಲಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಸಂಗಮ ಕ್ಷೇತ್ರ ಭಾಗಶಃ ಜಲಾವೃತವಾಗಿದೆ. ಇಲ್ಲಿರುವ ಮಹದೇವ ತಾತಾ ಅವರ ಗದ್ದುಗೆಯವರೆಗೂ ನೀರು ಬಂದಿದ್ದು, ಅಪಾಯದ ಸ್ಥಿತಿ ಎದುರಾಗಿದೆ ಎಂದು ಇಲ್ಲಿನ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು 80,000 ಕ್ಯೂಸೆಕ್ಸ್ ಇದೆ. ಇದರಿಂದ ಈ ಜಲಾನಯನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ನಿರ್ಮಾಣವಾಗಿದೆ.

ಜಿಲ್ಲಾಡಳಿತ ಕೂಡಲೆ ಇತ್ತ ಗಮನ ಹರಿಸಬೇಕೆಂದು ಮಾದನಹಳ್ಳಿಯ ಸಂಗಮೇಶ್ ಹಾಗೂ ಭಕ್ತರು ಆಗ್ರಹಿಸಿದ್ದಾರೆ.

Please follow and like us:
0
http://bp9news.com/wp-content/uploads/2018/08/Karnatakada-Miditha-20.jpeghttp://bp9news.com/wp-content/uploads/2018/08/Karnatakada-Miditha-20-150x150.jpegBP9 Bureauಕೊಡಗುಪ್ರಮುಖಬಳ್ಳಾರಿಮೈಸೂರುರಾಜಕೀಯಬೆಂಗಳೂರು: ಕೊಡಗು, ಮಡಿಕೇರಿ ಸೇರಿದಂತೆ ಕೇರಳದಲ್ಲಿ ನಿರಂತರವಾಗಿ  ಸುರಿಯುತ್ತಿರುವ  ಮಳೆಯಿಂದಾಗಿ ಕಬಿನಿ ಜಲಾಶಯವು ಹೊಸ ದಾಖಲೆ  ಬರೆದಿದೆ. ಕಳೆದ ತಿಂಗಳಿಂದ ಬಿಟ್ಟು ಬಿಡದೆ ಮಳೆ ಬರುತ್ತಿದ್ದು ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.  ಇತ್ತ ಕಬಿನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು ಇದರಿಂದಾಗಿ ಒಳ ಹರಿವು ಹೆಚ್ಚಾಗಿದೆ. ಜೂನ್ ಎರಡನೇ ವಾರದಲ್ಲಿಯೇ ಕಬನಿ ಜಲಾಶಯ ಭರ್ತಿಯಾಗಿದೆ. ರಾಜ್ಯದಲ್ಲಿ ಈ ಬಾರಿ ಮೊದಲು ಭರ್ತೀಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಬಿನಿ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನ...Kannada News Portal