ಬೆಂಗಳೂರು :  ಜೇಷ್ಠ ಮಾಸದಲ್ಲಿ ಬರುವ ಹುಣ್ಣಿಮೆ ಅತ್ಯಂತ ವಿಶೇಷವಾದದ್ದು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜೇಷ್ಠ ಮಾಸದ ಈ ಹುಣ್ಣಿಮೆಯನ್ನು ಕಾರಹುಣ್ಣಿಮೆ ಎಂದು  ಕರೆದು ವಿಶೇಷವಾಗಿ ಆಚರಿಸುತ್ತಾರೆ. ಇದೇ ದಿನ ಮುತ್ತೈದೆಯರು ವಟ ಸಾವಿತ್ರಿ ವ್ರತವನ್ನು ಆಚರಿಸುವ ಪದ್ಧತಿ ಇದೆ.

ಕಾರ ಹುಣ್ಣಿಮೆ ಬಿಸಿಲ ಬೇಗೆಯನ್ನು ಹೋಗಲಾಡಿಸಿ ಮುಂಗಾರನ್ನು ಹೊತ್ತು ತರುವ ಹಬ್ಬ. ಮುಂಗಾರು ಬಿತ್ತನೆಗೆ ರೈತರು ಮುನ್ನುಡಿ ಬರೆಯುವ ಹಬ್ಬವಾಗಿದ್ದು, ರೈತಾಪಿ ವರ್ಗಕ್ಕೆ ಮುಂಗಾರು ಆರಂಭದ ಮೊದಲ ಹಬ್ಬ ಇದಾಗಿದೆ.ಇದಾದ ನಂತರ ಪ್ರತಿ ಅಮಾವಾಸ್ಯೆಗೊಂದು ಹಬ್ಬ ಆರಂಭವಾಗುತ್ತೆ.

ಬಿತ್ತನೆಗೆ ನೆಲವನ್ನು ಉತ್ತಿ  ಹದ ಮಾಡಿದ ಎತ್ತುಗಳಿಗೆ, ಕಾರಹುಣ್ಣಿಮೆ ದಿನ ವಿಶ್ರಾಂತಿ ಕೊಡಲಾಗುತ್ತೆ. ಅಲ್ಲದೆ ಅನ್ನದಾತನೊಂದಿಗೆ ದುಡಿಯುವ ಎತ್ತುಗಳಿಗೆ ಧನ್ಯವಾದ ಹೇಳಲು ಆಚರಿಸುವ ಈ ಹಬ್ಬ ಅತ್ಯಂತ ವಿಶಿಷ್ಟವಾಗಿರುತ್ತದೆ.

ಕಾರ ಹುಣ್ಣಿಮೆಯಂದು ಪ್ರತಿ ಹಳ್ಳಿಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಬಾಸಿಂಗ, ಜತ್ತಿಗೆ, ಹಗ್ಗ, ಬಾರಕೋಲು, ಕೊಬ್ಬರಿ, ಗೊಂಡೆ, ಗಾಜುಮಣಿ, ಮಿಂಚು ಸೇರಿದಂತೆ ವಿವಿಧ ಬಣ್ಣಗಳಿಂದ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಈ ರೀತಿ ಶೃಂಗರಿಸಿದ ಎತ್ತುಗಳಿಗೆ ಓಟದ ಸ್ಪರ್ಧೆ ಕೂಡಾ ಏರ್ಪಡಿಸಲಾಗುತ್ತೆ.

ಜೇಷ್ಠಮಾಸದ ಋತು ಬದಲಾವಣೆಯ ಕಾಲದಲ್ಲಿ  ಎತ್ತಿನ ಓಟ ಏರ್ಪಡಿಸುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ.ಈ ಓಟದ ಸ್ಪರ್ಧೆಯಿಂದ ಎತ್ತುಗಳಿಗೆ ವ್ಯಾಯಾಮ ನೀಡಿ ಶರೀರವನ್ನು ಹುರಿದುಂಬಿಸುತ್ತದೆ. ಈ ಸಂದರ್ಭದಲ್ಲಿ ಎತ್ತುಗಳ ಬಲವರ್ಧನೆಗಾಗಿ ಔಷಧಯುಕ್ತ ಪೇಯವನ್ನು ಘೊಟ್ಟದ ಮೂಲಕ ಕುಡಿಸಲಾಗುತ್ತೆ ಇದರಿಂದ ಎತ್ತುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಲಿದೆ.

ಹಾಗೆ ರೈತರಿಗೂ ಕಾರಹುಣ್ಣಿಮೆ ಹಬ್ಬದ ಆಚರಣೆ ಮನಕ್ಕೆ ಮುದ ಕೊಡುತ್ತೆ. ಈ ದಿನ ಹೋಳಿಗೆ, ಪಾಯಸ ಖಾದ್ಯಗಳನ್ನು ಮಾಡಿ ಜೋಡೆತ್ತುಗಳಿಗೆ ಪೂಜಿಸಿ ನೈವೇದ್ಯ ಸಮರ್ಪಣೆ ಮಾಡುತ್ತಾರೆ. ಇದೆಲ್ಲವೂ ಜೋಡಿ ನಂದಿಗೆ ಕೃತಜ್ಞರಾಗಿರುವ ಪರಿ. ಈ ದಿನ ಕುಟುಂಬದ ಸದಸ್ಯರೆಲ್ಲ ಜೊತೆಗೂಡಿ ಊಟ ಸವಿಯುವ ಸಂಪ್ರದಾಯ ಅನಾದಿ ಕಾಲದಿಂದ ರೈತರಲ್ಲಿ ನಡೆದು ಬಂದಿದೆ.

ಒಟ್ಟಿನಲ್ಲಿ ಅನ್ನ ನೀಡುವ ಭೂಮಿ ತಾಯಿಯನ್ನು  ಪೂಜಿಸಿ,  ಎತ್ತುಗಳಿಗೆ  ವಂದಿಸುವ  ವಿಶಿಷ್ಠ ದಿನ ಇದಾಗಿದ್ದು, ಉತ್ತರಕರ್ನಾಟಕದ ಭಾಗದಲ್ಲಿ ಸಡಗರ ಸಂಭ್ರದಿಂದ ಆಚರಿಸಿ ಸಂತೋಷ ಪಡುತ್ತಾರೆ.ಇನ್ನು ಈ ಸಲದ ಕಾರ ಹುಣ್ಣಿಮೆ ಇಂದು(27-06-2017) ಮತ್ತು ನಾಳೆ(28-06-2017) ನಡೆಯಲಿದ್ದು, ರೈತರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

 

Please follow and like us:
0
http://bp9news.com/wp-content/uploads/2018/06/14-kampl2i.jpghttp://bp9news.com/wp-content/uploads/2018/06/14-kampl2i-150x150.jpgBP9 Bureauಅಂಕಣಆಧ್ಯಾತ್ಮಪ್ರಮುಖಹುಬ್ಬಳ್ಳಿ-ಧಾರವಾಡಬೆಂಗಳೂರು :  ಜೇಷ್ಠ ಮಾಸದಲ್ಲಿ ಬರುವ ಹುಣ್ಣಿಮೆ ಅತ್ಯಂತ ವಿಶೇಷವಾದದ್ದು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜೇಷ್ಠ ಮಾಸದ ಈ ಹುಣ್ಣಿಮೆಯನ್ನು ಕಾರಹುಣ್ಣಿಮೆ ಎಂದು  ಕರೆದು ವಿಶೇಷವಾಗಿ ಆಚರಿಸುತ್ತಾರೆ. ಇದೇ ದಿನ ಮುತ್ತೈದೆಯರು ವಟ ಸಾವಿತ್ರಿ ವ್ರತವನ್ನು ಆಚರಿಸುವ ಪದ್ಧತಿ ಇದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180622093403'); document.getElementById('div_1520180622093403').appendChild(scpt); ಕಾರ ಹುಣ್ಣಿಮೆ ಬಿಸಿಲ ಬೇಗೆಯನ್ನು...Kannada News Portal